ಮಂಡ್ಯದಲ್ಲಿ ಈಗ ಚುನಾವಣೆಯ ಕಣ ತಾರಕಕ್ಕೇರಿದೆ‌ ಅಲ್ಲಿ ಯಾರು ಏನೇ ಮಾತನಾಡಿದರೂ ಅದಕ್ಕೆ ಎದುರುತ್ತರ ಕೊಡುವುದಕ್ಕೆ ಎದುರಾಳಿ ಗಳು ಕಾಯುತ್ತಿರುತ್ತಾರೆ. ಇದೀಗ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಪಕ್ಷೇತರ ಅಭ್ಯರ್ಥಿ ಸುಮಲತಾ ಟಾಂಗ್ ಕೊಟ್ಟಿದ್ದಾರೆ. ಎರಡು ಹೊತ್ತು ತಿನ್ನಲು ಗತಿ ಇಲ್ಲದವರು ಸೇನೆಗೆ ಸೇರುತ್ತಾರೆ ಎನ್ನುವ ಮೂಲಕ ಸಿಎಂ ಯೋಧರನ್ನು ಅವಮಾನಿಸಿದ್ದಾರೆ ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಆಕ್ರೋಶ ವ್ಯಕ್ತಪಡಿಸಿದರು.ಕೆ.ಆರ್.ಪೇಟೆ ತಾಲೂಕಿನ ಸಿಂಧಘಟ್ಟದಲ್ಲಿ ಪ್ರಚಾರದ ವೇಳೆ ಮಾತನಾಡಿ, ಕುಮಾರಸ್ವಾಮಿ ಅವರಿಗೆ ನಾಚಿಕೆ ಆಗಬೇಕು.

ಚುನಾವಣೆಗೆ ದೇಶ ಕಾಯುವ ಸೈನಿಕರನ್ನು ಎಳೆದು ಕೀಳುಮಟ್ಟಕ್ಕೆ ಇಳಿದಿದ್ದಾರೆ ಎಂದರು.ಕಾಂಗ್ರೆಸ್ ಪಕ್ಷ ಬ್ಲಾಕ್ ಅಧ್ಯಕ್ಷರನ್ನು ವಜಾ ಮಾಡುವ ತಮ್ಮ ಕೈಗಳನ್ನು ತಾನೇ ಕತ್ತರಿಸಿಕೊಳ್ಳುತ್ತಿದೆ. ಇದೇ ರೀತಿ ಮುಂದುವರಿದರೆ ಮುಂದಿನ ಚುನಾವಣೆಗೆ ಕಾಂಗ್ರೆಸ್ಸಿಗೆ ಯಾರು ಇಲ್ಲದಂತಾಗುತ್ತಾರೆ‌. ವಜಾ ಆಗಿರುವ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರ ಪರವಾಗಿ ನಾನು ಇರುತ್ತೇನೆ.

ಅವರ ಕೈ ಬಿಡುವುದಿಲ್ಲ ಎಂದರು.ನಾನು ಐಟಿ ದಾಳಿ ಮಾಡಿಸುವಷ್ಟು ಪವರ್ ಫುಲ್ ಅಲ್ಲ. ಪುಟ್ಟರಾಜು ಸೇರಿದಂತೆ ಅವರ ಆಪ್ತರ ಬಳಿ ಮುಚಿಡುವಂತದ್ದು ಏನಿಲ್ಲದಿದ್ದರೆ ಐಟಿ ಅಧಿಕಾರಿಗಳಿಗೆ ಸ್ವಾಗತ ಮಾಡಲಿ. ಅದು ಬಿಟ್ಟು ನಾನು ದಾಳಿ ಮಾಡಿಸಿದ್ದೇನೆ ಎಂದು ಆರೋಪಿಸಿ ಅನುಕಂಪ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಇದನ್ನ ಜನ ನಂಬಲ್ಲ ಎಂದು ಸಚಿವ ಪುಟ್ಟರಾಜು ಆರೋಪಕ್ಕೆ ತಿರುಗೇಟು ನೀಡಿದರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here