ಅಪಾಯ ಬಂದಾಗ ಉಪಾಯದಿಂದ ಪಾರಾಗಿ
ಒಂದು ಕಾಡಿನಲ್ಲಿ ವನರಾಜ ಸಿಂಹವು ತನ್ನ ಆಹಾರಕ್ಕಾಗಿ ಹೆಚ್ಚು ಪ್ರಾಣಿಗಳನ್ನು ಭೇಟೆಯಾಡುತ್ತಿತ್ತು. ಇದನ್ನು ಕಂಡ ಪ್ರಾಣಿಗಳೆಲ್ಲಾ ಒಟ್ಟಿಗೆ ಸೇರಿ ಒಂದು ನಿರ್ಧಾರಕ್ಕೆ ಬಂದವು. ದಿನಕ್ಕೆ ಒಂದು ಪ್ರಾಣಿಯನ್ನು ಸಿಂಹಕ್ಕೆ ಆಹಾರವಾಗಿ ಅದರ ಬಳಿಗೆ ಕಳುಹಿಸಿಕೊಡುವುದು ಎಂದು. ಅದರಂತೆ ಪ್ರಾಣಿಗಳೆಲ್ಲಾ ಹೋಗಿ ಸಿಂಹದ ಬಳಿ ಮಹಾಸ್ವಾಮಿ ನಿಮ್ಮ ಬಳಿಗೆ ನಾವೇ ಪ್ರತಿದಿನ ಒಂದು ಪ್ರಾಣಿಗಳನ್ನು ಕಳುಹಿಸಿಕೊಡುತ್ತೇವೆ. ದಯವಿಟ್ಟು ಹೆಚ್ಚು ಪ್ರಾಣಿಗಳ ನ್ನು ಕೊಲ್ಲಬೇಡಿ ಎಂದು ಮನವಿಯನ್ನು ಮಾಡಿಕೊಂಡವು.

ಸಿಂಹವು ಅನಾಯಾಸವಾಗಿ ಕೂತಲ್ಲೆ ಆಹಾರ ಬರುತ್ತದೆ ಎಂದು ಒಪ್ಪಿಕೊಂಡಿತು.
ಮಾತಿನಂತೆ ಪ್ರಾಣಿಗಳು ದಿನವೂ ಸಿಂಹದ ಆಹಾರಕ್ಕಾಗಿ ಒಂದೊಂದು ಪ್ರಾಣಿಗಳು ಹೋಗುತ್ತಿದ್ದವು. ಸಿಂಹ ಅದನ್ನು ತಿಂದು ತೃಪ್ತಿ ಪಡುತ್ತಿತ್ತು. ಹೀಗಿರುವಾಗ
ಒಂದು ದಿನ ಮೊಲದ ಸರತಿ ಬಂತು. ಬುದ್ದಿ ವಂತ‌ ಮೊಲ ಏನಾದರೂ ಮಾಡಿ ಸಿಂಹವನ್ನು ಕೊನೆಗಾಣಿಸಬೇಕು ಎಂದು ಯೋಚಿಸುತ್ತಾ ಬರುತ್ತಿರುವಾಗ ದಾರಿಯಲ್ಲಿ ನೆಲ ಬಾವಿಯ ಒಂದು ಕಾಣಿಸಿತು. ಅದು ಬಗ್ಗಿ ನೋಡಿದಾಗ ತಳದಲ್ಲಿ ನೀರಿತ್ತು. ಏನೋಬಯೋಚಿಸಿದ ಮೊಲ ನಿಧಾನವಾಗಿ ಸಿಂಹದ ಹತ್ತಿರ ಬಂದಿತು.


ಮೊದಲೇ ಹಸಿದಿದ್ದ ಸಿಂಹ ಆ ಸಣ್ಣ ಮೊಲವನ್ನು ನೋಡಿ ಏಕೆ ಇಷ್ಡು ತಡ ಎಂದಿತು. ಮೊಲವು ನಡುಗುತ್ತಾ ನಾನು ಬೇಗನೆ ಬತುತ್ತಿದ್ದೆ ದಾರಿಯಲ್ಲಿ ಒಂದು ಸಿಂಹವು ಅಡ್ಡಗಟ್ಟಿ ನನ್ನನ್ನು ತಿನ್ನಲು ನೋಡಿತು ಅದರಿಂದ ತಪ್ಪಿಸಿಕೊಂಡು ಬರಲು ಇಷ್ಟು ಹೊತ್ತಾಯಿತು ಎಂದಿತು.
ಈ ಕಾಡಿನಲ್ಲಿ ಇನ್ನೊಂದು ಸಿಂಹವೇ ನಡೆ ತೋರಿಸು ಮೊದಲು ಅದನ್ನು ಕೊಂದು ನಂತರ ನಿನ್ನನ್ನು ಕೊಲ್ಲುತ್ತೇನೆ ಎಂದಿತು.
ಮೊಲವು ಸಿಂಹವನ್ನು ಮೊದಲೇ ನೋಡಿದ ಬಾವಿಯ ಬಳಿ ಕರೆತಂದು ಸುತ್ತ ಮುತ್ತಲೂ ನೋಡಿ ಮಹಾಸ್ವಾಮಿ ನಿಮ್ಮನ್ನು ನೋಡಿ ಹೆದರಿ ಬಾವಿಯಲ್ಲಿ ಬಚ್ಚಿಟ್ಟು ಕೊಂಡಿರಬೇಕು ಬಗ್ಗಿ ನೋಡಿರಿ ಎಂದಿತು. ಸಿಂಹ ಬಾವಿಯ ಕಟ್ಟೆಯ ಮೇಲೆ ನಿಂತು ಬಗ್ಗಿ ನೋಡಿದಾಗ ಅದರ ಪ್ರತಿಬಿಂಬವೇ ಕಾಣಿಸಿತು. ಅದು ಓಹೋ ನನಗೆ ಹೆದರಿ ಈ ಬಾವಿಯಲ್ಲಿ ಬಚ್ಚಿಟ್ಟುಕೊಂಡಿರುವೆಯಾ? ಈಗಲೇ ಕೊಲ್ಲುತ್ತೇನೆ ಎಂದು ಬಾವಿಗೆ ಹಾರಿತು.
ನಂತರ ತಿಳಿಯಿತು ತಾನು ಮೊಲದಿಂದ ಮೋಸ ಹೋಗಿದ್ದೇನೆಂದು ಅದರೇನು ಅದಕ್ಕೆ ಮೇಲೆ ಬರಲು ಆಗಲಿಲ್ಲ ಅಲ್ಲೇ ಪ್ರಾಣ ಬಿಟ್ಟಿತು.
ಮೊಲದ ಉಪಾಯ ದಿಂದ ಸಿಂಹದ ಉಪಟಳ ತಪ್ಪಿದ್ದರಿಂದ ಎಲ್ಲಾ ಪ್ರಾಣಿಗಳು ಮೊಲವನ್ನು ಕೊಂಡಾಡಿದವು.
ಅಪಾಯ ಬಂದಾಗ ಎದೆಗುಂದದೆ ಉಪಾಯವಾಗಿ ಗೆಲ್ಲಬೇಕು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here