ಕುರಿ ಪ್ರತಾಪ್ ಮತ್ತು ಸುನಿಲ್ ಕುರಿ ಬಾಂಡ್ ಇಬ್ಬರು ಒಟ್ಟಿಗೆ ಬೆಳೆದು ಬಂದ ಕಲಾವಿದರು. ಅದರಲ್ಲೂ ಕುರಿ ಪ್ರತಾಪ್ ಅವರನ್ನು ತೆರೆಗೆ ತಂದವರೇ ಈ‌ ಸುನಿಲ್ ಅವರು. ಕುರಿ ಬಾಂಡ್ ಎನ್ನುವ ಕಾರ್ಯಕ್ರಮದ ಮುಖಾಂತರ ಜನರಿಗೆ ವರ್ಷಗಳ ವರೆಗೆ ಮನರಂಜನೆ ನೀಡಿದವರು ಈ ಜೋಡಿ. ಈ ಹಾಸ್ಯ ಕಾರ್ಯಕ್ರಮದ ಮುಖಾಂತರ ಜನಗಳನ್ನು ಕುರಿ ಮಾಡಿ ಅವರಿಗೆ ಏಮಾರಿಸಿ, ನಂತರ ಅವರಿಗೆ ಒಂದು ಗಿಫ್ಟ್ ಕೊಟ್ಟು ಸಮಾಧಾನ ಮಾಡುತಿದ್ದಂತಹ‌ ಒಂದು ವಿಭಿನ್ನ ಕಾರ್ಯಕ್ರಮವಾಗಿ, ಜನರನ್ನು ನಗೆಗಡಲಲ್ಲಿ ತೇಲಿಸುತ್ತಿತ್ತು. ಈ ಕಾರ್ಯಕ್ರಮದಿಂದ ಪ್ರಸಿದ್ಧಿ ಪಡೆದ ಕುರಿ ಪ್ರತಾಪ ಅವರಿಗೆ ಸೃಜನ್ ಲೋಕೇಶ್ ಅವರ ಪ್ರೋಗ್ರಾಮ್ ಗೆ ಅವಕಾಶ ದೊರೆತ‌ ಮೇಲೆ ಪ್ರತಾಪ್ ಅವರು ಸುನಿಲ್ ಅವರನ್ನು ಮರೆತೇ ಬಿಟ್ಟರು. ಇವರ ಜೊತೆಗೆ ಬೆಳೆದು ಬಂದ ಹಾಸ್ಯ ನಟ ಚಿಕ್ಕಣ್ಣ ಕೂಡ ಇವರನ್ನು ಪೂರ್ತಿ ಮರೆತು ಬಿಟ್ಟರು.

ಸುನೀಲ್ ಅವರಿಗೆ ಬೇರೆ ಅವಕಾಶಗಳು ಸಿಗದೆ, ಸಂಬಳ ಇಲ್ಲದೆ ಜೀವನ ದುಸ್ತರವಾಗಿ, ಅವರು ಮನೆಯಿಂದ ಹೊರ ಬರಲಿಲ್ಲ. ಆದರೆ ಎಲ್ಲೋ ಅಪರೂಪಕ್ಕೆ ಅವಕಾಶಗಳು ಅವರಿಗೆ ದೊರೆತಾಗಲೂ ಅಂತ ಅವಕಾಶಗಳನ್ನು ಕುರಿ ಪ್ರತಾಪ್ ಮತ್ತು ಚಿಕ್ಕಣ್ಣ ತಪ್ಪಿಸುತ್ತಿದ್ದರಿಂದ ಮೊದಲೇ ಸೋತಿದ್ದ‌ ಕುರಿ ಬಾಂಡ್ ಸುನೀಲ್ ಅವರು , ಈಗ ಅವಕಾಶಗಳು ಸಿಗದೆ ಕಷ್ಟದಲ್ಲಿದ್ದ ಅವರ ಸಹನೆಯ ಕಟ್ಟೆ ಹೊಡೆದು, ಕೋಪ ಬಂದು ಬಾಯಿಗೆ ಬಂದ ಹಾಗೆ ಪ್ರತಾಪ್ ಮತ್ತು ಚಿಕ್ಕಣ್ಣ ಅವರನ್ನು ಬೈದಿರುವ ವಿಡಿಯೋ ವೈರಲ್ ಆಗಿದೆ. ವಿಡಿಯೋ ನೋಡಿದ ಜನರು ಈಗ ಕುರಿ ಪ್ರತಾಪ್ ಮತ್ತು ಚಿಕ್ಕಣ್ಣ ಅವರ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.

ಒಬ್ಬ ಡೈರೆಕ್ಟರ್ ಪ್ರತಾಪ್ ಅವರ ಬಳಿ ಸುನೀಲ್ ಅವರ ನಂಬರ್ ಕೊಡಿ ಅವರಿಗೆ ಸಿನಿಮಾದಲ್ಲಿ ಒಂದು ಅವಕಾಶ ಕೊಡುತ್ತೇವೆ ಅವರಿಗೆ ಒಂದು ಕ್ಯಾರೆಕ್ಟರ್ ಇದೆ ಎಂದು ಕೇಳಿದಾಗ, ಕುರಿಬಾಂಡ್ ಸುನಿಲ್ ಅವರ ನಂಬರ್ ಡೈರಿಯಲ್ಲಿ ಬರೆದಿಟ್ಟಿದ್ದೇನೆ ಎಂದು ಕಾರಣ ನೀಡಿದ ಪ್ರತಾಪ್, ಡೈರೆಕ್ಟರ್ ಅವರಿಗೆ ನಂಬರ್ ಕೊಡಲಿಲ್ಲ ಎಂದು ತಿಳಿದ ಸುನಿಲ್ ಕುರಿಬಾಂಡ್ ಅವರು ಬಾಯಿಗೆ ಬಂದ ಹಾಗೆ ಬೈದಿದ್ದಾರೆ. ಫೋನ್ ಇರಲಿಲ್ವಾ ನಿಮ್ಮತ್ರ , ಫೋನ್ ನಂಬರ್ ಕೊಡೋಕೆ ನಂಬರ್ ನ ಡೈರಿ ಅಲ್ಲಿ ಬರೆದಿಟ್ಟದ್ದೇನೆ ಎಂದು ಹೇಳಿದ್ದಿರ ಫೋನ್ ಯಾಕೆ ತೆರೆಯೋಕೆ ಇಟ್ಟಿದ್ದಿರ ಎಂದು ಸಿಟ್ಟಿನಿಂದ ಮಾತನಾಡಿದ್ದಾರೆ. ಜೊತೆಯಲ್ಲಿ ಇರುವಾಗ ಎಲ್ಲ ಚೆನ್ನಾಗಿ ಇತ್ತು,ಇವಾಗ ನಾನು ಕಷ್ಟದಲ್ಲಿ ಇದ್ದೇನೆ ಎಂದು ನನಗೆ ಮೋಸ ಮಾಡಿದ್ದೀರಾ ನಂಗೆ ಬಂದ ಅವಕಾಶ ಗಳನ್ನು ನಿಮಗೆ ಬಿಟ್ಟುಕೊಟ್ಟೆ ಇಂದು ನೀವು ನನಗೆ ಮೋಸ ಮಾಡಿದ್ದೀರಾ ನೀವು ಉದ್ದಾರ ಆಗಲ್ಲ ನೀವು ಬೆಳೆಯೋದಿಲ್ಲ ಎಂದೆಲ್ಲಾ ಟೀಕೆ ಮಾಡಿದ್ದಾರೆ ಕುರಿ ಬಾಂಡ್‌ ಸುನೀಲ್.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here