ಸುಮಲತ ಅವರ ಬೆಂಬಲಕ್ಕೆ ಸಿನಿಮಾ ನಟರು ನಿಂತ ಬೆನ್ನಲ್ಲೇ ಅವರ ಮೇಲೆ ಟೀಕೆಗಳ ಪ್ರಹಾರ ನಡೆದಿದ್ದನ್ನು ಎಲ್ಲರೂ ಮಾದ್ಯಮಗಳ ಮೂಲಕ ಈಗಾಗಲೇ ತಿಳಿದಿದ್ದೇವೆ. ಅದರಲ್ಲೂ ಕೆಲವು ಪಕ್ಷದ ನಾಯಕರು ತೀರಾ ಕೆಳಮಟ್ಟಕ್ಕೆ ಇಳಿದು ನಟರ ವೈಯಕ್ತಿಕ ಜೀವನವನ್ನು ದಾಳವಾಗಿರಿಸಿಕೊಂಡು ಅವರ ಹಿಂದಿನ ಜೀವನದ ಬಗ್ಗೆ ಕೇವಲವಾಗಿ ಮಾತನಾಡಿದ್ದರು. ಮತ್ತೆ ಒಬ್ಬರು ನಟರ ಆಸ್ತಿಗಳ ಮೇಲೆ ರೈಡ್ ಮಾಡಿಸುವ, ಸರ್ಕಾರ ನಮ್ಮದೇ ಏನು ಬೇಕಾದರೂ ನಾವು ಮಾಡುತ್ತೇವೆ ಎಂದು ಧಮ್ಕಿ ಕೂಡಾ ಹಾಕಿದ್ದರು. ಹೀಗೆ ಕಂಡ ಕಂಡ ಕಡೆ ಸಭೆ ಸಮಾರಂಭಗಳಲ್ಲಿ ನಟರ ವಿರುದ್ಧ ನಾಲಗೆ ಹರಿ ಬಿಡುತ್ತಿದ್ದ ನಾಯಕರುಗಳಿಗೆ ಮಾನ್ಯ ಮುಖ್ಯಮಂತ್ರಿ ಅವರು ಒಂದು ಸಂದೇಶವನ್ನು ರವಾನಿಸಿದ್ದಾರೆ.

ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಮಾದ್ಯಮಗಳ ಮುಂದೆ ನಟರ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿ ಜನರ ಹಾಗೂ ಆ ನಟರ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗುತ್ತಿರುವ ಹಾಗೂ ಅಸಮಾಧಾನ ಉಂಟು ಮಾಡುತ್ತಿರುವ ನಾಯಕರುಗಳಿಗೆ ದಯವಿಟ್ಟು ಯಾರೂ ಸಹ ಪ್ರಚಾರ ಮಾಡುತ್ತಿರುವ ನಟರಾಗಲಿ ಅಥವಾ ಯಾವುದೇ ಪಕ್ಷದಲ್ಲಿ ಇರುವ ಕಲಾವಿದರ ಬಗ್ಗೆ ಹಗುರವಾಗಿ ಮಾತನಾಡಬಾರದು , ಕಲೆಗೆ ಗೌರವಿಸಿ ಕಲಾವಿದರ ಬಗ್ಗೆ ಕೆಳಮಟ್ಟದ ಮಾತುಗಳನ್ನು ಆಡುವುದು ಅಗತ್ಯವಿಲ್ಲ. ಕಲಾವಿದರನ್ನು ಎಲ್ಲರೂ ಗೌರವಿಸಿ. ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದನ್ನು ನಿಲ್ಲಿಸಿ ಎಂದು ಒಂದು ಸಂದೇಶವನ್ನು ನೀಡಿದ್ದಾರೆ.

ವಿಶೇಷವೋ ಅಥವಾ ವಿಪರ್ಯಾಸವೋ ಮಂಡ್ಯದಲ್ಲಿ ಸುಮಲತ ಅವರ ಪ್ರಕಾರ ಪರವಾಗಿ ಬೆಂಬಲ ಘೋಷಣೆ ಮಾಡಿರುವ ನಟ ಯಶ್ ಹಾಗೂ ದರ್ಶನ್ ಅವರ ಬಗ್ಗೆ ಜೆಡಿಎಸ್ ನ‌ ಮುಖಂಡರು ಬಹಳ ಕೀಳಾಗಿ ಟೀಕಿಸುವ ಕಾರ್ಯ ಈಗಾಗಲೇ ಮಾಡಿದ್ದು, ಅಭಿಮಾನಿಗಳು ಇದರಿಂದ ಬಹಳ ಬೇಸರ ಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಮಾನ್ಯ ಮುಖ್ಯಮಂತ್ರಿಗಳು ಮಂಡ್ಯದ ಜನರಿಗೆ ಸರ್ಕಾರದ ಅಭಿವೃದ್ಧಿಯನ್ನು ತೋರಿಸಿ ಮತ ಯಾಚನೆ ಮಾಡಿರಿ. ಅದನ್ನು ಬಿಟ್ಟು ಕಲಾವಿದರ ಬಗ್ಗೆ ಮಾತುಗಳು ಬೇಡ ಎಂದು ಕಾರ್ಯಕರ್ತರಿಗೆ ಸಿಎಂ ಬುದ್ದಿವಾದವನ್ನು ಹೇಳಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here