ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ದೇವೇಗೌಡರ ಬಗ್ಗೆ ಹೇಳಿಕೆ ನೀಡಿದ ಬೆನ್ನಲ್ಲೇ ಇದೀಗ ಮಾಜಿ ಸಚಿವರಾದ ಜಮೀರ್ ಅಹ್ಮದ್ ಅವರು ಕೂಡಾ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಬಗ್ಗೆ ಹೇಳಿಕೆಯೊಂದನ್ನು ನೀಡುತ್ತಾ, ಮೈತ್ರಿ ಸರ್ಕಾರದ ಪತನಕ್ಕೆ ಕುಮಾರಸ್ವಾಮಿ ಅವರೇ ಕಾರಣ ಎಂದು ಗಂಭೀರ ಆರೋಪವನ್ನು ಮಾಡಿದ್ದಾರೆ. ದೇವೇಗೌಡರು ಸಿದ್ಧರಾಮಯ್ಯನವರಿಂದ ಸರ್ಕಾರ ಬಿದ್ದು ಹೋಯಿತು ಎಂದು ನೀಡಿದ್ದ ಹೇಳಿಕೆಯನ್ನು ಯಾವ ಕಾರಣದಿಂದ ಹೇಳಿದ್ದಾರೋ ನನಗಂತೂ ಗೊತ್ತಿಲ್ಲ ಎಂದಿರುವ ಜಮೀರ್ ಅಹ್ಮದ್ ಅವರು, ಎಲ್ಲಾ ಶಾಸಕರಲ್ಲೂ ಅಸಮಾಧಾನವಿತ್ತು ಎಂದು ಹೇಳಿದ್ದಾರೆ.

ಹಿಂದೆ ತಾಜ್ ವೆಸ್ಟೆಂಡ್ ಹೋಟೇಲಿನ ಘಟನೆಯೊಂದರಲ್ಲಿ ತಾನು ಕುಮಾರಸ್ವಾಮಿಯವರಿಗೆ ಅಣ್ಣ ಇನ್ನಾದರೂ ಎಲ್ಲಾ ಸರಿಪಡಿಸಿಕೊಂಡು, ಮಂತ್ರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅವರವರ ಇಲಾಖೆಯಲ್ಲಿ ಅವರ ಕೆಲಸ ಮಾಡಿಸಿಕೊಡಿ ಎಂದಹ ಹೇಳಿದ್ದ, ಅದರೆ ಅವರು ನನ್ನ ಮಾತು ಕೇಳಲಿಲ್ಲ. ಆದ ಕಾರಣ ಸರ್ಕಾರವು ಬೀಳಲು ಸಿದ್ಧರಾಮಯ್ಯನವರು ಕಾರಣರಲ್ಲ ಎಂದು ಜಮೀರ್ ಅಹ್ಮದ್ ಅವರು ಹೇಳಿದ್ದಾರೆ. ಸರ್ಕಾರ ಹೋಗಿರುವುದು ಜೆಡಿಎಸ್ ಶಾಸಕರ ತಪ್ಪಿನಿಂದ, ಅವರು ಮಾಡಿದ ತಪ್ಪಿಗೆ ಬೇರೆಯವರ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.

ಸಿದ್ದರಾಮಯ್ಯನವರು ಹೇಳಿರುವ ವಿಚಾರಗಳು ನೂರಕ್ಕೆ ನೂರು ಸತ್ಯವಾಗಿದ್ದು , ಮೈತ್ರಿ ಸರ್ಕಾರ ರಚನೆಯಾದ ದಿನದಿಂದಲೂ ಬಿಜೆಪಿಯವರು ಅಧಿಕಾರ ಪಡೆಯುವ ಪ್ರಯತ್ನ ಮಾಡುತ್ತಲೇ ಇದ್ದರು. ಅದಕ್ಕೆ ಪೂರಕವಾಗಿ ಮೈತ್ರಿ ಶಾಸಕರಲ್ಲಿದ್ದ ಅಸಮಾಧಾನದಿಂದ ಅವರು ತಮ್ಮ ಶಾಸಕ ಸ್ಥಾನಕ್ಕೆ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೋದರು. ಹಾಗೇನಾದೂ 17 ಮಂದಿ ಶಾಸಕರನ್ನು ಸಿದ್ದರಾಮಯ್ಯ ಅವರೇ ಕಳುಹಿಸಿದ್ದಾಗಿದ್ದರೆ ಅವರೇ ಏಕೆ ಅಷ್ಟು ಜನರನ್ನು ಅನರ್ಹ ಮಾಡುತ್ತಿದ್ದರು. ದೇವೇಗೌಡರು ಅದನ್ನು ಅರ್ಥಮಾಡಿಕೊಳ್ಳಬೇಕಿದೆ ಎಂದಿದ್ದಾರೆ

ಜಮೀರ್ ಅಹ್ಮದ್ ಅವರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here