ಕಳೆದ ವಾರವಷ್ಟೇ ಒಂದು ವೀಡಿಯೋ ಮೂಲಕ ಕರ್ನಾಟಕದಾದ್ಯಂತ ಸುದ್ದಿಯಾಗಿದ್ದ ಕೊಡಗಿನ ಎಮ್ಮೆಮಾಡು ಗ್ರಾಮದ ಎಂಟನೇ ತರಗತಿಯ ಹುಡುಗ ಕಾಳೇರ ಫತಾಹ್. ಫತಾಹ್ ಮಾಡಿದ್ದ ಆ ಒಂದು ವೀಡಿಯೋ ರಾಜ್ಯಾದ್ಯಂತ ಫುಲ್ ವೈರಲ್ ಆಗಿತ್ತು.ಮಾಧ್ಯಮಗಳು ಸಹ ಫತಾಹ್ ಮಾಡಿದ ವೀಡಿಯೋ ಪ್ರಸಾರ ಮಾಡಿದ್ದ ಕಾರಣ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ಗಮನಕ್ಕೂ ಈ ಹುಡುಗ ಬಿದ್ದಿದ್ದ. ನಮ್ಮ  ಕೊಡಗು ಜಿಲ್ಲೆಯ ಕಾವೇರಿ ನದಿಯು ಮಂಡ್ಯ ,ಮೈಸೂರು, ಬೆಂಗಳೂರು ಸೇರಿದಂತೆ ಕರ್ನಾಟಕ ರಾಜ್ಯದ ಅರ್ಧಭಾಗಕ್ಕೆ ನೀರು ಕೊಡುತ್ತೇವೆ ಅಷ್ಟೇ ಮಾತ್ರವಲ್ಲದೇ ಮದ್ರಾಸ್ ಗೂ ಸಹ ಕೊಡಗಿನ ಕಾವೇರಿಯೇ ಬೇಕು.ಆದರೆ ಬಜೆಟ್ ನಲ್ಲಿ ಕೊಡಗಿಗೆ ಅನ್ಯಾಯವಾಗಿದೆ.ಕೊಡಗಿನ ಜನರಿಗೆ ನೀವು ನೆರವು ಕೊಡಬೇಕು ಎಂದು ಬಹಳ ಸಮಸ್ಯೆಗಳನ್ನು ಹೇಳುವ ಮೂಲಕ ಫತಾಹ್ ಮಾಡಿದ್ದ ವೀಡಿಯೋ ಫುಲ್ ವೈರಲ್ ಆಗಿತ್ತು‌.

ಈ ವೀಡಿಯೋ ಕುಮಾರಸ್ವಾಮಿ ಅವರು ಸಹ ನೋಡಿದ್ದರು‌.ಈ ಹುಎಉಗನ ವೀಡಿಯೋ ನೋಡಿದ ಬಳಿಕ ಎಚ್ಚೆತ್ತಿದ್ದ ಹೆಚ್ ಡಿ ಕುಮಾರಸ್ವಾಮಿ ಅವರು ನೆನ್ನೆ ಕೊಡಗಿನ ಹಾರಂಗಿ ಜಲಾಶಯ ಕ್ಕೆ ಭಾಗೀನ ಅರ್ಪಿಸಲು ಬಂದಿದ್ದರು‌.ಈ ಸಮಯದಲ್ಲಿ ವೀಡಿಯೋ ಹುಡುಗ ಫತಾಹ್ ನನ್ನು ಭೇಟಿ ಮಾಡಿ ಆತನಿಂದ ಕೊಡಗಿನ ಸಮಸ್ಯೆಗಳನ್ನು ಪತ್ರದ ಕೂಲಕ ಆಲಿಸಿದರು‌ ಜೊತೆಗೆ ಫತಾಹ್ ನ ಬಗ್ಗೆ ಕುಮಾರಸ್ವಾಮಿ ಅವರು ಮಾಹಿತಿ ತಿಳಿದರು.ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್ ಡಿ ಕುಮಾರಸ್ವಾಮಿ ಅವರು ನಾನು ಕೊಡಗಿಗೆ ಅನ್ಯಾಯ ಮಾಡುವುದಿಲ್ಲ.

ಇಲ್ಲಿನ ಸಮಸ್ಯೆಗಳನ್ನು ಕೇಳಿದ್ದೇನೆ ಕೊಡಗಿಗೆ ಸುಮಾರು 360 ಕೋಟಿ ಅನುದಾನ ಕೇಳಿದ್ದಾರೆ.ಅದರಂತೆ ಮೊದಲ ಹಂತವಾಗಿ ಕೊಡಗಿನ ಅಭಿವೃದ್ಧಿಗೆ 100 ಕೋಟಿ ಬಿಡುಗಡೆ ಮಾಡುತ್ತಿದ್ದೇನೆ ಎಂದು ಭರವಸೆ ನೀಡಿದರು.ಎಂಟನೇ ತರಗತ ಹುಡುಗ ಫತಾಹ್ ಮಾಡಿದ ಆ ಒಂದು ವೀಡಿಯೋ ಇದೀಗ ಕೊಡಗಿಗೆ ನೂರು ಕೋಟಿ ಬರುವಂತೆ ಮಾಡಿದ್ದು ಸತ್ಯ.ಜೊತೆಗೆ ಹೆಚ್ ಡಿ ಕುಮಾರಸ್ವಾಮಿ ಅವರು ಸಹ ಹುಡುಗನ ವೀಡಿಯೋ ಅನ್ನು ಗಂಭೀರವಾಗಿ ಪರಿಗಣಿಸಿ ಅದಕ್ಕೆ ಸ್ಪಂದಿಸುವ ಮೂಲಕ ತಮ್ಮ ಘನತೆ ಹೆಚ್ಚಿಸಿಕೊಂಡಿದ್ದಾರೆ.

 

 

ಕಾವೇರಿ ಂಂಂಂಂಂಡ್ಯ

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here