ಬೆಳಗಾವಿ ಜಿಲ್ಲೆ ಗೋಕಾಕ ತಾಲ್ಲೂಕಿನ ಮಾಯಕ್ಕ ಹುಟ್ಟಿನಿಂದಲೇ ವಿಶೇಷ ಚೇತನ ಮಹಿಳೆ. ಓದು, ಬರಹವೂ ಇಲ್ಲ.. ಎರಡು ಮಕ್ಕಳ ತಾಯಿ ಮಾಯಕ್ಕನನ್ನು ಪತಿ ತೊರೆದಾಗ ತೆವಳಿಕೊಂಡೇ ಅರ್ಧ ಮೈಲು ದೂರ ತೆರಳಿ ಕಸ-ಮುಸುರೆ ಮಾಡಿ ಹೊಟ್ಟೆ ಹೊರೆಯುವ ಅನಿವಾರ್ಯತೆ ಎದುರಾಯಿತು. ಸಂಕಷ್ಟದಿಂದ ಪಾರಾಗಲು ಮುಖ್ಯಮಂತ್ರಿ ಮನೆ ಬಾಗಿಲು ಬಡಿದಳು. ಅವಳ ಬವಣೆ ನೋಡಿದ ಮುಖ್ಯಮಂತ್ರಿಗಳು ಸ್ವ ಉದ್ಯೋಗ ಕೈಗೊಳ್ಳಲು 50 ಸಾವಿರ ರೂ. ಗಳ ನೆರವು ಒದಗಿಸಿದರು.

ಜೊತೆಗೆ ಮಕ್ಕಳ ವಿದ್ಯಾಭ್ಯಾಸಕ್ಕೂ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದರು. ಈಕೆಗೆ ಪಡಿತರ ಚೀಟಿ, ಮತ್ತಿತರ ಪೂರಕ ಸೌಲಭ್ಯ ಒದಗಿಸುವಂತೆ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.ಚೆಕ್ ಪಡೆದು ಹೊರಬಂದ ಮಾಯಕ್ಕಳ ಮುಖದಲ್ಲಿ ವಿಶ್ವಾಸದ ನಗೆ. “ಕಿರಾಣಿ ಅಂಗಡಿ ಮಾಡ್ತೇನ್ರಿ” ಎನ್ನುವಾಗ ಕಣ್ಣಲ್ಲಿ ಮಿಂಚು ಕಾಣಿಸುತ್ತಿತ್ತು.

ನಾಡಿನ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಲು ಸಾಧ್ಯವೋ ಇಲ್ಲವೋ ಎಂಬ ಅನುಮಾನದಲ್ಲೇ ಬಂದಿದ್ದ ಮಾಯಕ್ಕನವರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಭೇಟಿ ನಿಜಕ್ಕೂ ಎಲ್ಲಿಲ್ಲದ ಸಂಭ್ರಮ ಉಂಟು ಮಾಡಿತ್ತು.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here