ಆರೋಗ್ಯದಾಯಕ ನಿಂಬೆಹಣ್ಣು. ಮನೆಮದ್ದು  ಎಂದಾಗ ನಿಂಬೆಹಣ್ಣಿನ ಸ್ಥಾನ ಅತ್ಯುನ್ನತವಾದದ್ದು. ಇದನ್ನು ಔಷಧವಾಗಿಯೂ, ಸೌಂದರ್ಯವರ್ಧಕವಾಗಿಯೂ ಉಪಯೋಗಿಸಲಾಗುತ್ತದೆ.

ನಿಂಬೆಯಲ್ಲಿ ಸಾಕಷ್ಟು ಪೋಷಕಾಂಶಗಳಿದ್ದು, ಪ್ರತಿದಿನ ಸೇವಿಸುವುದರಿಂದ ಉತ್ತಮ ಆರೋಗ್ಯ  ಕಾಪಾಡಿಕೊಳ್ಳಬಹುದು.ಬಿಸಿಲಿನಲ್ಲಿ ದಣಿದು ಬಂದಾಗ ಸಾಕಷ್ಟು ಬೆವರಿರುವುದರೊಂದಿಗೆ ಎನರ್ಜಿ ವ್ಯತ್ಯಯವಾಗಿರುತ್ತದೆ.

ಇಂತಹ ಸಂದರ್ಭದಲ್ಲಿ ನಿಂಬೆಹಣ್ಣಿನ ಶರಬತ್ತು ಜೀವಜಲವಾಗಿ ಸಹಕರಿಸುತ್ತದೆ. ದಿನವೂ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಮತ್ತು ನಿಂಬೆರಸದ ಮಿಶ್ರಣಕ್ಕೆ ಸ್ವಲ್ಪ ಜೇನು ಹಾಕಿ ಕುಡಿದರೆ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.

ಜತೆಗೆ ತ್ವಚೆಯ ಕಾಂತಿಯೂ ಹೆಚ್ಚುತ್ತದೆ. ನಿಂಬೆರಸವನ್ನು ಕೂದಲಿಗೆ ಹಚ್ಚುವುದರಿಂದ ಕೂದಲು ಸೊಂಪಾಗಿ ಬೆಳೆಯುತ್ತದೆ. ಹೀಗೆ ಹಲವು ಗುಣಗಳನ್ನು ಹೊಂದಿರುವ ನಿಂಬೆಯು ದೊಡ್ಡ ದೊಡ್ಡ ರೋಗಗಳು ಬರದಂತೆ ತಡೆಯುತ್ತದೆ. ಕರುಳಿನ ಸ್ವಚ್ಛತೆ ಮಾಡುತ್ತದೆ.

ಇದರಲ್ಲಿ ವಿಟಮಿನ್ ಸಿ ಇರುವುದರಿಂದ ಸೋಂಕಿನ ವಿರುದ್ಧ ಕಾರ್ಯ ನಿರ್ವಹಿಸುತ್ತದೆ. ಬಹುಮುಖ್ಯ ಅಂಶವೆಂದರೆ, ಇದರಲ್ಲಿರುವ ರಾಸಾಯನಿಕ ಕ್ಯಾನ್ಸರ್​ನ ಕೋಶಗಳು ವಿಭಜನೆಯಾಗದಂತೆ ತಡೆಯುತ್ತದೆ. ಇದರಲ್ಲಿರುವ ರುಟಿನ್ ಎನ್ನುವ ಅಂಶವು ಮಧುಮೇಹಿಗಳ ಕಣ್ಣಿನ ಸಮಸ್ಯೆಗಳನ್ನು ನಿವಾರಿಸುತ್ತದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here