ನಾಡಿನ ಜನತೆ ದಂಗೆ ಏಳಬೇಕು. ಈ ಮಾತನ್ನು ನಾನು ನನ್ನ ಪುಣ್ಯಭೂಮಿಯಿಂದ ಹೇಳುತ್ತಿದ್ದೇನೆ ನಾಡಿನ ಜನತೆ ಬಿಜೆಪಿ ಸರ್ಕಾರದ ವಿರುದ್ದ ರಾಜ್ಯದ ಜನತೆ ದಂಗೆ ಏಳಬೇಕಿದೆ ಎಂದು ಹೆಚ್ ಡಿ ಕುಮಾರಸ್ವಾಮಿ ಕರೆ ನೀಡಿದ್ದಾರೆ. ಹಾಸನ ಜಿಲ್ಲೆಯ ಹೊಳೆನರಸೀಪುರ ದ ಉದಯಪುರದಲ್ಲಿ  ಕಾರ್ಯಕಮ ಒಂದರಲ್ಲಿ ಭಾಗವಹಿಸಿ ಮಾತನಾಡಿದ ರಾಜ್ಯದ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಭಾರತೀಯ ಜನತಾ ಪಕ್ಷದ ನಾಯಕರು ಸೇರಿ ಇಂದು ಸಮ್ಮಿಶ್ರ ಸರ್ಕಾರದಿಂದ ಸರಿಯಾಗಿ ಕೆಲಸ ಮಾಡಲು ಅಡ್ಡಗಾಲು ಹಾಕುತ್ತ ಇದ್ದಾರೆ ಬಿಜೆಪಿ ಯ ಯಡಿಯೂರಪ್ಪ ಅವರಿಗೆ ಬುದ್ದಿ ಭ್ರಮಣೆ ಆಗಿದೆ ಹೀಗಾಗಿ ಅವರು‌ ಜನಪರ ಸರ್ಕಾರವನ್ನು ಬೀಳಿಸಲು ಹೋರಾಡುತ್ತಿದ್ದಾರೆ.

ಇನ್ನು ಬಿ ಎಸ್ ಯಡಿಯೂರಪ್ಪ ಅವರಿಗೆ ಸಹಾಯ ಆಗಲಿ ಎಂದು ನಾನೇ ಮುಂಬೈಗೆ ನಮ್ಮ ಶಾಸಕರನ್ನು ಕಳುಹಿಸಿದ್ದೇನೆ ಎಂದು ಯಡಿಯೂರಪ್ಪ ವಿರುದ್ದ ಕುಮಾರಸ್ವಾಮಿ ಅವರು ವ್ಯಂಗ್ಯದ ಮಾತುಗಳನ್ನು ಆಡಿದರು. ಬಿಜೆಪಿ ಅವರು ಲಜ್ಜೆಗೆಟ್ಟವರಂತೆ ಆಡುತ್ತಿದ್ದಾರೆ , ನಮ್ಮ ಸರ್ಕಾರದ ಶಾಸಕರನ್ನು ಸಂಪರ್ಕಿಸಿ ಕೋಟಿ ಗಟ್ಟಲೆ ಹಣದ ಆಮಿಷ ಒಡ್ಡುತ್ತಿದ್ದಾರೆ. ಆದರೆ ನಮ್ಮ ಶಾಸಕರು ಯಾರೂ ಎಲ್ಲೂ ತೆರಳಿಲ್ಲ ಸುಮ್ಮ ಸುಮ್ಮನೆ ಮುಂಬೈಗೆ ಇಪ್ಪತ್ತಕ್ಕೂ ಹೆಚ್ಚು ಶಾಸಕರು ತೆರಳಿದ್ದಾರೆ ಎಂದು‌ ಬಿಂಬಿಸುತ್ತಿದ್ದಾರೆ ಇದರಲ್ಲಿ ಯಾವುದೇ ಸತ್ಯಾಂಶ ಇಲ್ಲ ಎಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಹೇಳಿದರು.ಸರ್ಕಾರ ಉರುಳಿಸುತ್ತೇವೆ ಎಂಬ ಉದ್ದಟತನದ ಹೇಳಿಕೆಯಿಂದ ಬಿಜೆಪಿ ಹೋರಾಡುತ್ತಿದೆ ಎಂದರು.ಯಡಿಯೂರಪ್ಪ ಅವರು ಅವರ ಜೀವನದಲ್ಲಿ ಒಮ್ಮೆಯಾದರೂ ಜನತಾದರ್ಶನ ಮಾಡಿದ್ದಾರ ? ನಾನು ನಿರಂತರವಾಗಿ ಜನಪರ ಕೆಲಸ ಮಾಡುತ್ತಿದ್ದೇನೆ ,ರೈತರ ಸಾಲ ಮನ್ನಾ ಮಾಡಿದ್ದೇನೆ ಅಂತಹುದದರಲ್ಲಿ ನಮ್ಮ ಸರ್ಕಾರದ ವಿರುದ್ದ ಬಿಜೆಪಿ ನಡವಳಿಕೆ ಸರಿಯಾದುದಲ್ಲ ಎಂದರು.

ಇನ್ನು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ದಂಗೆ ಹೇಳಲು ಕರೆ ನೀಡುತ್ತಿದ್ದಂತೇ ಅತ್ತ ಕಾಂಗ್ರೆಸ್ ಪಕ್ಷದ ಕೆಲ ಕಾರ್ಯಕರ್ತರು ಮಾಜಿ‌ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ನಿವಾಸದ ಮುಂದೆ ಧರಣಿ ನಡೆಸಿದರು ಈ ಸಮಯದಲ್ಲಿ ಬಿಜೆಪಿ‌ ಮತ್ತು ಕಾಂಗ್ರೆಸ್ ನಾಯಕರು ಕೈ ಕೈ ಮಿಲಾಯಿಸಿದ ಘಟನೆ ಸಹ ನಡೆದಿದೆ. ಈ ಘಟನೆಯ ಬಳಿಕ ಭಾರತೀಯ ಜನತಾ ಪಕ್ಷದ ಶಾಸಕರಾದ ನರೇಂದ್ರ ಬಾಬು ,ರೇಣುಕಾ ಚಾರ್ಯ ಸೇರಿದಂತೆ ಹಲವರು ಯಡಿಯೂರಪ್ಪ ಅವರ ಮನೆ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ನಡೆಸಿದ ಧರಣಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here