2028 ಕ್ಕೆ ಲಕ್ಷ್ಮೀ ಹೆಬ್ಬಾಳಕರ್ ರಾಜ್ಯದ ಮೊದಲ ಮಹಿಳಾ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಭವಿಷ್ಯವನ್ನು ನುಡಿದಿದ್ದಾರೆ ಕೂಡಲ ಸಂಗಮದ ಬಸವ ಮೃತ್ಯುಂಜಯ ಸ್ವಾಮಿಜಿ. ಅವರ ಹೇಳಿಕೆ ಈಗ ಗಮನ ಸೆಳೆಯುವಂತಿದೆ. ರಾಜ್ಯದಲ್ಲಿ ಲೋಕಸಭಾ ಚುನಾವಣಾ ಫಲಿತಾಂಶದ ಬಗ್ಗೆ ಸಮೀಕ್ಷೆಗಳು, ಹಾಗೂ ಕೆಲವು ಸ್ವಾಮೀಜಿಗಳು ಚುನಾವಣ ಫಲಿತಾಂಶದ ಬಗ್ಗೆ ಭವಿಷ್ಯವಾಣಿಗಳನ್ನು ನುಡಿಯುತ್ತಿರುವ ಸಂದರ್ಭದಲ್ಲಿ ಕೂಡಲ ಸಂಗಮದ ಶ್ರೀಗಳು 2028 ರ ಭವಿಷ್ಯ ವಾಣಿಯನ್ನು ನುಡಿದಿರುವುದು ನಿಜಕ್ಕೂ ಆಸಕ್ತಿಕರವಾಗಿದೆ. ಅವರ ಭವಿಷ್ಯವಾಣಿ ನಿಜವಾಗುವುದೋ ಇಲ್ಲವೋ ಎಂಬುದಕ್ಕೆ ಇನ್ನೂ ಹನ್ನೊಂದು ವರ್ಷಗಳು ಕಾಯಬೇಕಿದೆ.

ಬೆಳಗಾವಿಯಲ್ಲಿ ಲಕ್ಷ್ಮೀ ಹೆಬ್ಬಾಳಕರ್ ಅವರ ಜನ್ಮದಿನದ ಸಂದರ್ಭದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶ್ರೀ ಗಳು ಅಲ್ಲಿ ಮಾತನಾಡುತ್ತಾ 2018 ರಲ್ಲಿ ಲಕ್ಷ್ಮೀ ಹೆಬ್ಬಾಳಕರ್ ಅವರು ಎಂಎಲ್ಎ ಆಗಿ ಆಯ್ಕೆಯಾಗಿದ್ದಾರೆ. ಆದರೆ ಇದು ಕ್ವಾರ್ಟರ್ ಫೈನಲ್ ಮಾತ್ರ. ಬೆಳಗಾವಿಯ ಗ್ರಾಮೀಣ ಜನತೆಯು 2023 ಮತ್ತ 2028 ರ ಚುನಾವಣೆಯಲ್ಲಿ ಕೂಡಾ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಬೆಂಬಲಿಸಿ, ಅವರನ್ನು ಗೆಲ್ಲಿಸಿದಾಗ ನಿಜವಾದ ಸೆಮಿ ಫೈನಲ್ ಎನಿಸಿಕೊಳ್ಳುತ್ತದೆ ಎಂದು ಹೇಳಿದ್ದಾರೆ.

2028 ಕ್ಕೆ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಗೆಲ್ಲಿಸಿದರೆ ಅವರಿಗೆ ಒಬ್ಬ ಮಹಿಳಾ ಮುಖ್ಯಮಂತ್ರಿ ಆಗುವ ಶಕ್ತಿಯಿದೆ ಎಂದು ಶ್ರೀ ಗಳು ನುಡಿದಿದ್ದಾರೆ. ಹಾಗೇನಾದರೂ ಆದರೆ ಲಕ್ಷ್ಮೀ ಹೆಬ್ಬಾಳಕರ್ ಅವರು ಕರ್ನಾಟಕದಲ್ಲಿ ಕಿತ್ತೂರು ರಾಣಿ ಚೆನ್ನಮ್ಮನಂತೆ ಆಡಳಿತ ನಡೆಸಿಕೊಂಡು ಹೋಗುತ್ತಾರೆಂದು ಹೊಗಳಿದ್ದಾರೆ. ಮುಂದಿನ ದಿನಗಳಲ್ಲಿ ಸಿಎಂ ಅವರು ನಾಡು ಕಟ್ಟುವ ಕಾರ್ಯವನ್ನು ಮಾಡಲಿದ್ದಾರೆ ಎಂದು ಕೂಡಾ ಅವರು ಭವಿಷ್ಯ ಹೇಳಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here