ನೂತನ ಸರ್ಕಾರದ ಮೂವರು ಡಿಸಿಎಂ ಗಳಲ್ಲಿ ಒಬ್ಬರಾಗಿರುವ ಲಕ್ಷ್ಮಣ ಸವದಿಗೆ ಬರುವ ದಿನಗಳಲ್ಲಿ ರಾಜ್ಯದ ಸಿಎಂ ಆಗುವ ಯೋಗ ಇದೆ ಎಂದು ಸ್ವಾಮೀಜಿಯೊಬ್ಬರು ಭವಿಷ್ಯವಾಣಿಯೊಂದನ್ನು ನುಡಿದಿದ್ದಾರೆ. ಬೈಲಹೊಂಗಲ ತಾಲೂಕಿನ ಇಂಚಲ ಮಠದ ಡಾ.ಶಿವಾನಂದ ಭಾರತೀ ಸ್ವಾಮೀಜಿ ಯವರೇ ಲಕ್ಷ್ಮಣ ಸವದಿಯವರ ಬಗ್ಗೆ ಭವಿಷ್ಯ ವಾಣಿಯನ್ನು ನುಡಿದಿರುವ ಸ್ವಾಮೀಜಿಗಳು. ಅವರು ಲಕ್ಷ್ಮಣ ಸವದಿ ಉಪಮುಖ್ಯಮಂತ್ರಿ ಆಗಿದ್ದು ತನಗೆ ಖುಷಿಯನ್ನು ತಂದಿದೆ ಎಂದು ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ. ಲಕ್ಷ್ಮಣ ಸವರಿ ಅವರು ಜನರ ಸೇವೆಯನ್ನು ಮಾಡಲು ಬಂದಿದ್ದು, ಇಂತಹ ವ್ಯಕ್ತಿ ನಮ್ಮ ಭಕ್ತನಾಗಿರುವುದು ನನಗೆ ಸಂತೋಷವನ್ನು ತಂದಿದೆ ಎಂದು ಸ್ವಾಮೀಜಿ ಹೇಳಿದ್ದಾರೆ.

 

ಸ್ವಾಮೀಜಿಗಳು ತಮ್ಮ ಮಾತಿನಲ್ಲಿ ಕರ್ನಾಟಕದ ಜನರ ಸೇವೆ ಮಾಡಲು ಲಕ್ಷ್ಮಣ ಸವದಿಯವರು ಒಂದು ಹೆಜ್ಜೆ ಮುಂದೆ ಇಟ್ಟಿದ್ದಾರೆ. ಸವದಿಯವರು ನಮ್ಮ ಮಠದ ಪರಮ ಭಕ್ತರಾಗಿದ್ದವರೆಂದು ಹೇಳುತ್ತಾ ಖುಷಿ ಪಟ್ಟ ಸ್ವಾಮೀಜಿಗಳು, ಡಿಸಿಎಂ ಅವರು ಜನ ಸೇವೆ, ಮಠಗಳ ಸೇವೆಯನ್ನ ಮಾಡುತ್ತಾ ಬಂದಿದ್ದು, ಇವೆಲ್ಲವುಗಳ ಫಲ ಅವರಿಗೆ ಸಿಗಲಿದೆ. ಮುಂದಿನ ದಿನಗಳಲ್ಲಿ ಅವರಿಗೆ ಇನ್ನೂ ಉನ್ನತ ಮಟ್ಟದ ಸ್ಥಾನ ಸಿಗಲಿ ಎಂದು ಅವರು ಶುಭ ಕೋರಿದ್ದಾರೆ. ಮುಂದಿನ ದಿನದಲ್ಲಿ ಸವದಿ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಭವಿಷ್ಯ ‌ನುಡಿದಿದ್ದಾರೆ.

ಲಕ್ಷ್ಮಣ ಸವದಿ ಅವರೊಬ್ಬ ನಿಷ್ಠಾವಂತ ವ್ಯಕ್ತಿಯಾಗಿದ್ದು, ಅವರು ಯಾವುದೇ ರೀತಿಯ ತಾರತಮ್ಯವಿಲ್ಲದೆ ರಾಜಕಾರಣದಲ್ಲಿ ತೊಡಗಿ ಕೊಂಡಿದ್ದಾರೆ. ಇಂತಹ ಒಬ್ಬ ‌ವ್ಯಕ್ತಿಗೆ ಮುಂದಿನ ದಿನದಲ್ಲಿ ಸಿಎಂ ಹುದ್ದೆ ಸಿಗಲಿದೆ ಎಂದು ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಸ್ವಾಮೀಜಿಯವರ ಭವಿಷ್ಯ ವಾಣಿಯ ಬಗ್ಗೆ ನಾವು ಮುಂದಿನ ದಿನಗಳಲ್ಲಿ ಕಾಡು ನೋಡಬೇಕಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here