ಮಾನ್ಯ ಮುಖ್ಯಮಂತ್ರಿಯವರಾದ ಕುಮಾರ ಸ್ವಾಮಿಯವರು ಇದ್ದಕ್ಕಿದ್ದಂತೆ ಸ್ವಲ್ಪ ಆವೇಶದಿಂದ ಇಂದು ತಾನು ಮನಸ್ಸು ಮಾಡಿದರೆ, ಕೆಲವೇ ಗಂಟೆಗಳಲ್ಲಿ ಅಧಿಕಾರದಿಂದ ಇಳಿಯಬಲ್ಲೆ ಎಂದು ಹೇಳಿದ್ದಾರೆ. ಜೆಡಿಎಸ್ ಕಛೇರಿಯಲ್ಲಿ ನಡೆದಂತಹ ಅಭಿನಂದನಾ ಸಭೆಯಲ್ಲಿ ಮಾತಮಾಡಿದ ಮಾನ್ಯ ಮುಖ್ಯಮಂತ್ರಿಯವರು, ಮತ್ತೊಮ್ಮೆ ತಾನು ಅಧಿಕಾರ ಅಥವಾ ಕುರ್ಚಿಗಾಗಿ ಆಸೆ ಪಡುವವನಲ್ಲ ಎಂಬ ವಿಚಾರವನ್ನು ತಮ್ಮ‌ ಈ ಮಾತುಗಳ ಮೂಲಕ ಹೇಳಿದ್ದಾರೆ.

ಕುಮಾರಸ್ವಾಮಿಯವರು ಮಾತನಾಡುವ ಸಂದರ್ಭದಲ್ಲಿ ತಾನು ಅಧಿಕಾರವನ್ನು ಒದ್ದು ಬಂದ ತಂದೆಯ ಮಗನೆಂದು ಹೇಳಿದ್ದಾರೆ. ನಮ್ಮ ತಂದೆ ಸ್ವಾಭಿಮಾನ, ರಾಜ್ಯದ ಅಭಿಮಾನವನ್ನು ಉಳಿಸುವ ಕೆಲಸವನ್ನು ಮಾಡಿದ್ದಾರೆ. ಅಂತಹವರ ಮಗನಾದ ನಾನು ಎಂದಿಗೂ ಅಧಿಕಾರಕ್ಕಾಗಿ ಆಸೆ ಪಡುವವನಲ್ಲ ಎಂಬ ಅರ್ಥದಲ್ಲಿ,ನಾನು ಕುರ್ಚಿಗೆ ಗೂಟ ಹೊಡೆದುಕೊಂಡು ಕೂರುವ ವ್ಯಕ್ತಿ ನಾನಲ್ಲ ಎಂದು ಹೇಳಿದ್ದಾರೆ.

ಇನ್ನು ಅಧಿಕಾರದ ಬಗ್ಗೆ ಮಾತನಾಡಿದ ಅವರು, ತಾನು ಅಧಿಕಾರ, ಕುರ್ಚಿ ಉಳಿಸಿಕೊಳ್ಳಲು ಪ್ರಾಮುಖ್ಯತೆ ನೀಡುವ, ಅದಕ್ಕಾಗಿ ಸಮಯ ವೃಥಾ ಮಾಡುವ ವ್ಯಕ್ತಿಯಂತೂ ಮೊದಲೇ ಅಲ್ಲ. ಎಲ್ಲೋ ಸಿದ್ಧರಾಮಯ್ಯನವರು ಏನೋ ಹೇಳಿಕೆ ಕೊಟ್ಟರೆಂದು,ಅದನ್ನೇ ಸುದ್ದಿ ಮಾಡುತ್ತಾರೆ. ಆದರೆ ತಾನು ಅಂತಹ ಸುದ್ದಿಗಳನ್ನು ನಂಬುವುದಿಲ್ಲ ಹಾಗೂ ಅದರ ಬಗ್ಗೆ ತಲೆ‌ ಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ಜೆಡಿಎಸ್ ನಡೆಸಿದ ಅಭಿನಂದನಾ ಸಭೆಯಲ್ಲಿ ಕುಮಾರಸ್ವಾಮಿ ಅವರು ಈ ರೀತಿ ಮಾತನಾಡಿದ ರೀತಿ ಯಾವುದರ ಸಂಕೇತ ಎಂಬುದು ಇದುವರೆವಿಗೂ ಅರ್ಥವಾಗಿಲ್ಲ. ಆದರೆ ಇಲ್ಲಿ ಎಲ್ಲೋ ಅಸಮಾಧಾನದ ಅಲೆಯೊಂದು ಕಂಡಿರುವುದು ನಿಜ. ಈ ಹೇಳಿಕೆಯು ಮುಂದೆ ಯಾವ ಪರಿಣಾಮಗಳಿಗೆ ದಾರಿ ಮಾಡಿಕೊಡುವುದೋ ತಿಳಿದಿಲ್ಲ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here