ಇಂದು‌ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ತಮ್ಮ ಪುತ್ರನ ಮೇಲೆ ಆಣೆ ಇಟ್ಟು ರೈತರಿಗೆ ಮಾತು ಕೊಟ್ಟಿದ್ದಾರೆ‌. ಸಾಲಮನ್ನಾ ವಿಚಾರದಲ್ಲಿ ಮೈತ್ರಿ ಸರ್ಕಾರ ಟೋಪಿ ಹಾಕಲ್ಲ. ನನ್ನ ಮೇಲೆ ವಿಶ್ವಾಸವಿಡಿ. ಇರೋನೊಬ್ಬ ಮಗ, ಅವನ ಮೇಲೆ ಆಣೆ ಮಾಡಿ ಹೇಳ್ತಿದಿನಿ, ಸಾಲಮನ್ನಾ ಮಾಡ್ತೀನಿ’ ಎಂದು ಸಿಎಂ ಕುಮಾರಸ್ವಾಮಿ ತಮ್ಮ ಮಗನ ಮೇಲೆ ಆಣೆ ಪ್ರಮಾಣ ಮಾಡಿದರು.ಬಾಗಲಕೋಟೆಯಲ್ಲಿ ನಡೆದ ಋಣ ಮುಕ್ತ ಪ್ರಮಾಣ ಪತ್ರ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು ಸಮ್ಮಿಶ್ರ ಸರ್ಕಾರ ಸಾಲಮನ್ನಾ ವಿಚಾರದಲ್ಲಿ ರೈತರಿಗೆ ಟೋಪಿ ಹಾಕುತ್ತಿದೆ ಎಂದು ಆರೋಪ ಮಾಡುತ್ತಿದ್ದಾರೆ. ಆದರೆ ನಾವು ಸಾಲಮನ್ನಾ ಮಾಡುವ ದಿಟ್ಟ ನಿರ್ಧಾರ ಮಾಡಿದ್ದೇವೆ. ಮೈತ್ರಿ ಸರ್ಕಾರ ರೈತರಿಗೆ ಮೋಸ ಮಾಡುವುದಿಲ್ಲ.

 

ನನ್ನ ಮೇಲೆ ವಿಶ್ವಾಸವಿಡಿ. ನನ್ನ ಮಗನ ಮೇಲಾಣೆ ರೈತರ ಸಾಲಮನ್ನಾ ಮಾಡುತ್ತೇನೆ. ನಮಗೆ ಶಕ್ತಿ ಕೊಡಿ. ಮೈತ್ರಿ ಸರ್ಕಾರ ಉಳಿಯುತ್ತೆ, ರೈತರು ಹೆದರಬೇಡಿ. ಸಾಲಮನ್ನಾ ಮಾಡದೇ ನಾನು ನಿರ್ಗಮಿಸುವುದಿಲ್ಲ ಎಂದು ಭರವಸೆ ನೀಡಿದರು.ಸಾಲಮನ್ನಾಗೆ ಬೇರೆ ಯಾವುದೇ ಕಂಡಿಷನ್​ ಹಾಕಿಲ್ಲ. ಆಧಾರ್​ ಕಾರ್ಡ್​, ಪಹಣಿ ಮಾಹಿತಿ ಕೇಳಲಾಗಿತ್ತು. ಮಧ್ಯವರ್ತಿಗಳ ಪಾಲಾಗಬಾರದೆಂದು ಈ ನಿಯಮ ಮಾಡಿದ್ದೆವು. 44 ಲಕ್ಷ ಕುಟುಂಬಗಳು ಸಾಲಮನ್ನಾ ಪ್ರಯೋಜನ ಪಡೆಯಲಿವೆ.

ರಾಷ್ಟ್ರೀಕೃತ ಬ್ಯಾಂಕ್​ನಲ್ಲಿ ಸಾಲಮನ್ನಾಗೂ ಋಣಮುಕ್ತ ಪ್ರಮಾಣ ಪತ್ರ ಕೊಟ್ಟಿದ್ದೇವೆ. ಸಾಲಮನ್ನಾ ಯೋಜನೆಗೆ ಹಣದ ಕೊರತೆಯಿಲ್ಲ. ಎರಡೂವರೆ ಸಾವಿರ ಕೋಟಿ ಹೆಚ್ಚುವರಿ ಹಣ ಕೊಡಲು ಸಪ್ಲಿಮೆಂಟರಿ ಬಜೆಟ್ ನಲ್ಲಿ ನಿರ್ಧಾರ ಮಾಡಲಾಗಿದೆ. ರೈತರು ರಾಷ್ಟ್ರೀಕೃತ ಬ್ಯಾಂಕ್​ನಲ್ಲಿ ೨೧ ಲಕ್ಷ ರೂ. ಸಾಲಪಡೆದಿದ್ದಾರೆ. ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಸಾಲಪಡೆದ ರೈತರಿಗೂ ೨೫ ಸಾವಿರ ಇನ್ಸೆಂಟಿವ್ ಕೊಡಲು ನಿರ್ಧಾರ ಮಾಡಲಾಗಿದೆ. ನಾಲ್ಕು ಹಂತದಲ್ಲಿ ಸಾಲಮನ್ನಾ ಮಾಡಲಾಗುತ್ತದೆ. ಮುಂದಿನ ಬಜೆಟ್​ನಲ್ಲಿ 25 ಸಾವಿರ ಕೋಟಿ ರಾಷ್ಟ್ರೀಕೃತ ಬ್ಯಾಂಕ್ ಸಾಲಮನ್ನಾ ಘೋಷಣೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here