ಮಂಗಳೂರಿನಲ್ಲಿ ನಡೆದಿದ್ದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ಸಿಡಿಯನ್ನು ನಿನ್ನೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಬಿಡುಗಡೆ ಮಾಡಿದ್ದರು. ಆದರೆ ಈ ಬಗ್ಗೆ ಅಂದರೆ ಸಿಡಿಯಲ್ಲಿನ ವಿಡಿಯೋ ಬಗ್ಗೆ ತನಿಖೆ ನಡೆಯಬೇಕೆಂದು ಮಂಗಳೂರು ಪೋಲಿಸ್ ಕಮಿಷನರ್ ಅವರು ಹೇಳಿದ್ದಾರೆ. ಕಮೀಷನರ್ ಅವರು ನೀಡಿರುವ ಹೇಳಿಕೆಯ ಬೆನ್ನಲ್ಲೇ ಕುಮಾರಸ್ವಾಮಿ ಅವರು ಸರಣಿ ಟ್ವೀಟ್ ಗಳ ಮೂಲಕ ಬಿಜೆಪಿ ಹಾಗೂ ಪೋಲಿಸ್ ಇಲಾಖೆ ವಿರುದ್ಧ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ. ಅವರು ಟ್ವೀಟ್ ನಲ್ಲಿ ಬಿಜೆಪಿ ನಾಯಕರು ಸಿಡಿ ಕುರಿತಾಗಿ ಕೊಟ್ಟ ಹೇಳಿಕೆಗಳಿಗೆ ಉತ್ತರ ನೀಡಿದ್ದಾರೆ.

ಸಿಎಂ ಅವರು ಇವನ್ನು ಕಟ್ ಪೇಸ್ಟ್ ವಿಡಿಯೋ ಎಂದಿದ್ದಾರೆ, ಅವರಿಗೆ ಇದರ ಸತ್ಯಾಸತ್ಯತೆ ತಿಳಿಯಲು ತಜ್ಞರ ವರದಿ ತರಿಸಿಕೊಳ್ಳುವ ಧೈರ್ಯ ಇದೆಯೆ? ಎಂದು ಪ್ರಶ್ನೆ ಮಾಡಿದ್ದಾರೆ. ನಾನು ಉಪಚುನಾವಣೆಯಲ್ಲಿ ಸೋತ ಹತಾಶೆಯಿಂದ ಸ್ಥಿಮಿತ ಕಳೆದುಕೊಂಡು ಮಂಗಳೂರು ಗಲಭೆ ವಿಡಿಯೋ ಮಾಡಿರುವುದಾಗಿ ಹೇಳಿದ ಲಕ್ಷ್ಮಣ ಸವದಿಯವರು ಯಾವ ಸ್ಥಿಮಿತ ಕಳೆದುಕೊಂಡು ಸದನದಲ್ಲಿ ನೀಲಿ ಚಿತ್ರ ನೋಡಿದರು ಎಂದು ಪ್ರಶ್ನೆ ಮಾಡಿದ್ದಾರೆ. ಕುಮಾರ ಸ್ವಾಮಿ ಅವರ ಕಾಲದಲ್ಲಿ ಕೂಡಾ ಅದೇ ಪೋಲಿಸರು ಇದ್ದರೆಂದು ಹೇಳಿದ ಬೊಮ್ಮಾಯಿ ಅವರಿಗೆ, ನನ್ನ ಕಾಲದಲ್ಲಿ ಏಕೆ ಗಲಭೆ, ಗೋಲಿಬಾರ್ ಆಗಲಿಲ್ಲ ಎಂದು ಪ್ರಶ್ನೆ ಹಾಕಿದ್ದಾರೆ.

ಸದಾನಂದ ಗೌಡರು ಸಿಡಿ ಬಗ್ಗೆ ವ್ಯಂಗ್ಯವಾಡಿದ್ದು, ಸಿಡಿಗಳು ಬಯಲಾದರೆ ಬಿಜೆಪಿಗರು ಬೆತ್ತಲಾಗುತ್ತಾರಷ್ಟೇ ಎಂದು ಎಚ್ಚರಿಕೆ ನೀಡಿದ್ದಾರೆ. ಶೋಭಾ ಕರಂದ್ಲಾಜೆ ಅವರಿಗೆ ಉತ್ತರ ನೀಡುತ್ತಾ ಅವರು ಮಂಗಳೂರಿನಲ್ಲಿ ರಾಜಕೀಯ ಮಾಡುತ್ತಿರುವುದು ನಾನಲ್ಲ, ನೀವು ಎಂದಿದ್ದು ಸಮುದ್ರ ತೀರದ ನಗರಗಳು ವಾಣಿಜ್ಯವಾಗಿ ಬೆಳೆದಿವೆ. ಆದರೆ ಬಿಜೆಪಿ ಅವರ ಚಿಲ್ಲರೆ ರಾಜಕಾರಣದಿಂದಾಗಿ ಮಂಗಳೂರು ವಾಣಿಜ್ಯವಾಗಿ ಬೆಳೆಯಲು ಅಡ್ಡಗಾಲಾಗಿದೆ ಎಂದು ಅವರು ಒಟ್ಟು ಹನ್ನೆರಡು ಟ್ವೀಟ್ ಗಳನ್ನು ಮಾಡಿ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here