ಚುನಾವಣೆಯ ಸಂದರ್ಧದಲ್ಲಿ ಮತ ಗಟ್ಟೆಗಳ ಬಳಿ ಪಕ್ಷಗಳ‌ ಶಾಸಕರು ಮತದಾರರಿಗೆ ತಮ್ಮ ಪಕ್ಷಕ್ಕೆ ಮತ ನೀಡಿ ಎಂದು ಕೇಳಬಾರದು ಎಂಬುದು ಚುನಾವಣಾ ನೀತಿ ಸಂಹಿತೆ. ಆದರೆ ಕಾಂಗ್ರೆಸ್ ಶಾಸಕಿಯೊಬ್ಬರು ಇದನ್ನು ಪಾಲನೆ ಮಾಡುವಲ್ಲಿ ಎಡವಿರುವುದು ಮಾತ್ರವಲ್ಲದೆ , ಮತಗಟ್ಟೆಯ ಬಳಿಯೇ ಕಾಂಗ್ರೆಸ್ ಗೆ ಮತ ಹಾಕುವಂತೆ ಜನರಲ್ಲಿ ಕೇಳಿರುವ ಒಂದು ಘಟನೆ ವರಿದಿಯಾಗಿದೆ. ಹಾಗೆ ಮಾಡಿದ ಆ ಶಾಸಕಿ ಮತ್ತಾರೂ ಅಲ್ಲ ಕಾಂಗ್ರೆಸ್ ನ ಲಕ್ಷ್ಮೀ ಹೆಬ್ಬಾಳ್ಕರ್ ಅವರು. ಇಂದು ಕರ್ನಾಟಕದಲ್ಲಿ ಎರಡನೇ ಹಂತದ ಚುನಾವಣೆ ನಡೆಯುತ್ತಿರುವುದು ಈಗಾಗಲೇ ಎಲ್ಲರಿಗೂ ತಿಳಿದ ವಿಷಯ. ಎಲ್ಲೆಡೆ ಬಿರುಸಿನಿಂದ ಜನರು ಮತದಾನ ಮಾಡಲು ಮತಗಟ್ಟೆಗೆ ನಡೆದಿರುವ ದೃಶ್ಯಗಳು ಮಾದ್ಯಮಗಳಲ್ಲಿ ಗಮನ ಸೆಳೆಯುತ್ತಿವೆ.

ಹೀಗೆ ಮತದಾನ ಮಾಡಲು ಬಂದ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮತಗಟ್ಟೆಯಲ್ಲಿ ಕರ್ತವ್ಯ ನಿರತರಾಗಿರುವ ಚುನಾವಣಾ ಅಧಿಕಾರಿಗಳಿಗೆ ಆವಾಜ್ ಹಾಕಿದ ಘಟನೆ ಹಾಗೂ ಮತಯಾಚನೆ ಮಾಡಿದ ಘಟನೆಯು ಬೆಳಗಾವಿಯ ವಿಜಯನಗರ ಮತಗಟ್ಟೆಯಲ್ಲಿ ನಡೆದಿದೆ. ಶಾಸಕಿಯವರು ತಮ್ಮ ಬೆಂಬಲಿಗರೊಂದಿಗೆ ಮತಗಟ್ಟೆಗೆ ಬಂದಿದ್ದಾರೆ. ಆ ಸಂದರ್ಭದಲ್ಲಿ ಅವರು ಮತ ಚಲಾವಣೆ ಮಾಡಲು ಮತದಾನ ಕೇಂದ್ರದ ಒಳಗೆ ಹೋಗುವಾಗ ಚುನಾವಣಾ ಅಧಿಕಾರಿಗಳು ಒಬ್ಬರೆ ಹೋಗುವಂತೆ ಸೂಚಿಸಿದ್ದಾರೆ. ತಕ್ಷಣ ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಕರ್ತವ್ಯನಿರತ ಅಧಿಕಾರಿಗಳ ಜೊತೆಗೆ ವಾಗ್ವಾದದಲ್ಲಿ ತೊಡಗಿದ್ದರೆನ್ನಲಾಗಿದೆ.

ಅಷ್ಟು ಮಾತ್ರವೇ ಅಲ್ಲದೆ ಲಕ್ಷ್ಮೀ ಹೆಬ್ಬಾಳ್ಕರ್​ ಅವರು ಮತಗಟ್ಟೆಯೊಳಗೆ ಬರುವ ಮುನ್ನ, ಅಂದರೆ ಮತದಾನಕ್ಕಿಂತ ಕೆಲವು ನಿಮಿಷಗಳ ಹಿಂದೆ, ಆ ಮತಗಟ್ಟಗೆ ಮತದಾನ ಮಾಡಲು ಬರುತ್ತಿದ್ದ ಮತದಾರರಲ್ಲಿ ಕಾಂಗ್ರೆಸ್ ಗೆ ಮತ ಹಾಕುವಂತೆ ಮನವಿ ಮಾಡಿದ್ದಾರೆ. ಅವರು ಮತದಾರರಲ್ಲಿ ಈ ಬಾರಿ, ಇದೊಂದು ಸಾರಿ ನನ್ನ ಮುಖ ನೋಡಿ ಕಾಂಗ್ರೆಸ್​ಗೆ ಎಲ್ಲರೂ ತಪ್ಪದೆ ಮತ ಹಾಕಿ ಎಂದು ಕೋರುವ ಮೂಲಕ ಚುನಾವಣೆ ನೀತಿ ಸಂಹಿತೆಯನ್ನು ಕೂಡಾ ಉಲ್ಲಂಘನೆ ಮಾಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here