ರಾಜ್ಯದಲ್ಲಿ ಒಂದೆಡೆ ಭೀಕರ ಬರಗಾಲ. ಮತ್ತೊಂದೆಡೆ ಜನರು ನೀರಿಗಾಗಿ ಪರದಾಡುತ್ತಿದ್ದಾರೆ. ಕುಡಿಯಲು ನೀರು ಬೇಕೆಂದು ಸರ್ಕಾರವನ್ನು ಬೇಡಿಕೊಳ್ಳುತ್ತಿದ್ದಾರೆ. ಈ ಸಂದಿಗ್ಧದಲ್ಲಿ ಸಿಎಂ ಕುಮಾರಸ್ವಾಮಿ ಅವರು ಉಡುಪಿಯ ನಂತರ ಈಗ ಮತ್ತೊಂದು ರೆಸಾರ್ಟ್ ನಲ್ಲಿ ರಿಲಾಕ್ಸ್ ಆಗಲು ಹೊರಟಿದ್ದಾರೆ. ಉಡುಪಿಯಲ್ಲಿ ಪ್ರಕೃತಿ ಚಿಕಿತ್ಸೆ ನಡೆಸಿದ ನಂತರ ಆಲಯಗಳ ದರ್ಶನ ಮಾಡಿ, ಪೂಜೆ, ಹೋಮಗಳನ್ನು ನಡೆಸಿದ ಸಿಎಂ ಅವರು ಈಗ ಮಡಿಕೇರಿ ನಗರದಿಂದ ಹೊರವಲಯದಲ್ಲಿರುವ ಇಬ್ಬನಿ ರಾಯಲ್ ರೆಸಾರ್ಟ್ಸ್ ನಲ್ಲಿ ಶನಿವಾರದಿಂದ ವಿಶ್ರಾಂತಿ ಪಡೆಯಲು ತೆರಳುತ್ತಿದ್ದಾರೆ. ಅವರು ಮತ್ತೊಮ್ಮೆ ವಿಶ್ರಾಂತಿಯ ಕಡೆಗೆ ಗಮನ ಹರಿಸಿದ್ದಾರೆ.

ಹೆಸರೇ ಹೇಳುವಂತೆ ರಾಯಲ್ ರೆಸಾರ್ಟ್ ನಲ್ಲಿ ರಾಯಲ್ ಸೌಲಭ್ಯಗಳೇ ಲಭ್ಯವಿದೆ. ಇಲ್ಲಿ ರೂಂ ಒಂದರ ಬಾಡಿಗೆಯೇ ದಿನವೊಂದಕ್ಕೆ 40,000 ರೂ. ಇಂತಹ ನಾಲ್ಕು ಕೋಣೆಗಳನ್ನು ಸಿಎಂ ಅವರು ಎರಡು ದಿನಗಳಿಗೆ ಬುಕ್ ಮಾಡಿದ್ದಾರೆ. ಅಂದರೆ ಸುಮಾರು ಒಂದು ಲಕ್ಷ, ಅರವತ್ತು ಸಾವಿರದವರೆಗೆ ರೂಂ ಗಳ ಬಾಡಿಗೆಯಾಗಲಿದೆ. ಇನ್ನು ಈ ದುಬಾರಿ ಕೋಣೆಗಳಲ್ಲಿ ಪ್ರತ್ಯೇಕವಾಗಿ ಬಾರ್ ,ಸ್ವಿಮ್ಮಿಂಗ್ ಬಾಲ್, ಬಾಲ್ಕನಿ, ಸೌಲಭ್ಯಗಳನ್ನು ಹೊಂದಿದೆ. ಅಲ್ಲದೆ ಬೇಸರ ಕಳೆಯಲು ಔಟಿಂಗ್ ಕೂಡಾ ಹೋಗುವ ವ್ಯವಸ್ಥೆ ಇದ್ದು, ಬೋಟಿಂಗ್ ಹೋಗಿ ಬರಬಹುದು.

ಭೀಕರ ಬರದ ಈ ಸಂದರ್ಧದಲ್ಲಿ ಮುಖ್ಯಮಂತ್ರಿ ಅವರು ಈ ರೀತಿ ಆಲಯಗಳಿಗೆ ಹೋಗುತ್ತಾ, ರೆಸಾರ್ಟ್ ಗಳಲ್ಲಿ ವಿಶ್ರಾಂತಿಗೆ ಗಮನ ನೀಡುತ್ತಿರುವುದನ್ನು ನೋಡಿ ಪ್ರತಿಪಕ್ಷದ ನಾಯಕರು ಮುಖ್ಯಮಂತ್ರಿಗಳಿಗೆ ಜನರ , ರೈತರ ಚಿಂತೆಯಿಲ್ಲ ಬದಲಾಗಿ ಮಗನ ಗೆಲುವು ಹಾಗೂ ತನ್ನ ಕುರ್ಚಿ ಉಳಿಸಿಕೊಳ್ಳುವ ಪರದಾಟ ಮಾಡುತ್ತಿದ್ದರೆ ಎಂದು ಟೀಕೆ ಮಾಡುತ್ತಿದ್ದಾರೆ. ಅಲ್ಲದೆ ಜನರ ಸಮಸ್ಯೆಗಳಿಗೆ ಅವರಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಲಾಗದಿದ್ದರೆ ರಾಜೀನಾಮೇ ನೀಡಲಿ ಎನ್ನುವ ಕೂಗು ಕೂಡಾ ಕೇಳಿ ಬರುತ್ತಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here