ಶ್ರೀ ಮಹಾವಿಷ್ಣುವು ಭಕ್ತರ ಕಷ್ಟ ಸಂಹರಿಸಲು ಹಾಗೂ ಲೋಕವನ್ನು ಕಂಠಕಕಾರರಾದ ರಾಕ್ಷಸರಿಂದ ಪ್ರತಿಕ್ರಿಯೆಯ ಹಲವು ಅವತಾರಗಳನ್ನು ಎತ್ತಿದನು. ಅಂತಹ ಅವರತಾರಗಳಲ್ಲಿ ಬಹಳ ಉಗ್ರವಾದುದು ಹಾಗೂ ಅರಿಲೋಕ ಭಯಂಕರವಾದುದು ಎಂದರೆ ಅದು ಶ್ರೀ ನರಸಿಂಹ ಸ್ವಾಮಿಯದು. ಪ್ರಹ್ಲಾದನನ್ನ ಸಂರಕ್ಷಣೆ ಮಾಡಲು ಲೋಕ ಭೀಕರವಾದ ರೂಪದಲ್ಲಿ ಅವತರಿಸಿ ಹಿರಣ್ಯ ಕಶಿಪುವನ್ನು ಸಂಹರಿಸಿದ ಕಥೆ ನಮೆಗಲ್ಲರಿಗೂ ತಿಳಿದಿದೆ. ಇಂತಹ ನರಸಿಂಹ ಸ್ವಾಮಿಯವರ ದೇವಾಲಯವು ದೇಶದ ವಿವಿಧ ಭಾಗಗಳಲ್ಲಿ ಇದ್ದು, ಭಕ್ತರು ಬಹಳ ಭಕ್ತಿ ಹಾಗೂ ಶ್ರದ್ಧೆಯಿಂದ ‌ನರಸಿಂಹನನ್ನು ಆರಾಧಿಸಿಕೊಂಡು ಬರುತ್ತಿದ್ದಾರೆ. ಇಂತಹ ನರಸಿಂಹ ಸ್ವಾಮಿಯ ಆಲಯಗಳಲ್ಲಿ ಒಂದು ಹೇಮಾಚಲದಲ್ಲಿದೆ.

ವರಂಗಲ್ ನಿಂದ ಸುಮಾರು 130 ಕಿಮೀ ದೂರದಲ್ಲಿ ಅರಣ್ಯದಲ್ಲಿ ‌ಇದೆ ಈ ನರಸಿಂಹಬನ ಮಂದಿರ. ಭದ್ರಾಚಲಂ‌ನಿಂದ 90 ಕಿಮೀ ದೂರದಲ್ಲಿರುವ ಮಲ್ಲೂರಿನಿಂದ ನಾಲ್ಕು ಕಿಮೀ ಅರಣ್ಯ ಮಾರ್ಗದಲ್ಲಿ ಹೋದರೆ ಸಿಗುತ್ತದೆ ‌ಈ ದಿವ್ಯ ಮಂದಿರ. ಕಾಡಿಬಲನ ನಡುವೆ ಬೆಟ್ಟ, ಬೆಟ್ಟದ ಕೆಳಗೆ ವಿಶಾಲವಾದ ಭೂಮಿ, ಆಲಯ, ಚಿಂತಾಮಣಿ ಜಲಪಾತ ಎಲ್ಲವೂ ವಿಶೇಷವೇ ಆಗಿದೆ. ಇನ್ನು ಇಲ್ಲಿರುವ ಉಗ್ರ ನರಸಿಂಹನು ಸ್ವಯಂಭು ಎಂದು ಇಲ್ಲಿನ ಸ್ಥಳ ಪುರಾಣ. ಇಲ್ಲಿನ ನರಸಿಂಹ ಸ್ವಾಮಿಯ ವಿಗ್ರಹ ನಿಂತಿರುವಂತೆ ಸುಮಾರು ಆರಡಿ ಎತ್ತರವಾಗಿದ್ದು, ಮೂರ್ತಿಯು ಶಂಖ , ಚಕ್ರ , ಗದಾಧರನಾಗಿ ನಿಂತಿರುವಂತೆ ಇದೆ.

