ರಾಜ್ಯದ ರಾಜಕೀಯ ರಂಗದಲ್ಲೂ ಕೊರೋನಾ ತನ್ನ ರಣಕೇಕೆ ತೋರಿಸಿದೆ. ಕುಣಿಗಲ್​ ಕ್ಷೇತ್ರದ ಶಾಸಕ ಡಾ. ಎಚ್​.ಡಿ. ರಂಗನಾಥ್​ ಅವರಿಗೂ ಕರೊನಾ ಸೋಂಕು ತಗುಲಿದ್ದು, ರಾಜ್ಯ- ರಾಷ್ಟ್ರಮಟ್ಟದ ಕಾಂಗ್ರೆಸ್​ ವಲಯದಲ್ಲೂ ಆತಂಕ ಶುರುವಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪದಗ್ರಹಣ ಸ್ವೀಕಾರ ಸಮಾರಂಭದಲ್ಲೂ ಶಾಸಕ ರಂಗನಾಥ್​ ಮಂಚೂಣಿಯಲ್ಲಿ ನಿಂತು ಓಡಾಡಿದ್ದರು.

ಎರಡು ದಿನಗಳ‌ ಹಿಂದಷ್ಟೇ ತಾಲೂಕಿನಲ್ಲಿ ಕರೊನಾ ಸೋಂಕು ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತ ಲಾಕ್​ಡೌನ್ ಜಾರಿ ಕುರಿತು ಕುಣಿಗಲ್​ ಪಟ್ಟಣದಲ್ಲೂ ಶಾಸಕರು ಸಭೆ ನಡೆಸಿದ್ದರು. ಈ ವೇಳೆ ತಹಸೀಲ್ದಾರ್ ಮತ್ತು ಇಒ ಅವರು ಶಾಸಕರ ಅಕ್ಕಪಕ್ಕದಲ್ಲಿದ್ದರು. ಈಗ ಅವರು ಕೂಡ ಕ್ವಾರಂಟೈನ್‌ಗೆ ಒಳಗಾಗಲಿದ್ದು, ಇಡೀ ತಾಲೂಕು ಆಡಳಿತವೇ ಸ್ತಬ್ಧವಾಗಲಿದೆ.

ಕುಣಿಗಲ್​ ಪಟ್ಟಣದ ಪೊಲೀಸ್​ ಠಾಣೆಯ ಪೇದೆಯೊಬ್ಬರಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ನಿನ್ನೆ (ಭಾನುವಾರ) ಸಿಪಿಐ, ಎಸ್‌ಐ ಸೇರಿ 14 ಪೊಲೀಸರು ಕ್ವಾರಂಟೈನ್​ಗೆ ಒಳಗಾಗಿದ್ದರು. ಠಾಣೆಯನ್ನು ಸೀಲ್​ಡೌನ್​ ಮಾಡಲಾಗಿದೆ. ಇತ್ತೀಚೆಗೆ (ಜು.2) ಬೆಂಗಳೂರಿನಲ್ಲಿ ನಡೆದ ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲೂ ಶಾಸಕ ರಂಗನಾಥ್​ ಪಾಲ್ಗೊಂಡಿದ್ದರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here