ಸಮ್ಮಿಶ್ರ ಸರ್ಕಾರದಲ್ಲಿ ನಾಯಕತ್ವ ಬದಲಾವಣೆಯ ಬಗ್ಗೆ ಎದ್ದಿದ್ದ ಅನುಮಾನಗಳು ಹಾಗೂ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ ಡಿ.ಕೆ.ಶಿವಕುಮಾರ್. ಈ ಹಿಂದೆ ಕೊಟ್ಟ ಮಾತಿನಂತೆಯೇ ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಗಳಾಗಿ ಮುಂದುವರೆಯಲಿದ್ದಾರೆ ಎಂದು ಹೇಳಿದ್ದಾರೆ. ಮಾದ್ಯಮಗಳ ಜೊತೆ ಮಾತನಾಡಿದ ಅವರು ಅತೃಪ್ತ ಶಾಸಕರ ಜೊತೆ ತಾನು ಈಗಾಗಲೇ ಮಾತನಾಡಿದ್ದು, ಕಳೆದ ಹಲವು ವರ್ಷಗಳಿಂದ ರಾಜಕೀಯವನ್ನು ರಾಮಲಿಂಗಾರೆಡ್ಡಿಯವರು ಹಾಗೂ ವಿಶ್ವನಾಥ್ ಹಾಗೂ ಇತರೆ ನಾಯಕರ‌ ಜೊತೆ ಮಾಡಿಕೊಂಡು ಬಂದಿರುವುದಾಗಿ ಅವರು ಹೇಳಿದ್ದಾರೆ.

ಅತೃಪ್ತರು ತಮ್ಮ ಮುಂದೆ ಕೆಲವು ಬೇಡಿಕೆಗಳನ್ನು ಇಟ್ಟಿದ್ದು,ಅವುಗಳನ್ನು ಪೂರೈಸಲು ಎಲ್ಲಾ ಪ್ರಯತ್ನಗಳನ್ನು ಮಾಡುವುದಾಗಿ ಅವರು ಹೇಳಿದ್ದಾರೆ.
ಆದರೆ ಅವರು ಶಾಸಕರ ಬೇಡಿಕೆಗಳೇನು ಎಂದು ಬಹಿರಂಗವಾಗಿ ಹೇಳಲಾಗುವುದಿಲ್ಲ ಎಂದೂ ಅವರು ಹೇಳಿದ್ದಾರೆ. ಸೋಮವಾರ ಡಿಸಿಎಂ ಪರಮೇಶ್ವರ್ ಅವರ ಮನೆಯಲ್ಲಿ ಎಲ್ಲಾ ಸಚಿವರ ಸಭೆಯಿದ್ದು, ಅದಕ್ಕೆ ಈಗಾಗಲೇ ಎಲ್ಲಾ ಸಚಿವರನ್ನು ಆಹ್ವಾನಿಸಲಾಗಿದೆ ಎಂದು ಅವರು ಹೇಳಿದ್ದಾರೆ. ರಾಹುಕಾಲ ಮುಗಿದ ನಂತರ ಸಭೆ ನಡೆಯಲಿದ್ದು, ಸಭೆಗೆ ಮಾದ್ಯಮಗಳಿಗೂ ಸಹಾ ಆಹ್ವಾನವಿದೆ ಎನ್ನಲಾಗಿದೆ.

ಜೆಡಿಎಸ್ ನವರೇ ಐದು ವರ್ಷಗಳು ಮುಖ್ಯಮಂತ್ರಿಗಳಾಗಿರಲಿ ಎಂದು ಒಪ್ಪಂದ ಮಾಡಿಕೊಳ್ಳಲಾಗಿದೆ. ಅದರಿಂದಾಗಿ ನಾನು ಸಿಎಂ‌ ಬೆನ್ನಿಗೆ ಚೂರಿ ಹಾಕುವವನಲ್ಲ.‌ ಇನ್ನು ಸಿದ್ಧರಾಮಯ್ಯನವನ್ನು ಅಥವಾ ಖರ್ಗೆ ಅವರನ್ನು ಸಿಎಂ‌ ಮಾಡುವುದು ಹೈ ಕಮಾಂಡ್ ನ‌ ವಿವೇಚನೆಗೆ ಬಿಟ್ಟಿದ್ದು ಎಂದಿರುವ ಅವರು, ಅತೃಪ್ತ ಶಾಸಕರಿಗೆಲ್ಲಾ ಮಂತ್ರಿ ಪದವಿ ಕೊಡುವುದಾಗಿ ಬಿಜೆಪಿ ಆಮಿಷವೊಡ್ದಿದೆ. ನಾನು ಯಾರದೇ ಬೆನ್ನಿಗೆ ಚೂರಿ ಹಾಕಿ ಅಧಿಕಾರ ಕೇಳುವ ಜಾಯಾಮಾನದವಲ್ಲ ಹಾಗೂ ಪಕ್ಷಕ್ಕಾಗಿ ಯಾವುದೇ ತ್ಯಾಗ ಬೇಕಾದರೂ ನಾನು ಮಾಡಲು ಸಿದ್ಧ ಎಂದು ಅವರು ಹೇಳಿದ್ದರು.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here