ಬೆಂಗಳೂರು, ನ. 18: ಕರ್ನಾಟಕದಾದ್ಯಂತ 2023-24 ನೇ ಸಾಲಿನ ಆಮ್ ಆದ್ಮ ಪಕ್ಷದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ದೆ ಮಾಡಿರುವಂತಹ 100 ಕ್ಕೂ ಹೆಚ್ಚು ಅಭ್ಯರ್ಥಿಗಳು ಆಮ್ ಆದ್ಮ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದೇವೆ ಎಂದು ಶ್ರೀ ಸಿ.ಪಿ. ಶರತ್ಚಂದ್ರ ಹೇಳಿದರು.
ಇಂದು ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2023-24 ನೇ ಸಾಲಿನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ದೆ ಮಾಡಿರುವಂತಹ 100 ಕ್ಕೂ ಹೆಚ್ಚು ಅಭ್ಯರ್ಥಿಗಳು ಪಕ್ಷದಲ್ಲಿ ನಾಯಕೃ ಕೊರತೆಯಿಂದಾಗಿ ಆಮ್ ಆದ್ಮ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದೇವೆ ಎಂದರು. ಅಭ್ಯರ್ಥಿಗಳು ಕಾಂಗ್ರೆಸ್ ಪಕ್ಷದ ಸಿದ್ಧಾಂತವನ್ನು ಮತ್ತು ಪ್ರಣಾಳಿಕೆಯನ್ನು ಒಪ್ಪಿ ಆಮ್ ಆದ್ಮಿ ಪಕ್ಷವನ್ನು ತೊರೆದು ಎಲ್ಲಾ ಕಾರ್ಯಕರ್ತರ ಸಮ್ಮುಖದಲ್ಲಿ ಬೆಂಗಳೂರಿನ ಕಾಂಗ್ರೆಸ್ ಪಕ್ಷದ ಕೆ.ಪಿ.ಸಿ.ಸಿ ಪ್ರಧಾನ ಕಛೇರಿಯಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ಮತ್ತು ಮಾನ್ಯ ಕೆ.ಪಿ.ಸಿ.ಸಿ ಅಧ್ಯಕ್ಷರು ಹಾಗೂ ಉಪಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ರವರ ಅಧ್ಯಕ್ಷತೆಯಲ್ಲಿ ಅದಿಕೃತವಾಗಿ ಸೇರಲಿದ್ದೇವೆ ಎಂದರು. ಇದರಲ್ಲಿ ಹಲವಾರು ಎಂ.ಎಲ್.ಎ ಅಭ್ಯಥಿಗಳು ಮತ್ತು ಪಕ್ಷದ ಕಾರ್ಯಕರ್ತರು ಸ್ವ-ಇಚ್ಛೆಯಿಂದ ಸೇರ್ಪಡೆ ಗೊಳ್ಳಿದ್ದಾರೆ ಎಂದರು. ಅದಲ್ಲದೆ ಬಿಜೆಪಿ ಮುಕ್ತ ದೇಶ ಹಾಗೂ ರಾಜ್ಯವನ್ನು ಮಾಡವ ಅಜೆಂಡಾದೊಂದೊಗೆ ಸೇರ್ಪಡೆಯಾಗಲಿದ್ದೇವೆ ಎಂದರು. ಉಮ ಮುಖ್ಯಮಂತ್ರಿಯವರ ಮುಂದಾಳತ್ವದಲ್ಲಿ ಕಾಂಗ್ರೇಸ್ ಪಕ್ಷವನ್ನು ಇನ್ನಷ್ಟುಬಲ ಪಡಿಸಲು ಶ್ರಮಿಸುತ್ತೇವೆ ಎಂದು ತಿಳಿಸಿದರು.
ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆ ಗೊಳ್ಳುತಿರುವ ವಿವರ ಮತ್ತು ಕ್ಷೇತ್ರಗಳು
ಸಿ.ಪಿ. ಶರತ್ ಚಂದ್ರ- ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ – 185
ನೂರಅಹಮ್ಮದ್ ಕುತುಬುದ್ದಿನ್ ಮುಲ್ಲಾ – ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರ-12
3) ಮಲ್ಲಿಕ್ಜಾನ್ ಎಚ್. ನದಾಫ್ – ರಾಮದುರ್ಗ ವಿಧಾನಸಭಾ ಕ್ಷೇತ್ರ- 18
4) ನೇತ್ರಾವತಿ .ಟಿ – ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರ- 113
5) ಡಾ. ಸುಭಾಷ್ಚಂದ್ರ ಸಂಬಾಜಿ – ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರ- 53
6) ರಜಾಕ್ ದಸ್ತಗೀರ್ಸಾಬ ಮುಲ್ಲಾ – ಕಾಗವಾಡ ವಿಧಾನಸಭಾ ಕ್ಷೇತ್ರ- 04
7) ಮಂಜುನಾಥ್ ಎಸ್.ಎಸ್ – ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ- 111
8) ರಾಮಣ್ಣ ಹೂವಣ್ಣನವರ – ನರಗುಂದ ವಿಧಾನಸಭಾ ಕ್ಷೇತ್ರ- 68
9) ಮಹಂತೇಶ ಸಿ.ಯು – ಹೊಳಲ್ಕೆರೆ ವಿಧಾನಸಭಾ ಕ್ಷೇತ್ರ- 102
ಇನ್ನು 80 ಹೆಚ್ಚು ಮುಖಂಡರು ಸೇರ್ಪಡೆಯಾಗಲಿದ್ದಾರೆ.
Disclaimer: This Story is auto-aggregated by a Syndicated Feed and has not been Created or Edited By City Big News Staff.