ಈ ಬಾರಿಯ ಲೋಕಸಭಾ ಚುನಾವಣೆಯ ಪ್ರಚಾರವನ್ನು , ಅಲ್ಲಿ ನಡೆಯುತ್ತಿರುವ ಪ್ರಕ್ರಿಯೆಗಳನ್ನು ನೋಡಿ ನಟಿ ಭಾರತಿ ವಿಷ್ಣುವರ್ಧನ್ ಅವರು ಅಸಮಾಧಾನ ಪಟ್ಟಿದ್ದಾರೆ. ಚುನಾವಣೆಗಾಗಿ ದೇಶದಲ್ಲೆಡೆ ಅಬ್ಬರಿಯಾಗಿ ಪ್ರಚಾರ ಕಾರ್ಯ ಅಬ್ಬರದಿಂದ ನಡೆಯುತ್ತಿದೆ. ಆದರೆ ಕೆಲವು ರಾಜಕೀಯ ಪಕ್ಷಗಳು ಮಾತ್ರ ಸಿನಿಮಾ ನಟ-ನಟಿಯರನ್ನು ಅವರ ಅನುಮತಿಯನ್ನೇ ಪಡೆದುಕೊಳ್ಳದೇ ಅವರ ಫೋಟೋ ಬಳಕೆ ಮಾಡಿಕೊಳ್ಳುತ್ತಿದೆ. ಇಂತಹ ಒಂದು ಬೆಳವಣಿಗೆ ಎಷ್ಟರ ಮಟ್ಟಿಗೆ ಸರಿ ಎಂದು ಭಾರತಿ ಅವರು ಅಸಮಾಧಾನಗೊಂಡಿದ್ದಾರೆ. ಭಾರತಿಯವರು ಈ ರೀತಿ ಮಾತನಾಡಲು ಕಾರಣವೇನು? ಎಂಬ ಪ್ರಶ್ನೆ ಹಲವರಲ್ಲಿ ಮೂಡಬಹುದು. ಇದಕ್ಕೆ ಕಾರಣ ಇಲ್ಲದಿಲ್ಲ. ಭಾರತಿ ವಿಷ್ಣುವರ್ಧನ್ ಅವರು ತಮ್ಮ ಈ ಅಸಮಾಧಾನಕ್ಕೆ ಕಾರಣವನ್ನು ಕೂಡಾ ಅವರು ಹೇಳಿದ್ದಾರೆ.

ಇಂದು ಅಂಬರೀಶ್ ಅವರಿಲ್ಲ. ಆದರೆ ಹಿಂದೆ ಅಂಬರೀಶ್ ಹಾಗೂ ವಿಷ್ಣುವರ್ಧನ್ ಕುಚುಕು ಗೆಳೆಯರಂದೇ ಹೆಸರಾಗಿದ್ದವರು. ಒಂದು ವೇಳೆ ವಿಷ್ಣು ಅವರು ಬದುಕಿದ್ದರೆ ಸುಮಲತಾ ಗೆ ಬೆಂಬಲ ನೀಡುತ್ತಿದ್ದರೋ ಇಲ್ಲವೋ ಗೊತ್ತಿಲ್ಲ. ಆದರೆ ಸುಮಲತ ಮಾತ್ರ ತಮ್ಮ ಪಕ್ಷೇತರ ಅಭ್ಯರ್ಥಿಯಾಗಿ ಮಂಡ್ಯದಿಂದ ಸ್ಪರ್ದಿಸಿದ್ದರೂ ಅವರು ವಿಷ್ಣುವರ್ಧನ್ ಹೆಸರನ್ನು ಮಾತ್ರ ಎಲ್ಲೂ ಬಳಸಿಲ್ಲ. ಸುಮಲತ ಅಂಬರೀಶ್ ಹೆಸರನ್ನು ಬಿಟ್ಟು ಬೇರೆಯವರ ಹೆಸರನ್ನು ಬಳಸಿಲ್ಲ. ಇನ್ನು ದರ್ಶನ್ ಹಾಗೂ ಯಶ್ ಕೂಡಾ ವೈಯಕ್ತಿಕವಾಗಿ ಸುಮಲತ ಪರವಾಗಿ ಇದ್ದು, ಅವರು ಕೂಡಾ ವಿಷ್ಣುವರ್ಧನ್ ಅವರ ಹೆಸರನ್ನು ಬಳಸದೆ ತಮ್ಮ ಪ್ರಚಾರ ಕಾರ್ಯವನ್ನು ಮಾಡುತ್ತಿದ್ದಾರೆ ಎಂದ ಭಾರತಿಯವರು ಮಾನ್ಯ ಮುಖ್ಯಮಂತ್ರಿ ಅವರ ಬಗ್ಗೆ ಮಾತ್ರ ಅಸಮಾಧಾನಗೊಂಡಿದ್ದಾರೆ.

