ಮೈತ್ರಿ ಸರ್ಕಾರದ ಪತನಾನಂತರ ರಾಜ್ಯದಲ್ಲಿ ಬಿಜೆಪಿ ಅಧಿಕಾರವನ್ನು ಪಡೆದಿದ್ದು ಆಗಿದೆ. ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಸಚಿವ ಸಂಪುಟ ರಚನೆಯಾಗಿದ್ದು, ಖಾತೆಗಳನ್ನು ಹಂಚುವ ಕಾರ್ಯ ‌ನಡೆಯಬೇಕಿದೆ. ಆದರೆ ಮತ್ತೊಂದೆಡೆ ಮೈತ್ರಿ ಮಾಡಿಕೊಂಡು ಸರ್ಕಾರ ನಡೆಸಿದ್ದ ಜೆಡಿಎಸ್ ಮತ್ತು ‌ಕಾಂಗ್ರೆಸ್ ನ ನಡುವೆ ಸರ್ಕಾರ ಪತನಕ್ಕೆ ಪರಸ್ಪರ ದೂರುತ್ತಾ ಟೀಕೆಗಳ ಮೂಲಕ ವಾಗ್ದಾಳಿ ನಡೆಸಿದ್ದು, ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ದೇವೇಗೌಡರು ನೇರವಾಗಿಯೇ ಮೈತ್ರಿ ಸರ್ಕಾರ ‌ಪತನಕ್ಕೆ ಕಾರಣ ಸಿದ್ಧರಾಮಯ್ಯನವರು ಎಂದು ಆರೋಪ ಮಾಡಿದರು. ಅದಾದ ನಂತರದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಕೂಡಾ ಅದನ್ನೇ ಹೇಳಿದರು‌.

ಈ ಹಿನ್ನೆಲೆಯಲ್ಲಿ ಮಾದ್ಯಮದವರಿಗೆ ಪ್ರತಿಕ್ರಿಯಿಸುತ್ತಾ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ನಾಯಕರಾದ ಸಿದ್ಧರಾಮಯ್ಯನವರು ತಮ್ಮ ಹೇಳಿಕೆ ನೀಡಿದ್ದಾರೆ. ಅವರು ಹೆಚ್.ಡಿ.ಕುಮಾರಸ್ವಾಮಿ ಅವರು ನನ್ನನ್ನು ಒಬ್ಬ ಶತೃವಿನಂತೆ ನೋಡಿ, ದ್ವೇಷ ಸಾಧಿಸಿದ್ದೇ ಸಮಸ್ಯೆಯಾಗಿದ್ದು, ಅದರ ಬದಲು ಒಬ್ಬ ಸ್ನೇಹಿತ ಅಂತ, ವಿಶ್ವಾಸಿ ಅಂತ ಅಥವಾ ಮೈತ್ರಿ ಪಕ್ಷದವರು ಅಂತ ತಿಳಿದುಕೊಂಡಿದಿದ್ದರೆ ಏನೂ ಆಗ್ತಾ ಇರಲಿಲ್ಲ ಎಂದಿದ್ದಾರೆ. ಅಲ್ಲದೆ ಅಧಿಕಾರ ಹಾಗೂ ಆಡಳಿತ ನಡೆಸೋಕೆ ಬರದೇ ಇರೋರೆಲ್ಲ ಹಾಗೆ ಅಂದು ಕೊಳ್ಳುವುದು ಎನ್ನುವ ಮೂಲಕ ಕುಮಾರಸ್ವಾಮಿ ಅವರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಇದೇ ಸಂದರ್ಭದಲ್ಲಿ ಅವರು ಸಚಿವ ಸಂಪುಟದಲ್ಲಿ ಖಾತೆ ಹಂಚಿಕೆಯಾಗದಿರುವುದನ್ನು, ಪ್ರವಾಹ ಹಾಗೂ ನೆರೆ ಪರಿಸ್ಥಿತಿಗೆ ಕೇಂದ್ರ ಸ್ಪಂದಿಸದೆ ಇರುವುದನ್ನು ಟೀಕಿಸಿದ್ದಾರೆ. ರಾಜ್ಯದಲ್ಲಿ ಕಳೆದ ಒಂದು ತಿಂಗಳಿಂದ ಸರ್ಕಾರವೇ ಇಲ್ಲ ಎಂದ ಅವರು ಬಿಜೆಪಿ ಸರ್ಕಾರವನ್ನು ಅನೈತಿಕ ಶಿಶುವೆಂದು, ಯಡಿಯೂರಪ್ಪನವರು ಕೆಂದ್ರಕ್ಕೆ ಒಲ್ಲದ ಮಗು ಎಂದು ತಮ್ಮ ವಾಕ್ಚಾತುರ್ಯವನ್ನು ಮರೆದಿದ್ದು, ಬಿಜೆಪಿ ಅಧಿಕಾರ ಕೇಂದ್ರೀಕೃತ ತತ್ವವನ್ನು ಪ್ರತಿಪಾದಿಸೋ ಪಕ್ಷ , ಸರ್ವಾಧಿಕಾರದಲ್ಲಿ ನಂಬಿಕೆ ಇಟ್ಟ ಪಕ್ಷ ಎಂದು ಟೀಕೆ ಮಾಡಿದ್ದಾರೆ.

 

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here