ಯಾವುದಾದರೂ ಒಂದು ಪ್ರತಿಭಟನೆ ಅಥವಾ ರಾಜಕೀಯ ಪಕ್ಷಗಳ ಯಾವುದಾದರೂ ಹೋರಾಟಗಳು ನಡೆದಾಗ, ವಿರೋಧಿಗಳ ಬಣದಿಂದ, ಆ ರಾಜಕೀಯ ನಾಯಕರನ್ನು ವಿರೋಧಿಸುವ ಕಡೆಯವರು ಹಾಸ್ಯ ಮಾಡುವಂತೆ ವಿಡಿಯೋಗಳನ್ನು ಮಾಡುವುದು, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದು ಒಂದು ಟ್ರೆಂಡ್ ಆಗಿದೆ. ಅದಾದ ನಂತರ ಆ ವಿಡಿಯೋ ಮಾಡಿದವರನ್ನು ಪರವಾಗಿ ಮಾತನಾಡುವವರು ಹೊಗಳಿದರೆ, ವಿರೋಧಿಗಳು ಅವಾಚ್ಯ ಪದಗಳನ್ನು ಬಳಸಿ ನಿಂದನೆ ಮಾಡುತ್ತಾರೆ. ಮೊನ್ನೆ ಡಿಕೆಶಿ ಅವರ ಬಂಧನವನ್ನು ವಿರೋಧಿಸಿ ಫ್ರೀಡಂ ಪಾರ್ಕ್ ವರೆಗೂ ನಡೆದ ಪ್ರತಿಭಟನಾ ರ್ಯಾಲಿಯಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಭಾಗವಹಿಸಿರಲಿಲ್ಲ‌.

ಈ ವಿಷಯದ ಕುರಿತಾಗಿ ಅವರು ಮಾದ್ಯಮಗಳಿಗೆ ನೀಡಿದ ಹೇಳಿಕೆಯ ಕುರಿತಾಗಿ ಮಹೇಶ್ ವಿಕ್ರಂ ಹೆಗ್ಡೆ ಎನ್ನುವವರು, ಒಂದು ವಿಡಿಯೋ ಮಾಡಿ, ಕುಮಾರಸ್ವಾಮಿ ಅವರನ್ನು ಟೀಕಿಸುವಂತೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ‌. ವೈರಲ್ ಆದ ಹಿನ್ನೆಲೆಯಲ್ಲೇ ಈಗ ವಿಡಿಯೋ ಮಾಡಿದ ವ್ಯಕ್ತಿಯ ಬಗ್ಗೆ ಕೂಡಾ ವ್ಯಾಪಕವಾಗಿ ಅವಾಚ್ಯ ನಿಂದನೆ ಕೂಡಾ ಆರಂಭವಾಗಿದೆ. ಆತ ಕುಮಾರ ಸ್ವಾಮಿಯವರನ್ನು ನಿಮ್ಮದೇ ಮೈತ್ರಿ ಸರ್ಕಾರ ಉಳಿಸಲು ಡಿಕೆಶಿ ಆಮಂತ್ರಣ ಪಡೆದು ಮುಂಬೈಗೆ ಹೋಗಿದ್ರಾ? ಮಂಡ್ಯದಲ್ಲಿ ನಾವಿಬ್ಬರೂ ಜೋಡೆತ್ತು ಎಂದೆಲ್ಲಾ ಹೇಳಿ ಈಗ ಯಾಕೆ ಕೈ ಬಿಟ್ಟಿರಿ ಎಂದೆಲ್ಲ? ಪ್ರಶ್ನೆ ಮಾಡಿದ್ದಾರೆ‌.

ವಿಡಿಯೋ ವೈರಲ್ ಆದ ನಂತರದಲ್ಲಿ, ಕೆಲವರು ವಿಡಿಯೋ ಮಾಡಿದ ವ್ಯಕ್ತಿಯ ಕುಟುಂಬದವರ ಫೋಟೋ ಕೂಡಾ ಬಳಸಿ ಅವಾಚ್ಯ ನಿಂದನೆ ಮಾಡಿದ್ದಾರೆ. ಬಹುಶಃ ಇಂತಹ ವಿಡಿಯೋಗಳ ಕಾರಣದಿಂದ ಕಾರಣವಿಲ್ಲದೇ ಕುಟುಂಬದ ಸದಸ್ಯರು ಕೂಡಾ ನಿಂದನೆಗೆ ಒಳಗಾಗಿದ್ದು ಖೇದಕರ ಎಂದೇ ಹೇಳಬಹುದಾಗಿದೆ. ಒಟ್ಟಿನಲ್ಲಿ ಈಗ ಮಹೇಶ್ ವಿಕ್ರಂ ಹೆಗ್ಡೆ ಅವರ ವಿಡಿಯೋ ವೈರಲ್ ಆಗಿ ಸಾಕಷ್ಟು ಪರ ವಿರೋಧ ಪ್ರತಿಕ್ರಿಯೆಗಳನ್ನು ಪಡೆಯುತ್ತಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here