ಕನ್ನಡ ಚಿತ್ರರಂಗದ ಈ ವರ್ಷದ ಅತಿ ನಿರೀಕ್ಷಿತ ಸಿನಿಮಾ ಎಂದೆನಿಸಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಐವತ್ತನೇ ಸಿನಿಮಾ ಕುರುಕ್ಷೇತ್ರ. ಕಳೆದ ಒಂದೂವರೆ ವರ್ಷದಿಂದ ಬಕಪಕ್ಷಿಯಂತೆ ಡಿ ಬಾಸ್ ಅಭಿಮಾನಿಗಳು ಕುರುಕ್ಷೇತ್ರ ಸಿನಿಮಾಗಾಗಿ ಕಾದುಕುಳಿತಿದ್ದರು. ಆಗಸ್ಟ್ ಎರಡನೇ ತಾರೀಖು ಚಾಲೆಂಜಿಂಗ್ ಸ್ಟಾರ್ ನಟನೆಯ ಐವತ್ತನೇ ಸಿನಿಮಾ ಐದು ಭಾಷೆಗಳಲ್ಲಿ ವಿಶ್ವಾದ್ಯಂತ ತೆರೆಗೆ ಅಪ್ಪಳಿಸಲಿದೆ. ಆಗಸ್ಟ್ ಎರಡನೇ ತಾರೀಖು ಸಿನಿಮಾ ಕಣ್ತುಂಬಿಕೊಳ್ಳುವ ಮೊದಲೇ ಇಂದು ಡಿ ಬಾಸ್ ಅಭಿಮಾನಿಗಳಿಗೆ ಕುರುಕ್ಷೇತ್ರ ಚಿತ್ರತಂಡ ಕುರುಕ್ಷೇತ್ರ ಚಿತ್ರದ ಟ್ರೈಲರ್ ರಿಲೀಸ್ ಮಾಡಿದ್ದು ಟ್ರೈಲರ್ ನೋಡಿದ ಬಳಿಕ ಕುರುಕ್ಷೇತ್ರ ಚಿತ್ರದ ಮೇಲಿನ ನಿರೀಕ್ಷೆ ಗರಿಗೆದರಿದೆ.

ಅತ್ತ ಕೋರಂಮಗಲದ ಇಂದೋರ್ ಸ್ಟೇಡಿಯಂನಲ್ಲಿ ಕುರುಕ್ಷೇತ್ರ ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭ ನಡೆಯುತ್ತಿದ್ದು ಇತ್ತ ಯೂಟ್ಯೂಬ್‌ನಲ್ಲಿ ಕುರುಕ್ಷೇತ್ರ ಚಿತ್ರದ ಟ್ರೈಲರ್ ಜಬರ್ದಸ್ತ್ ಎಂಟ್ರಿ ಪಡೆದಿದೆ. ಇದೇ ಮೊದಲ ಬಾರಿಗೆ ಕನ್ನಡದಲ್ಲಿ ದುಬಾರಿ ಬಜೆಟ್ ಚಿತ್ರವೊಂದು ತ್ರೀಡಿ ಮೂಲಕ ತೆರೆಗೆ ಐದು ಭಾಷೆಗಳಲ್ಲಿ

ತೆರೆಗೆ ಬರುತ್ತಿದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆಯಾಗಿ ರೆಬೆಲ್ ಸ್ಟಾರ್ ಅಂಬರೀಶ್ , ಕ್ರೇಜಿಸ್ಟಾರ್ ವಿ ರವಿಚಂದ್ರನ್ , ಆಕ್ಸನ್ ಕಿಂಗ್ ಅರ್ಜುನ್ ಸರ್ಜಾ , ಸೋನು ಸೂದ್ , ನಿಖಿಲ್ ಕುಮಾರ್ , ಮೇಘನಾ ರಾಜ್ , ಭಾರತಿ ವಿಷ್ಣುವರ್ಧನ್ ಸೇರಿ ದೊಡ್ಡ ತಾರಬಳಗ ಇರುವ ಕುರುಕ್ಷೇತ್ರ ಚಿತ್ರದ ಟ್ರೈಲರ್ ಇಲ್ಲಿದೆ ನೋಡಿ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here