ರಾಜ್ಯದ ಮುಖ್ಯಮಂತ್ರಿಯವರಾದ ಹೆಚ್.ಡಿ.ಕುಮಾರಸ್ವಾಮಿಯವರು ಮಾತ್ರ ಎರಡು ದಿನಗಳ ಹಿಂದೆ ಪ್ರಚಾರದ ಸಂದರ್ಭದಲ್ಲಿ ಹಿರಿಯ ನಟ ಡಾ.ವಿಷ್ಣುವರ್ಧನ್ ಅವರ ಭಾವಚಿತ್ರ ಬಳಕೆ ಮಾಡಿಕೊಂಡಿದ್ದಾರೆ. ಇದು ಎಷ್ಟರಮಟ್ಟಿಗೆ ಸರಿ? ಎಂದು ಭಾರತಿಯವರು ಪ್ರಶ್ನಿಸುತ್ತಾ ಕೆಲವು ಹಳೆಯ ವಿಚಾರಗಳನ್ನು ಕೂಡಾ ನೆನಪಿಸಿಕೊಂಡಿದ್ದಾರೆ.
ಡಾ.ವಿಷ್ಣುವರ್ಧನ್ ಅವರು ನಿಧನರಾಗಿ ಸುಮಾರು ಹತ್ತುವರ್ಷಗಳೇ ಆಗಿವೆ. ಆದರೆ ಈವರೆಗೂ ಸರ್ಕಾರ ಡಾ.ವಿಷ್ಣುವರ್ಧನ್ ಸ್ಮಾರಕಕ್ಕೆ ಸ್ಥಳ ನಿಗದಿ ಮಾಡಿಲ್ಲ.

ಮೊದಲು ಸಿದ್ಧರಾಮಯ್ಯನವರು ಅಧಿಕಾರದಲ್ಲಿದ್ದಾಗ ಆಗ ಮಾಡೋಣ, ಈಗ ಮಾಡೋಣ ಎಂದು ಹೇಳಿದರು. ನಂತರ ಕುಮಾರಸ್ವಾಮಿ ಅವರು ಅಧಿಕಾರಕ್ಕೆ ಬಂದ ಮೇಲೆ ಕೂಡಾ ಚರ್ಚೆ ನಡೆಸಲಾಗಿದೆ ಅವರು ಕೂಡಾ ಹಾಗೇ ಹೇಳುತ್ತಾ ಬಂದಿದ್ದಾರೆಯೇ ಹೊರತು ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಜೊತೆಗೆ ಇದೇ ಹೆಚ್.ಡಿ.ಕುಮಾರಸ್ವಾಮಿ ಅವರು ಡಾ.ವಿಷ್ಣುವರ್ಧನ್ ಅಭಿನಯದ “ಸೂರ್ಯವಂಶ” ಚಿತ್ರವನ್ನು ನಿರ್ಮಾಣ ಮಾಡಿದ್ರು. ಆಗ ಏನೆಲ್ಲಾ ನಡೆದಿದಲತ್ತು ಎಂದು ನಾನು ಈಗ ಮಾತನಾಡುವುದಿಲ್ಲ ಎಂದಿದ್ದಾರೆ.

ಇಂದು ಭೌತಿಕವಾಗಿ ನಮ್ಮೊಂದಿಗೆ ಇಲ್ಲದ ವಿಷ್ಣುವರ್ಧನ್ ಅವರು ಭಾವಚಿತ್ರ ಬಳಕೆ ಮಾಡಿಕೊಂಡಿದ್ದಾರೆ. ಅಂಬರೀಶ್ ಕುಟುಂಬಕ್ಕೆ ಆಪ್ತರಾದ ಅವರ ಭಾವಚಿತ್ರವನ್ನು ಸುಮಲತ ಅವರೇ ಬಳಸಿಲ್ಲ. ಈ ವಿಷಯಗಳೆಲ್ಲಾ ಕುಮಾರಸ್ವಾಮಿಯವರಿಗೆ ಅರ್ಥವಾಗಬೇಕು. ವಿಷ್ಣುವರ್ಧನ್ ಅವರು ಸಾರ್ವಜನಿಕವಾಗಿ ಒಳ್ಳೆ ಹೆಸರನ್ನು ಪಡೆದವರಾಗಿದ್ದರು.ಅಂತಹವರ ಭಾವಚಿತ್ರವನ್ನು ಕುಮಾರಸ್ವಾಮಿ ಅವರು ತಮ್ಮ ಹಾಗೂ ಸುಮಲತರ ನಡುವೆ ಇರುವ ಸ್ಪರ್ಧೆಗೆ ಬಳಸಿಕೊಳ್ಳುವುದು ಸರಿಯಿಲ್ಲ ಎಂದಿರುವ ಅವರು ಈ ಬಗ್ಗೆ ಚುನಾವಣಾ ಆಯೋಗದ ಗಮನ ಸೆಳೆಯುವುದಾಗಿ ಹೇಳಿದ್ದಾರೆ. ಅಲ್ಲದೆ ಅವರು ವಿಷ್ಣುವರ್ಧನ್ ಅವರ ಭಾವಚಿತ್ರ ಬಳಸುವುದನ್ನು ನಿಲ್ಲಿಸಬೇಕು ಎಂದಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here