ಒಬ್ಬ ಪಿಲಿಫ್ಪೈ‌ನ್ಸ್ ದೇಶದ ಮಹಿಳಾ ಪರಿಚಾರಿಕೆ ಅಥವಾ ಮನೆ ಕೆಲಸದ ಮಹಿಳೆಗೆ ಮಧ್ಯಪ್ರಾಚ್ಯ ದೇಶದಲ್ಲಿ ಆಕೆಯನ್ನು ಕೆಲಸಕ್ಕೆ ಇಟ್ಕೊಂಡಿರವ ಒಂದು ಕುಟುಂಬ ಬಹಳ ಕ್ರೂರವಾಗಿ, ಮಾನವೀಯತೆ ಅನ್ನೋದೆ ಇಲ್ಲ ಅನ್ನೋ ಹಾಗೆ ಶಿಕ್ಷೆಯೊಂದನ್ನು ನೀಡಿದ್ದಾರೆ. ಕೆಲಸದವರು ಅಂದ್ರೆ ಒಂದು ರೀತಿಯಲ್ಲಿ ಗುಲಾಮರು ಅಂತ ಭಾವಿಸೋ ಜನ ಇನ್ನೂ ಇದ್ದಾರೆ ಅನ್ನೋದಿಕ್ಕೆ ಸಾಕ್ಷಿ ಆಗಾಗ ಕಂಡು ಬರುವ ಇಂತ ಘಟನೆಗಳು. ಇಷ್ಟಕ್ಕೂ ಮಧ್ಯ ಪ್ರಾಚ್ಯದಲ್ಲಿ ಆ ಕುಟುಂಬ ಮಹಿಳೆಗೆ ಯಾವ ಕಾರಣಕ್ಕೆ, ಏನ್ ಶಿಕ್ಷೆ ನೀಡಿತ್ತು ಅನ್ನೋದನ್ನ ತಿಳಿಯೋಣ ಬನ್ನಿ. ಆಗ ಅವರ ಕ್ರೂರವಾದ ನಡವಳಿಕೆ ನಮಗೆ ಅರ್ಥವಾಗುತ್ತೆ.

ಮನೆ ಒಳಗಿನ ಬೆಲೆಬಾಳುವ ಪೀಠೋಪಕರಣಗಳು ಬಿಸಿಲಲ್ಲಿ ಇದ್ದುದ್ದನ್ನು ನೋಡಿ, ಕುಟುಂಬದ ಸದಸ್ಯರು ಕೆಂಡಾಮಂಡಲ ಆಗಿದ್ದಾರೆ. ಅದಕ್ಕೆ ಅವರು ಯಾವ ರೀತಿ ಕೆಲಸದಾಕೆ ಅವನ್ನು ಬಿಸಿಲಲ್ಲಿ ಒಣಗಿಸಿದಳೋ, ಅದೇ ರೀತಿ ಅವಳು ಕೂಡಾ ಬಿಸಿಲಲ್ಲಿ ಇದ್ದು ಶಿಕ್ಷೆ ಅನುಭವಿಸಬೇಕು ಅಂತ ಹೇಳಿ , ಮನೆ ಕೆಲಸದ ಹೆಂಗಸನ್ನು ಮನೆಯ ಹೊರಗೆ ಬಿಸಿಲಿನಲ್ಲಿ ನಿಲ್ಲಿಸಿದ್ದಾರೆ. ಅಷ್ಟೇ ಅಲ್ಲದೆ ಆಕೆ ಬಿಸಿಲಿನಲ್ಲಿ ಕದಲದೆ ಒಂದೇ ಕಡೆ ಇರ್ಲಿ ಅಂತ, ಆಕೆಯನ್ನು ಮರವೊಂದಕ್ಕೆ ಕಟ್ಟಿ ಹಾಕಿ, ಬಿಸಿಲಿನಲ್ಲಿ ನಿಲ್ಲಿಸಿ, ಸುಡು ಬಿಸಿಲಿನಲ್ಲಿ ಆಕೆಗೆ ದೈಹಿಕವಾಗಿ ಹಿಂಸೆ ಅನುಭವಿಸೋ ತರ ಮಾಡಿದ್ದಾರೆ.

