ಪ್ರವಾಹ ಸಂತ್ರಸ್ತರಿಗೆ ಸರಿಯಾದ ರೀತಿಯಲ್ಲಿ ಪರಿಹಾರಗಳು ಇನ್ನೂ ದೊರೆತಿಲ್ಲವೆಂದು ಆರೋಪ ಮಾಡುತ್ತಾ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ನೇತೃತ್ವದಲ್ಲಿ ಬೆಳಗಾವಿಯಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆಯನ್ನು ನಡೆಸಲಾಯಿತು. ನಗರದ ಜಿಲ್ಲಾಧಿಕಾರಿ ಅವರ ಕಛೇರಿ ಎದುರು ನೂರಾರು ಜನ ಪರಿಹಾರ ಸಂತ್ರಸ್ತರು ನೆರೆದಿದ್ದು, ಅವರ ಜೊತೆಗೆ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರು ಸರ್ಕಾರದಿಂದ ಪ್ರವಾಹ ಸಂತ್ರಸ್ತರಿಗೆ ಸೂಕ್ತ ಪರಿವಾರ ದೊರೆತಿಲ್ಲ ಎಂದು ತಮ್ಮ ಸಿಟ್ಟನ್ನು, ಅಸಮಾಧಾನವನ್ನು ಹೊರಹಾಕುತ್ತಾ ಮಾತನಾಡಿದ್ದಾರೆ.

ಈ ಸಂದರ್ಭದಲ್ಲಿ ಲಕ್ಷ್ಮೀ ಹೆಬ್ಬಾಳಕರ್ ಅವರು ಪ್ರವಾಹದಿಂದ ಮನೆ ಕಳೆದುಕೊಂಡ ಜನರಿಗೆ ಇದುವರೆವಿಗೂ ಕೂಡಾ ಯಾವುದೇ ನೆರವು ಸಿಕ್ಕಿಲ್ಲ. ಬಡವರಿಗೆ ಕಡಿಮೆ ಪರಿಹಾರ ನೀಡಿದ್ದರೆ, ಉಳ್ಳವರಿಗೆ ಹೆಚ್ಚು ಪರಿಹಾರ ನೀಡಲಾಗಿದೆ ಎಂದು ಆರೋಪವನ್ನು ಮಾಡಿದ್ದಾರೆ. ಸರ್ಕಾರ ಸಚಿವ ಸಂಪುಟ ರಚನೆಗಾಗಿ ತನ್ನ ಕಾಲವನ್ನು ವ್ಯಯ ಮಾಡುತ್ತಿದ್ದು, ನೆರೆ ಸಂತ್ರಸ್ತರಿಗೆ ಸೂಕ್ತವಾದ ರೀತಿಯಲ್ಲಿ ಸ್ಪಂದಿಸುವಂತಿಲ್ಲ ಎಂದು ಅವರು ಸರ್ಕಾರದ ನಿಲುವಿನ ವಿರುದ್ಧ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಆಗಿರುವ ನಷ್ಟಕ್ಕೆ ಇನ್ನೂ ಪರಿಹಾರ ಸಿಕ್ಕಿಲ್ಲ. ಅಲ್ಲಿ ಸಾವಿರಾರು ಮನೆಗಳು ಬಿದ್ದು ಹೋಗಿವೆ‌. ಶಾಲೆ, ಅಂಗಡಿ ಮುಗ್ಗಟ್ಟುಗಳಿಗೆ ಕೂಡಾ ಹಾನಿಯಾಗಿದೆ. ಆದರೆ ಒಂದು ರೂಪಾಯಿ ಕೂಡಾ ಸರಕಾರದ ಕಡೆಯಿಂದ ಪರಿಹಾರವಾಗಿ ಸಿಕ್ಕಿಲ್ಲ ಎಂದಿರುವ ಅವರು, ನೆರೆ ಸಂತ್ರಸ್ತರಿಗೆ ಭಯ ಬೇಡ ನಾನು ಬೆಂಗಳೂರಿನಲ್ಲಿ ಭಿಕ್ಷೆ ಬೇಡ್ತೀನಿ. ಅಗತ್ಯ ಎನಿಸಿದರೆ ನಾವೆಲ್ಲಾ ಸೇರಿ ಉಪವಾಸ ಸತ್ಯಾಗ್ರಹವನ್ನು ಕೂಡಾ ಮಾಡೋಣ ಎಂದು ಅವರು ನೆರೆ ಸಂತ್ರಸ್ತರಿಗೆ ಆಶ್ವಾಸನೆ ನೀಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here