ಮಹಾ ನಗರಗಳು ಮತ್ತು ಬೆಳೆಯುತ್ತಿರುವ ನಗರಗಳಲ್ಲಿ ಬಹು ದೊಡ್ಡ ಸಮಸ್ಯೆ ಎಂದರೆ ಅದು ಟ್ರಾಫಿಕ್ ಸಮಸ್ಯೆ. ಒಂದೆಡೆ ವಾಹನ ಸವಾರರು ಪರದಾಡಿದರೆ, ಹಲವು ಸಂದರ್ಭಗಳಲ್ಲಿ ಪಾದಚಾರಿಗಳಿಗೆ ಕೂಡಾ ಇದು ದೊಡ್ಡ ಸಮಸ್ಯೆ ಆಗಿ ಬಿಡುತ್ತದೆ. ಏಕೆಂದರೆ ಹಲವು ಬಾರಿ ರಸ್ತೆಯಲ್ಲಿ ಟ್ರಾಫಿಕ್ ಇರುವುದನ್ನು ನೋಡಿದ ಕೆಲವು ದ್ವಿಚಕ್ರ ವಾಹನ ಸವಾರರು ತಾಳ್ಮೆ ಇಲ್ಲದವರಂತೆ ಪಕ್ಕದಲ್ಲಿರುವ ಫುಟ್ ಪಾತ್ ಮೇಲೆ ತಮ್ಮ ವಾಹನಗಳನ್ನು ಹತ್ತಿಸಿ ಟ್ರಾಫಿಕ್ ಜಾಮ್ ನಿಂದ ಮುಂದೆ ಹೋಗುವ ಪ್ರಯತ್ನ ಮಾಡುತ್ತಾರೆ. ಆದರೆ ಅವರು ಆಗ ಪಾದಚಾರಿಗಳ ಬಗ್ಗೆ ಸ್ವಲ್ಪವೂ ಆಲೋಚನೆ ಮಾಡುವುದಿಲ್ಲ.

ಇಂತಹುದೇ ಒಂದು ಸನ್ನಿವೇಶದಲ್ಲಿ ವಯಸ್ಸಾದ ಮಹಿಳೆಯೊಬ್ಬರು ಸೊಂಟದ ಮೇಲೆ ಕೈ ಇಟ್ಟುಕೊಂಡು ಫುಟ್ ಪಾತ್ ಮೇಲೆ ವಾಹನ ಚಾಲನೆ ಮಾಡಿದವರಿಗೆ ಬೆಂಡೆತ್ತಿರುವ ವೀಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಅಜ್ಜಿಯ ಈ ನಡೆಗೆ ಸಾಕಷ್ಟು ಮೆಚ್ಚುಗೆಗಳು ಹರಿದು ಬರುತ್ತಿವೆ. ಈ ಘಟನೆ ಯಾವಾಗ ನಡೆದಿದ್ದು ಎಂಬ ವಿವರಗಳು ತಿಳಿದಿಲ್ಲವಾದರೂ ಸದ್ಯಕ್ಕೆ ಈ ವಿಡಿಯೋ ಮಾತ್ರ ಸಾಕಷ್ಟು ಸದ್ದು ಮಾಡುತ್ತಿದೆ. ನೆಟ್ಡಿಗರು ಈ ಹಿರಿಯ ಮಹಿಳೆಯ ನಡೆಗೆ ಸಾಕಷ್ಟು ಮೆಚ್ಚುಗೆಯನ್ನು ಸೂಚಿಸುತ್ತಾ ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಟ್ರಾಫಿಕ್ ಜಾಮ್ ನೋಡಿ ರಸ್ತೆಯಿಂದ ಫುಟ್ ಪಾತ್ ಮೇಲೆ ಬಂದವರಿಗೆಲ್ಲಾ ಖಡಕ್ಕಾಗಿ ಕ್ಲಾಸ್ ತೆಗೆದುಕೊಂಡಿರುವ ವಿಷಯ ವಿಡಿಯೋದಲ್ಲಿದ್ದು, ಬೈಕ್ ಸವಾರರು ಹಿರಿಯ ಮಹಿಳೆಗೆ ಕ್ಷಮಾಪಣೆ ಹೇಳಿ ಫುಟ್ ಪಾತ್ ನಿಂದ ಮತ್ತೆ ರಸ್ತೆಗೆ ಇಳಿದಿದ್ದಾರೆ. ಟ್ವಿಟರ್ ನಲ್ಲಿ ವಿಡಿಯೋ ವೈರಲ್ ಆದ ಮೇಲೆ ಇದಕ್ಕೆ ಪುಣೆ ಪೋಲಿಸ್ ಕೂಡಾ ಪ್ರತಿಕ್ರಿಯೆ ನೀಡಿದ್ದು ಇದರ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಟ್ವೀಟ್ ಮಾಡಿದ್ದಾರೆ. ಒಟ್ಟಾರೆ ಹಿರಿಯ ಮಹಿಳೆಯ ದಿಟ್ಟ ನಡೆ ಎಲ್ಲರ ಶ್ಲಾಘನೆಗೆ ಪಾತ್ರವಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here