ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳೆದ ಎರಡು ದಿನಗಳಿಂದ ಚಿರತೆ ಹಾವಳಿ ಹೆಚ್ಚಾಗಿದ್ದು ಸಾರ್ವಜನಿಕರು ನೆಮ್ಮದಿಯಿಂದ ನಿಟ್ಟುಸಿರು ಬಿಡಲು ಭಯಪಡುತ್ತಿದ್ದಾರೆ.
ಹೌದು, ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿರುವುದರಿಂದ ರಾಜಧಾನಿಯ ಮಂದಿ ನೆಮ್ಮದಿ ಹಾಳಾಗಿದೆ.
ಕೂಡ್ಲುಗೇಟ್ ಜನವಸತಿ ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ಚಿರತೆ ಭಯದಲ್ಲೇ ಕೈಯಲ್ಲಿ ದೊಣ್ಣೆ ಹಿಡಿದುಕೊಂಡು ಜನ ಓಡಾಡುತ್ತಿದ್ದಾರೆ.
ಬೆಂಗಳೂರು ದೊಡ್ಡದಾಗಿ ಬೆಳೆದಂತೆಲ್ಲಾ ಕಾಡು ನಾಶವಾಗುತ್ತಿದೆ. ಅದರಲ್ಲೂ ಈ ಮಹಾನಗರಿ ಬೆಂಗಳೂರು ಬೆಳೆಸಲು, ಕಳೆದ 20 ವರ್ಷದಲ್ಲಿ ಬೆಂಗಳೂರು ಹೊರವಲಯದ ಕಾಡುಗಳನ್ನ ನಾಶ ಮಾಡಲಾಗಿದೆ. ಇದರ ಪರಿಣಾಮ ಕಾಡು ಪ್ರಾಣಿಗಳು ನಗರಕ್ಕೆ ಬಂದು ಕಾಟ ಕೊಡುತ್ತಿವೆ. ಕೆಲ ವರ್ಷದ ಹಿಂದೆ ಚಿರತೆಯೊಂದು ಸೀದಾ ಅಪಾರ್ಟ್ಮೆಂಟ್ ಒಳಗೆ ನುಗ್ಗಿತ್ತು. ಅದಕ್ಕೂ ಮೊದಲು ರಾತ್ರಿ ಸಮಯಕ್ಕೆ ಸ್ಕೂಲ್ ಒಳಗೆ ಚಿರತೆ ಓಡಾಡುವ ದೃಶ್ಯ ಕಂಡು ಜನ ಶಾಕ್ ಆಗಿದ್ರು. ಬೆಂಗಳೂರಲ್ಲಿ ಚಿರತೆ ಸ್ಕೂಲ್ಗೆ ನುಗ್ಗಿದ್ದ ವಿಡಿಯೋ ಜಗತ್ತಿನಾದ್ಯಂತ ವೈರಲ್ ಆಗಿತ್ತು. ಈಗ ಬೆಂಗಳೂರಿನ ನಡು ರಸ್ತೆಯಲ್ಲೇ ಈ ಚಿರತೆ ಪ್ರತ್ಯಕ್ಷ್ಯವಾಗಿದೆ.
ಈಗಾಗಲೇ ಹಲವು ಬಾರಿ ಚಿರತೆ ಕಾಟದಿಂದ ಜನ ದಿಗಿಲು ಪಟ್ಟಿದ್ದಾರೆ. ನಗರ ವಸತಿ ಪ್ರದೇಶದಲ್ಲಿ ಕಾಣಿಸಿಕೊಂಡ ಚಿರತೆ ಆರಾಮವಾಗಿ ನಡು ರಸ್ತೆಯಲ್ಲಿ ಓಡಾಡಿದೆ. ಹೊಸೂರು ರಸ್ತೆ, ಕೂಡ್ಲುಗೇಟ್ ಬಳಿ ಹೀಗೆ ರಾತ್ರಿ ವೇಳೆಯಲ್ಲಿ ಚಿರತೆ ಕಾಣಿಸಿಕೊಂಡಿದೆ. ಕೂಡ್ಲು ಗೇಟ್ನ ಹೊಸಪಾಳ್ಯದ ಸಮೀಪ ಚಿರತೆ ಕಾಣಿಸಿಕೊಂಡಿದೆ. ಅಂದಹಾಗೆ ಚಿರತೆಗಳು ರಾತ್ರಿ ವೇಳೆ ವೇಗವಾಗಿ ಸಂಚರಿಸುತ್ತವೆ, ಹಾಗೇ ಆಹಾರವನ್ನೂ ಈ ಸಮಯದಲ್ಲೇ ಹೆಚ್ಚಾಗಿ ಹುಡುಕುತ್ತವೆ. ಯಾಕಂದ್ರೆ ರಾತ್ರಿ ಸಮಯದಲ್ಲಿ ಚಿರತೆಗಳಿಗೆ ಅಡ್ಡಿ ಮಾಡುವವರು ಯಾರೂ ಇರುವುದಿಲ್ಲ.ಹಾಗೇ ನಗರ ಪ್ರದೇಶದಲ್ಲಿ ನಾಯಿ ಸೇರಿದಂತೆ, ಇತರ ಸಾಕು ಪ್ರಾಣಿಗಳ ಮೇಲೆ ದಾಳಿ ಮಾಡಲು ಚಿರತೆಗಳು ಬರುತ್ತವೆ. ಇದೇ ರೀತಿ ಚಿರತೆಯೊಂದು ಹೊಸೂರು ರಸ್ತೆಯ ಕೂಡ್ಲು ಗೇಟ್ ಬಳಿ ಕಾಣಿಸಿಕೊಂಡಿದೆ. ಕೂಡ್ಲು ಗೇಟ್ನ ಹೊಸಪಾಳ್ಯದ ಸಮೀಪವೇ ಚಿರತೆ ಕಾಣಿಸಿಕೊಂಡಿದ್ದು ನಾಯಿಗಳು ಆ ಚಿರತೆಯನ್ನ ಬೆನ್ನತ್ತಿ ಹೋಗಿರುವುದು ಸಿಸಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ.
Disclaimer: This Story is auto-aggregated by a Syndicated Feed and has not been Created or Edited By City Big News Staff.