ಹಿರಣ್ಯ ಕಶಿಪುವಿನ ಸಂಹಾರದ ನಂತರ ಸ್ವಾಮಿಯವರು ಇಲ್ಲೇ ಲಕ್ಮೀ ದೇವಿಯನ್ನು (ಚೆಂಚು ಲಕ್ಷ್ಮಿ) ಯನ್ನು ವಿವಾಹವಾದರೆಂದು ಹೇಳಲಾಗುತ್ತದೆ. ಕಾಲಾಂತರದಲ್ಲಿ ಭರದ್ವಾಜ ಹಾಗೂ ಅಂಗೀರಸ ಮಹರ್ಷಿಗಳು ಈ ಮಾರ್ಗದಲ್ಲಿ ಸಂಚರಿಸುತ್ತಾ , ಇಲ್ಲಿ ವಿಶ್ರಾಂತಿ ಪಡೆಯುವ ಸಲುವಾಗಿ ರಾತ್ರಿ ಇಲ್ಲಿ ವಿಶ್ರಮಿಸುತ್ತಿರುವಾಗ ನರಸಿಂಹ ಸ್ವಾಮಿಯು ಅವರ ಸ್ವಪ್ನದಲ್ಲಿ ಗೋಚರಿಸಿ, ಭೂ ಗರ್ಭದಲ್ಲಿರುವ ತನ್ನನ್ನು ಹೊರತೆಗೆಯುವಂತೆ ಆದೇಶ ನೀಡಿದರಂತೆ. ಆಗ ಆ ಜಾಗದಲ್ಲಿ ನೆಲ ಅಗೆದಾಗ ಶ್ರೀ ನರಸಿಂಹ ಸ್ವಾಮಿಯ ವಿಗ್ರಹ ದೊರೆಯಿತು ಎಂಬುದು ಇಲ್ಲಿನ ಸ್ಥಳ ಪುರಾಣವಾಗಿದೆ.

ಇನ್ನು ಭೂಮಿಯಿಂದ ಸ್ವಾಮಿಯವರನ್ನು ತೆಗೆಯುವಾಗ ನಾಭಿ ಸ್ಥಳದಲ್ಲಿ ಪೆಟ್ಟಾದ ಕಾರಣ ರಕ್ತ ಬಂದಿತಂತೆ. ಕೂಡಲೇ ಋಷಿಗಳು ಚಂದನವನ್ನು ಅರೆದು ಆ ಭಾಗಕ್ಕೆ ಹಚ್ಚಿದರಂತೆ. ಆ ಜಾಗದಲ್ಲಿ ಇಂದಿಗೂ ದ್ರವ ಒಸರುತ್ತದೆಯಂತೆ. ಅದಕ್ಕೆ ಪ್ರತಿದಿನ ಆ ಭಾಗಕ್ಕೆ ಚಂದನವನ್ನು ಹಚ್ಚುವರು. ಇನ್ನು ಎಲ್ಲದಕ್ಕಿಂತ ವಿಶೇಷ ಹಾಗೂ ವಿಸ್ಮಯ ಏನೆಂದರೆ ಏ ವಿಗ್ರಹದ ವಿಶೇಷ ಏನೆಂದರೆ, ಸ್ವಾಮಿಯವರ ವಿಗ್ರಹದ ವಕ್ಷಸ್ಥಳದಿಂದ, ನಾಭಿಯವರೆಗೆ ದೇವರ ಮೈ ಮುಟ್ಟಿದರೆ ಮೆತ್ತಗಿನ ಮಾನವನ ದೇಹ ಮುಟ್ಟಿದ ಅನುಭವ ಉಂಟಾಗುತ್ತದೆ. ಇಂತಹ ಅಪರೂಪದ ಸ್ವಾಮಿ ವಿಗ್ರಹ ಬೇರೊಂದೆಡೆ ಇಲ್ಲ ಎಂಬದೇ ವಿಶೇಷ.

ಇನ್ನು ಇಲ್ಲಿ ನರಸಿಂಹ ಸ್ವಾಮಿ ದೇವಾಲಯಕ್ಕೆ ಹೋಗಬೇಕಾದರೆ ಸುಮಾರು 130 ಮೆಟ್ಟಿಲು ಹತ್ತಿ ಹೋಗಬೇಕು. ಆಗ ಮೊದಲು ಸಿಗುವ ಸ್ವಯಂಭುವಾದ ಆಂಜನೇಯ ಸ್ವಾಮಿಯ ದರ್ಶನ ಪಡೆದು, ನಂತರ ಸ್ವಾಮಿಯವರ ದರ್ಶನ ಮಾಡುವರು. ಅಲ್ಲದೆ ಮಾತೆ ಮಹಾಲಕ್ಷ್ಮಿ ಚೆಂಚು ಲಕ್ಷ್ಮಿಯಾಗಿ ನೆಲೆಸಿರುವ ಉಪ ಆಲಯವೊಂದಿದೆ. ಸುಮರು ಎರಡನೇ ಶತಮಾನದ್ದೆಂದು ಹೇಳಲಾಗುವ ಈ ಆಲಯ ತನ್ನ ವಿಶೇಷತೆಗಳಿಂದಾಗಿ ಇತ್ತೀಚೆಗೆ ಪ್ರಸಿದ್ಧಿಯನ್ನು ಪಡೆಯುತ್ತಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here