ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಅಧಿಕಾರ ಕಳೆದುಕೊಂಡು ಮತಿ ಭ್ರಮಣೆ ಆಗಿದೆ ಎಂದು ಸಚಿವ ಶ್ರೀ ರಾಮುಲು ಅವರು ವಾಗ್ದಾಳಿ ನಡೆಸಿದ್ದಾರೆ. ಇಂದು ಕುಮಾರಸ್ವಾಮಿ ಅವರು ಬಿ.ಎಸ್.ಯಡಿಯೂರಪ್ಪನವರ ವೈಯಕ್ತಿಕ ವಿಚಾರವನ್ನು ಕೆದಕಿ ಮಾತನ್ನಾಡಿದ್ದರ ಹಿನ್ನೆಲೆಯಲ್ಲಿ ಶ್ರೀ ರಾಮುಲು ಅವರು ಅವರಿಗೆ ಈ ರೀತಿಯ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಕುಮಾರಸ್ವಾಮಿ ಅವರು ಅಧಿಕಾರ ಕಳೆದು ಕೊಂಡ ಮೇಲೆ ಅವರಿಗೆ ಮತಿ ಭ್ರಮಣೆಯಾಗಿದೆಯೆಂದು, ಬಿಎಸ್ ವೈ ಅವರ ಕುಟುಂಬದ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ ಎಂದು ಪ್ರಶ್ನೆಯನ್ನು ಮಾಡಿದ್ದಾರೆ.

ಈ ಸಂದರ್ಭದಲ್ಲಿ ಶ್ರೀ ರಾಮುಲು ಅವರು ಕುಮಾರಸ್ವಾಮಿ ಅವರನ್ನು, ನೀವು ಒಬ್ಬ ಸಣ್ಣ ರಾಜಕಾರಣಿ. ನೀನೊಬ್ಬ ಹುಡುಗ. ಹಾಗೂ ಮಾಜಿ ಪ್ರಧಾನಮಂತ್ರಿಯ ಮಗ ಎಂಬ ಕಾರಣದಿಂದ ಮುಖ್ಯಮಂತ್ರಿಯಾಗಿದ್ದೀರಿ ಅಷ್ಟೇ ಆದರೆ ಯಡಿಯೂರಪ್ಪ ನವರು ಹೋರಾಟ ಮಾಡಿ ಮುಖ್ಯಮಂತ್ರಿಯಾದವರು‌. ಯಡಿಯೂರಪ್ಪನವರಿಗೆ ನಿಮ್ಮ ತಂದೆಯವರಿಗೆ ಇರುವಷ್ಟು ಅನುಭವವಿದ್ದು , ಅವರ ಕುಟುಂಬದವರನ್ನು ರಾಜಕಾರಣಕ್ಕೆ ಎಳೆದು ತರಬೇಡಿ ಎಂದು ಕುಮಾರಸ್ವಾಮಿ ಅವರ ವಿರುದ್ಧ ಏಕವಚನದಲ್ಲೇ ಟೀಕಾ ಪ್ರಹಾರವನ್ನು ನಡೆಸಿದ್ದಾರೆ.

ಇಂದು ಕುಮಾರಸ್ವಾಮಿ ಅವರು ಚನ್ನಪಟ್ಟಣದಲ್ಲಿ ಮಾತನಾಡುತ್ತಾ ಯಡಿಯೂರಪ್ಪನವರ ಪತ್ನಿ ಒಂದಡಿ ನೀರಿದ್ದ ಸಂಪಿನಲ್ಲಿ ಬಿದ್ದು ಸಾವನ್ನಪ್ಪಿದ್ದರು. ಆದರೆ ಇದು ಅನುಮಾನಾಸ್ಪದವಾಗಿದ್ದು, ಈ ವಿಷಯವನ್ನು ಯಾರೂ ಪ್ರಚಾರ ಮಾಡುವುದಿಲ್ಲ ಎಂದು ಬಿಎಸ್ ವೈ ಅವರ ವೈಯಕ್ತಿಕ ವಿಷಯ ಮಾತನಾಡುವ ಮೂಲಕ ಹೊಸ ಬಾಂಬ್ ಸಿಡಿಸಿದ್ದರು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು. ಅದಕ್ಕೆ ಶ್ರೀ ರಾಮುಲು ಅವರು ಏಕವಚನದಲ್ಲೇ ಪ್ರತಿಕ್ರಿಯೆ ನೀಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here