ನಾನು ಕಣ್ಣೀರು ಹಾಕಿದ್ದರ ಹಿಂದೆ ಕಾಂಗ್ರೆಸ್ ಪಕ್ಷವನ್ನು ಅವಮಾನಿಸುವ ಯಾವುದೇ ಉದ್ದೇಶ ಇಲ್ಲ.ನಾನು ಹುಟ್ಟಿದಾಗಿನಿಂದ ಭಾವುಕ ಜೀವಿ.ನನ್ನ ಮನಸ್ಸಿಗೆ ಬೇಜಾರಾದಾಗ ಅಥವಾ ನೋವುಂಟಾದಾಗ ಸಹಜವಾಗಿಯೇ ಕಣ್ಣೀರು ನನಗೆ ಬರುತ್ತದೆ.ನಾನು ಮಾತನಾಡುವಾಗ ನನಗರಿವಿಲ್ಲದಂತೆ ಭಾವುಕ ನಾಗಿ ಕಣ್ಣೀರು ಹಾಕುತ್ತೇನೆ ವಿನಃ ಈ ಕಣ್ಣೀರಿನಿ ಹಿಂದೆ ಯಾವುದೇ ರಾಜಕೀಯ ಆಗಲಿ‌ ನಾಟಕವಾಗಲಿ ಇಲ್ಲ ಎಂದು ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಮಾಧ್ಯಮಗಳ ಮುಂದೆ ತಮ್ಮ ಕಣ್ಣೀರಿನ ಹಿಂದಿನ ಕಹಾನಿ ಹಂಚಿಕೊಂಡಿದ್ದಾರೆ.ಇತ್ತೀಚಿಗೆ ಮಾತನಾಡುವಾಗ ಹಲವು ಬಾರಿ ನೋವಾಗಿದೆ.

ಆದರೆ ಆ ನೋವು ಕಾಂಗ್ರೆಸ್ ಪಕ್ಷದ ನಾಯಕರಿಂದ ಆಗಿಲ.ಬದಲಿಗೆ ವಿರೋಧ ಪಕ್ಷದವರ ನಡವಳಿಕೆ ನನಗೆ ನೋವು ಉಂಟುಮಾಡಿದೆ ಎಂದರು ಮೊದಲು ಸಾಲ ಮನ್ನಾ ಮಾಡಿ ಎಂದು ಒಂದೇ ಸಮನೆ ಒತ್ತಡ ಹಾಕಿದರು.ನಂತರ ನಾನು ಸಾಲಮನ್ನಾ ಮಾಡಿದ ನಂತರ ಅದಕ ಖ್ಯಾತೆ ತೆಗೆದರು.ನಾನು ಮತ್ತೆ ಒಂಬತ್ತು ಸಾವಿರ ಕೋಟಿ ಸಾಲ ಮನ್ನಾ ಮಾಡಿದೆ.ಈಗ ಎಲ್ಲಾ ಮುಗಿದ ಮೇಲೆ ಅಲ್ಲಿಗೆ ಅನ್ಯಾಯ ಆಗಿದೆ ಈ ಭಾಗಕ್ಕೆ ಅನ್ಯಾಯವಾಗಿದೆ ಎಂದು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ.ಕೆಲವರಿಗೆ ನಾನು ಮುಖ್ಯಮಂತ್ರಿ ಅಡಗಿರುವುದನ್ನು ಸಹಿಸಿಕೊಳ್ಳುವ ಮನಸ್ಸು ಇಲ್ಲ.

ಹೀಗಾಗಿ ಪದೇ ಪದೇ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ.ಜೊತೆಗೆ ನನ್ನ ಉತ್ತಮ ಯೋಜನೆಗಳ ಬಗ್ಗೆ ಒಬ್ಬರೂ ಒಳ್ಳೆಯ ಮಾತುಗಳನ್ನು ಆಡುತ್ತಿಲ್ಲ.ನಾನು ಯಾರಿಗೂ ಯಾವ ನೋವು ಉಂಟು ಮಾಡುವ ಸ್ವಭಾವದವನಲ್ಲ ಹೀಗಿದ್ದೂ ಕೆಲವರ ನಡವಳಿಕೆ ಸಹಜವಾಗಿಯೇ ನನಗೆ ನೋವು ತಂದಾಗ ನನಗೆ ಕಣ್ಣೀರು ಬಂದಿದೆ ವಿನಹ ಬೇರೆ ಯಾವುದೇ ಕಾರಣವಿಲ್ಲ ಎಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here