ಕುರಿ ಪ್ರತಾಪ್ ಅವರು ಬಿಗ್ ಬಾಸ್ ಸೀಸನ್ ಏಳರಲ್ಲಿ ಮನೆಯೊಳಗೆ ಹೋಗುತ್ತಿದ್ದಾರೆ ಎಂದು ತಿಳಿದಾಗಲೇ ಅವರ ಅಭಿಮಾನಿಗಳು ಹಾಗೂ ವೀಕ್ಷಕರು ಎಲ್ಲರಿಗೂ ಕೂಡಾ ಈ ಬಾರಿ ಮನೆಯಲ್ಲಿ ಭರ್ಜರಿ ಮನರಂಜನೆ ಸಿಗುವುದು ಖಚಿತ ಎನಿಸಿತ್ತು. ಅದರಂತೆ ಮನೆಯೊಳಗೆ ಪ್ರವೇಶ ಮಾಡುವಾಗಲೇ ವೇದಿಕೆಯ ಮೇಲೆಯೇ ಅವರು 90 ಒಳ ಚಡ್ಡಿಗಳ ಕಥೆಯನ್ನು ಹೇಳಿ ಒಳಗೆ ಹೋಗಿದ್ದರು‌. ಅನಂತರ ಬಿಗ್ ಬಾಸ್ ಆರಂಭವಾದ ಮೇಲೆ ಕೂಡಾ ಅವರು ಪ್ರೇಕ್ಷಕರನ್ನು ರಂಜಿಸುತ್ತಾ, ಮನೆಯ ಸದಸ್ಯರನ್ನು ರಂಜಿಸುತ್ತಾ ಮುಂದೆ ಸಾಗಿ ಏಳನೇ ವಾರಕ್ಕೆ ಬಂದಿದ್ದಾರೆ. ಅಲ್ಲದೆ ಈ ವಾರ ಅವರು ಮನೆಯ ಕ್ಯಾಪ್ಟನ್ ಕೂಡಾ ಆಗಿ ತಮ್ಮ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.

ಕುರಿ ಪ್ರತಾಪ್ ಬಿಗ್ ಹೌಸ್ ನ ಸ್ಟ್ರಾಂಗ್ ಕಂಟೆಸ್ಟಂಟ್ ಗಳಲ್ಲಿ ಒಬ್ಬರಾಗಿ ಹೊರ ಹೊಮ್ಮಿದ್ದಾರೆ. ಅವರ ಆಟ, ಅವರು ಟಾಸ್ಕ್ ಗಳನ್ನು ಮಾಡುವ ವಿಧಾನ ಎಲ್ಲರಿಗೂ ಮೆಚ್ಚುಗೆ ಕೂಡಾ ಆಗಿದೆ‌. ಇನ್ನು ಮನೆಯಲ್ಲಿ ಸಣ್ಣ ಪುಟ್ಟ ವಾದ ವಿವಾದ , ರಣ ತಂತ್ರಗಳು ಸಾಮಾನ್ಯವೇ ಆದ್ದರಿಂದ ಎಲ್ಲದರಲ್ಲೂ ಕುರಿ ತಮ್ಮ ಜಾಣ್ಮೆಯನ್ನು ಪ್ರದರ್ಶನ ಮಾಡುತ್ತಾ ಬಂದು, ಏಳನೆಯ ವಾರದಲ್ಲಿ ಮನೆಯ ಕ್ಯಾಪ್ಟನ್ ಆಗಿ ಆಯ್ಕೆಯಾಗಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಲೇ, ಸದಾ ಹಾಸ್ಯದ ಮೂಲಕ ಎಲ್ಲರನ್ನೂ ರಂಜಿಸುತ್ತಿದ್ದ ಅವರು ಭಾವುಕರಾಗಿ ಕಣ್ಣೀರು ಹಾಕಿದ್ದಾರೆ.

ಕುರಿ ಪ್ರತಾಪ್ ಅವರು ಕಣ್ಣೀರು ಹಾಕಿದ್ದಾದರೂ ಏತಕ್ಕೆ ಎನ್ನುವುದಾದರೆ, ಮನೆಯ ಸದಸ್ಯರ ಆಹಾರಕ್ಕಾಗಿ ನೀಡಿದ್ದ ಅಕ್ಕಿಯು ಖಾಲಿಯಾಗಿದ್ದರಿಂದ, ಇದ್ದ ಅಕ್ಕಿಯಲ್ಲೇ ಅನ್ನವನ್ನು ಮಾಡಲಾಗಿದೆ. ಆದರೆ ಮನೆಯ ಎಲ್ಲಾ ಸದಸ್ಯರಿಗೆ ಸಾಕಾಗುವಷ್ಟು ಅನ್ನ ಆಗಿರಲಿಲ್ಲ. ಎಲ್ಲರಿಗೂ ಹೊಟ್ಟೆ ತುಂಬುವಷ್ಟು ಅನ್ನ ಇಲ್ಲದ್ದರಿಂದ ಅವರು ತಟ್ಟೆ ತೊಳೆಯುತ್ತಾ ಕಣ್ಣೀರು ಹಾಕಿದ್ದಾರೆ. ಆಗ ಚಂದ್ರಿಕಾ ಅವರು ಕುರಿ ಗೆ ತಾವೇ ತಮ್ಮ ಕೈಯ್ಯಾರೆ ಅನ್ನು ತಿನಿಸಿ ಅವರನ್ನು ಸಮಾಧಾನ ಮಾಡಿದ್ದಾರೆ. ಅಲ್ಲಿ ಸಮಾಧಾನ ಮಾಡಿಕೊಂಡ ಕುರಿ, ಮತ್ತೆ ಬಾತ್ ರೂಂ ಏರಿಯಾಕ್ಕೆ ಹೋಗಿ ಅಲ್ಲಿ ಏಕಾಂತದಲ್ಲಿ ಕಣ್ಣೀರು ಹಾಕಿದ್ದಾರೆ.

Photos and video :- colors kannada

https://m.facebook.com/story.php?story_fbid=1433076743541156&id=102459466602897

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here