ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಹಾಗೂ ಅವರು ಮಗ ವಿನೋದ್ ರಾಜ್ ಅವರು ತಮ್ಮ ಕಷ್ಟವನ್ನು ಮರೆತು ಬೇರೆಯವರಿಗೆ ಸಹಾಯ ಮಾಡಲು ಸದಾ ಮುಂದೆ ಇರುತ್ತಾರೆ. ರಾಜ್ಯದಲ್ಲಿ ಪ್ರವಾಹ ಉಂಟಾದಂತಹ ಸಂದರ್ಭದಲ್ಲಿ ಸುಮಾರು ಎರಡು ಲಾರಿಯಷ್ಟು ಮೇವನ್ನು ಅವರು ಗೋವುಗಳಿಗಾಗಿ ಕಳಿಸಿದ್ದರು. ಅದು ಮಾತ್ರವೇ ಅಲ್ಲದೆ ಕೊರೊನಾ ಸೋಂಕು ಹರಡುವ ಭೀತಿಯ ಹಿನ್ನೆಲೆಯಲ್ಲಿ ಕೆಲವೇ ದಿನಗಳ ಹಿಂದೆಯಷ್ಟೇ ವಿನೋದ್ ರಾಜ್ ಅವರು ತಮ್ಮ ಸ್ವಂತ ಖರ್ಚಿನಲ್ಲಿ
ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯಲ್ಲಿ ಕ್ರಿಮಿನಾಶಕ ಸಿಂಪಡಣೆ ಮಾಡಿದ್ದರು.

ಅವರು ತಾನೇ ಸ್ವತಃ ತೋಟದಲ್ಲಿ ಬಳಸುವ ಟ್ರ್ಯಾಕ್ಟರ್ ಹಾಗೂ ಪಂಪ್ ಸಹಾಯದಿಂದ ಕ್ರಿಮಿ ನಾಶಕ ಸಿಂಪಡಣೆ ಮಾಡಿ ಸಾಮಾಜಿಕ ಕಳಕಳಿ ಮೆರೆದಿದ್ದರು. ಈಗ ಅವರ ತಾಯಿ ಕೂಡಾ ಮಗನ ಜೊತೆ ಕೈ ಜೋಡಿಸಿ ತಾವು ಬೆಳೆದಂತಹ ದವಸ ಧಾನ್ಯಗಳನ್ನು ಬಡವರಿಗೆ ನೀಡಲು ಮುಂದಾಗಿದ್ದಾರೆ. ಲಾಕ್ ಡೌನ್ ನಿಂದ ತೊಂದರೆಗೀಡಾದ ಬಡವರ ನೆರವಿಗೆ ಅವರು ಮುಂದಾಗಿದ್ದು, ಬಡವರಿಗೆ ಹಾಗೂ
ಚಿತ್ರರಂಗದ ಬಡ ಕಿರಿಯ ಕಲಾವಿದರ ಕುಟುಂಬಕ್ಕೆ ತಿಂಗಳಿಗಾಗುವಷ್ಟು ರೇಷನ್ ಹಾಗೂ ನಿತ್ಯ ಬಳಕೆಯ ಅಗತ್ಯ ವಸ್ತುಗಳನ್ನು ನೀಡಿ ಮಾನವೀಯತೆಯನ್ನು ಮೆರೆದಿದ್ದಾರೆ.

ಲೀಲಾವತಿ ಅವರು ತಾವು ವಾಸಿಸುತ್ತಿರುವ ಹಳ್ಳಿಯಲ್ಲಿ ಅಲ್ಲಿನ ಜನರಿಗೆ ಅನುಕೂಲವಾಗಬೇಕೆಂದು ಒಂದು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಕೂಡಾ ಕಟ್ಟಿಸಿಕೊಟ್ಟಿರುವುದು ಎಲ್ಲರಿಗೂ ತಿಳಿದೇ ಇದೆ. ಈಗ ಕೊರೊನಾ ತಂದಿಟ್ಟ ಆಪತ್ಕಾಲದಲ್ಲಿ ಮತ್ತೊಮ್ಮೆ ಅಮ್ಮ ಮಗ ಇಬ್ಬರೂ ಜನರೊಂದಿಗೆ ನಾವಿದ್ದೇವೆ ಎನ್ನುತ್ತಾ, ತಮ್ಮಲ್ಲಿ ಇದ್ದುದ್ದನ್ನೇ ಇತರರಿಗೂ ಹಂಚುವ ಮೂಲಕ ಜನರ ಸಹಾಯಕ್ಕೆ ಮುಂದಾಗಿದ್ದು, ಅವರು ಈ ಗುಣವೇ ಅವರಿಗೆ ಶ್ರೀ ರಕ್ಷೆ ಎನ್ನಬಹುದು. ಅಪರೂಪದ ವ್ಯಕ್ತಿತ್ವದ ಈ ಇಬ್ಬರಿಗೂ ಆ ದೇವರು ಇನ್ನಷ್ಟು ಆಯುರಾರೋಗ್ಯ ನೀಡಲೇಂದು ನಾವು ಕೂಡಾ ಆಶಿಸೋಣ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here