ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾದರೆ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜಕೀಯ ನಿವೃತ್ತಿ ಪಡೆಯೋದಾಗಿ ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ ಅವರ ಪುತ್ರ ಸವಾಲು ಹಾಕಿದ್ದಾರೆ. 2014ರಲ್ಲಿ ಕೂಡ ಮೋದಿ ಪ್ರಧಾನಿ ಆದರೆ ತಾವು ರಾಜಕೀಯ ನಿವೃತ್ತಿ ಪಡೆಯುವುದಾಗಿ ಮಾಜಿ ಪ್ರಧಾನಿ ದೇವೇಗೌಡ ಸವಾಲು ಹಾಕಿದ್ದರು. ಆದರೆ, ಅವರು ನುಡಿದಂತೆ ನಡೆದುಕೊಂಡಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕೆ ಮಾಡಿದರು.ಗಂಗಾವತಿಯಲ್ಲಿ ಶುಕ್ರವಾರ ಆಯೋಜನೆಗೊಂಡಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಎಚ್​.ಡಿ. ದೇವೇಗೌಡ ಕುಟುಂಬದವರು ಎಂದಾದರೂ ನಿಜ ಹೇಳಿದ್ದಾರೆ ಎಂದು ನಿಮಗೆ ನಂಬಿಕೆ ಇದೆಯೇ ಎಂದು ಸಭಿಕರನ್ನು ಪ್ರಶ್ನಿಸಿದ ಪ್ರಧಾನಿ ಮೋದಿ, ತಮ್ಮ ಕುಟುಂಬದಲ್ಲಿರುವ ಪ್ರತಿಯೊಬ್ಬರ ಮಕ್ಕಳಿಗೂ ಟಿಕೆಟ್​ ನೀಡಿ ಕುಟುಂಬ ರಾಜಕಾರಣದಲ್ಲಿ ತೊಡಗಿಕೊಂಡಿದ್ದಾರೆ ಎಂದು ಆರೋಪಿಸಿದರು.

ಎರಡು ಹೊತ್ತು ಊಟಕ್ಕೂ ಗತಿಯಿಲ್ಲದವರು ಭಾರತೀಯ ಸೇನೆ ಸೇರುತ್ತಿದ್ದಾರೆ ಎಂದು ಕರ್ನಾಟಕ ಸಿಎಂ ಎಚ್​.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ತನ್ಮೂಲಕ ದೇಶದ ರಕ್ಷಣೆಗಾಗಿ ಮರಭೂಮಿಯಲ್ಲಿನ 50 ಡಿಗ್ರಿ ಸೆಂಟಿಗ್ರೇಡ್​ ತಾಪಮಾನ ಸಹಿಸಿಕೊಂಡು ಕೆಲಸ ಮಾಡುವ, ಹಿಮಾಲಯದ ತಪ್ಪಲಿನಲ್ಲಿ ರಕ್ತವನ್ನು ಹೆಪ್ಪುಗಟ್ಟಿಸುವ ಚಳಿಯಲ್ಲೂ ಕೆಲಸ ಮಾಡುತ್ತಾ, ಎಂಥ ಬಲಿದಾನಕ್ಕೂ ಸಿದ್ಧವಾಗಿರುವ ಭಾರತೀಯ ಯೋಧರಿಗೆ ಅಪಮಾನ ಮಾಡಿದ್ದಾರೆ ಎಂದರು.ಕಾಂಗ್ರೆಸ್​ ಅಧಿಕಾರದಲ್ಲಿದ್ದಾಗ ಕರ್ನಾಟಕದಲ್ಲಿ ಶೇ.10 ಕಮಿಷನ್​ ನಡೆಯುತ್ತಿತ್ತು.

ಈಗ ಜೆಡಿಎಸ್​ ಕೂಡ ಕೈಜೋಡಿಸಿರುವುದರಿಂದ, ಶೇ.10 ಇದ್ದ ಕಮಿಷನ್​ ಈಗ ಶೇ.20ಕ್ಕೆ ಹೆಚ್ಚಳವಾಗಿದೆ ಎಂದು ಟೀಕಿಸಿದರು. ದೇಶವನ್ನು ಒಡೆಯಬೇಕು. ಜಮ್ಮು ಮತ್ತು ಕಾಶ್ಮೀರವನ್ನು ಪ್ರತ್ಯೇಕಗೊಳಿಸಬೇಕು ಎನ್ನುವವರೊಂದಿಗೆ ಜೆಡಿಎಸ್​ ಮತ್ತು ಕಾಂಗ್ರೆಸ್​ ಕೈ ಜೋಡಿಸಿವೆ. ಸುಲ್ತಾನನೊಬ್ಬನ ಜನ್ಮದಿನ ಆಚರಿಸಲು ಇವರ ಬಳಿ ಹಣವಿರುತ್ತದೆ. ಆದರೆ, ಕರ್ನಾಟಕದ ಹೆಮ್ಮೆಯ ಪ್ರತೀಕವಾದ ಹಂಪಿ ಉತ್ಸವ ಮಾಡಲು ಇವರ ಬಳಿ ಹಣ ಇರುವುದಿಲ್ಲ ಎಂದು ಆಕ್ಷೇಪಿಸಿದರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here