ಸಮ್ಮಿಶ್ರ ಸರ್ಕಾರದಲ್ಲಿ ಸದ್ಯಕ್ಕೆ ನಾನು ಕ್ಲರ್ಕ್ ತರ ಕೆಲಸ ಮಾಡುತ್ತಿದ್ದೇನೆ. ಕಾಂಗ್ರೆಸ್​ ನೀಡುತ್ತಿರುವ ಕಿರುಕುಳವನ್ನು ಸಹಿಸಿಕೊಂಡಿದ್ದೇನೆ. ಲೋಕಸಭಾ ಚುನಾವಣೆವರೆಗೂ ಹಲ್ಲು ಕಚ್ಚಿ ಸರ್ಕಾರ ನಡೆಸುತ್ತೇನೆ ಎಂದು ಸಿಎಂ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.ಜೆಡಿಎಸ್​ ಶಾಸಕಾಂಗ ಸಭೆಯಲ್ಲಿ ಮಾತನಾಡಿದ ಅವರು, ದೋಸ್ತಿ ಸರ್ಕಾರದ ನಾಯಕರ ವಿರುದ್ಧ ಬಹಿರಂಗ ಅಸಮಾಧಾನ ಹೊರಹಾಕಿದರು. ರಾಜ್ಯದ ಅಭಿವೃದ್ಧಿ, ಪಕ್ಷದ ದೃಷ್ಟಿಯಿಂದ ಕೆಲಸ ಮಾಡುತ್ತಿದ್ದೇನೆ. ಕಾಂಗ್ರೆಸ್​ ನೀಡುವ ಕಿರುಕುಳವನ್ನು ಸಹಿಸಿಕೊಂಡಿದ್ದೇನೆ. ನಾನು ಅನುಭವಿಸುತ್ತಿರುವ ಕಷ್ಟ ನನಗೆ ಮಾತ್ರ ಗೊತ್ತು ಎಂದು ಜೆಡಿಎಸ್​ ಶಾಸಕರ ಎದುರೇ ಬೇಸರ ಹೊರಹಾಕಿದ್ದಾರೆ.

ದೇವೇಗೌಡರ ಎದುರೇ ತಮ್ಮ ವೇದನೆ ತೋಡಿಕೊಂಡ ಅವರು, ಗುಮಾಸ್ತನ ವರ್ಗಾವಣೆ ಇರಲಿ, ನೇಮಕ ಇರಲಿ, ಎಲ್ಲಾ ಕಾಂಗ್ರೆಸ್ ಹೇಳಿದಂತೆ ಆಗಬೇಕು. ಕಾಂಗ್ರೆಸ್ ಹಿರಿಯ ಮುಖಂಡರ ಅಣತಿಯಂತೆ ನಾನು ನಡೆದುಕೊಳ್ಳುತ್ತಿದ್ದೇನೆ. ಎಲ್ಲದಕ್ಕೂ ಶಿಫಾರಸ್ಸು ಪತ್ರ ಹಿಡಿದು ಬರುತ್ತಾರೆ. ದೋಸ್ತಿ ಸರಕಾರ ನನ್ನ ನಿಯಂತ್ರಣದಲ್ಲಿ‌ ಇಲ್ಲ ಎಂದು‌ ನೇರವಾಗಿಯೇ ಒಪ್ಪಿಕೊಂಡರು.ಸಾಕಷ್ಟು ಜವಾಬ್ದಾರಿ ಮತ್ತು ನಂಬಿಕೆ ನನ್ನ ಮೇಲೆ ಇರುವುದರಿಂದ ಕೈ ತಾಳಕ್ಕೆ ಹೆಜ್ಜೆ ಹಾಕುತ್ತಿದ್ದೇನೆ.

ಸ್ವತಂತ್ರವಾಗಿ ಏನು ಕೆಲಸ‌ ಮಾಡಲು ಆಗುತ್ತಿಲ್ಲ. ನನ್ನ ಕೈ ಕಟ್ಟಿ ಹಾಕಲಾಗಿದೆ ಎಂದು ಗದ್ಗದಿತರಾದರು.ಈ ವೇಳೆ ಲೋಕಸಭೆ ಚುನಾವಣೆ ತನಕ ತಾಳ್ಮೆ ಕಳೆದುಕೊಳ್ಳದಂತೆ ಸಿಎಂಗೆ ದೇವೇಗೌಡರು ಕಿವಿಮಾತು ಹೇಳಿದರು. ನನ್ನ ಬಗ್ಗೆ ಯಾರು ಏನೇ ಟೀಕೆ ಮಾಡಿದರೂ ಪ್ರತಿಕ್ರಿಯೆ ನೀಡಬೇಡಿ ಎಂದು ಸಭೆಯಲ್ಲಿ ಮನವಿ ಮಾಡಿದರು.ಲೋಕಸಭೆ ಚುನಾವಣೆ ತನಕ ನಾನೂ ಮಾತನಾಡಲ್ಲ. ಕಾಂಗ್ರೆಸ್ ಮುಖಂಡರ‌‌ ವಿರುದ್ಧ ಮಾತಾಡಲ್ಲ ಎಂದು ಸಹೋದರ ಎಚ್​.ಡಿ. ರೇವಣ್ಣ ಅವರು ಹೇಳಿದರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here