ಮನೆ ಮಾಲಿಕರ ಕೋಪಕ್ಕೆ ಗುರಿಯಾದ ಆ ಮಹಿಳೆ ಹೆಸರು ಲವ್ಲಿ ಅಕೋಸ್ಟಾ ಎಂಬ 26 ವರ್ಷದ ಮಹಿಳೆ, ರಿಯಾದ್, ಸೌದಿ ಅರೇಬಿಯಾದ ಶ್ರೀಮಂತ ಕುಟುಂಬಕ್ಕಾಗಿ ಹಲವಾರು ತಿಂಗಳುಗಳಿಂದ ಆಕೆ ಕೆಲಸ ಮಾಡ್ತಾ ಇದ್ದಳು. ಆಕೆ ಮನೆಯಲ್ಲಿದ್ದ ಪೀಠೋಪಕರಣವೊಂದನ್ನು ಬಿಸಿಲಲ್ಲಿ ಮರೆತ ಕಾರಣ ಈ ರೀತಿ ಶಿಕ್ಷೆ ನೀಡಿದ್ದಾರೆ ಎಂದು ದೂರಿದ್ದಾಳೆ. ಆಕೆಯ ಸಹೋದ್ಯೋಗಿ, ಕುಟುಂಬದ ಕ್ರೂರ ಕೆಲಸಾನ ಬಹಿರಂಗಪಡಿಸೋದಿಕ್ಕೆ,ಶಿಕ್ಷೆಯ ಚಿತ್ರಗಳನ್ನು ತೆಗೆದುಕೊಂಡರು
ಆಘಾತಕಾರಿ ಚಿತ್ರಗಳು ಮೇ 9 ರಂದು ಕುಟುಂಬದ ಉದ್ಯಾನದಲ್ಲಿರುವ ಮರಕ್ಕೆ ಮಹಿಳೆಯ ಮಣಿಕಟ್ಟುಗಳು ಮತ್ತು ಕಾಲುಗಳಿಂದ ಕಟ್ಟಲ್ಪಟ್ಟ ಫೋಟೋ ಅದಾಗಿದೆ.

ಫಿಲಿಪೈನ್ಸ್ ವಿದೇಶಾಂಗ ಇಲಾಖೆಯ (ಡಿಎಫ್ಎ) ಆಕೆ ಹೇಳಿಕೆ ಮತ್ತು ಪರಿಸ್ಥಿತಿಯನ್ನು ಅರಿತುಕೊಂಡಿದ್ದು, ಆ ಮಹಿಳೆಯನ್ನು ರಕ್ಷಿಸಿ ತನ್ನ ದೇಶಕ್ಕೆ, ತನ್ನ ಮನೆಗೆ ಹಿಂದಿರುಗಲು ಯಶಸ್ವಿಯಾಗಿ ನೆರವಾಗಿದ್ದು, ವಿಷಯದ ವಿಚಾರಣೆ ನಡೆಸುವುದಾಗಿ ಹೇಳಿದೆ. ಏಕೆಂದರೆ ಆ ರಾಷ್ಟ್ರದಲ್ಲಿ ಇನ್ನೂ ಅನೇಕರು ಮನೆ ಕೆಲಸಗಳಲ್ಲಿ ಇದ್ದು, ಅವರೂ ಕೂಡಾ ಸಮಸ್ಯೆಗಳಲ್ಲಿ ಇದ್ದಾರೆಂದು ತಿಳಿದು ಬಂದಿದೆ ಎನ್ನುತ್ತದೆ ಡಿಎಫ್ಎ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here