P

ಶ್ವಾನಗಳು ಕೂಡಾ ಒಂದು ರೀತಿಯಲ್ಲಿ ಸಂಘ ಜೀವಿಗಳು. ಅವು ಹೆಚ್ಚು ಸಮಯ ಗುಂಪಿನಲ್ಲಿ ಅಥವಾ ತನ್ನ ಆರೈಕೆ ಮಾಡಿತ್ತಿರುವ ಮನೆಯವರೊಡನೆ ಕಳೆಯಲು ಬಯಸುತ್ತದೆ. ಇಲ್ಲೊಂದು ಶ್ವಾನ ಲಾಕ್ ಡೌನ್ ನಿಂದ ತನ್ನ ಪರಿಚಯದವರು ಹಾಗೂ ಸ್ನೇಹಿತರನ್ನು ಮಿಸ್ ಮಾಡಿಕೊಂಡು, ಅವರಿಗೆ ಈ ಸಮಯದಲ್ಲಿ ಕುಕೀಸ್ ಗಳನ್ನು ತೆಗೆದುಕೊಂಡು ಹೋಗುವ ಮೂಲಕ ಅವರನ್ನು ಭೇಟಿ ಮಾಡಿ ಬರುತ್ತಿದೆ. ಶ್ವಾಮ ಮತ್ತು ಅದನ್ನು ಸಾಕಿ ಸಲಹುತ್ತಿರುವ ಅದರ ಮಾಲಕಿ ಇಬ್ಬರೂ ಲಾಕ್ ಡೌನ್ ಅವಧಿಯಲ್ಲಿ ಮನೆಯಲ್ಲೇ ಕುಕೀಸ್ ತಯಾರಿಸಿ ನೆರೆ ಹೊರೆ ಯವರಿಗೆ, ಸ್ನೇಹಿತರಿಗೆ ಹಂಚುತ್ತಿದ್ದಾರೆ.

ಕೇಟ್ ಮಿಚೆಲ್ ಎಂಬಾಕೆ ದಕ್ಷಿಣ ಇಂಗ್ಲೆಂಡ್ ನ ವೆಸ್ಟ್ ಸಸೆಕ್ಸ್ ಎಂಬಲ್ಲಿ ಹೇರ್ ಕಟ್ ಮತ್ತು ಮೇಕಪ್ ಸಲೂನ್ ಹೊಂದಿದ್ದು, ಆಕೆ ಶೆಲ್ಡನ್ ಹೆಸರಿನ ಬ್ರಿಟಿಷ್ ಬುಲ್ ಡಾಗ್ ಒಂದನ್ನು ಸಾಕಿದ್ದಾರೆ. ಆ ಶ್ವಾನ ಕೂಡಾ ಸಲೂನ್ ಗೆ ಬರುವ ಜನರೊಡನೆ,ಸಿಬ್ಬಂದಿಯೊಡನೆ ಸಮಯವನ್ನು ಕಳೆಯುತ್ತಿತ್ತು. ಆದರೆ ಲಾಕ್ ಡೌನ್ ಆದ ನಂತರ ಅದಕ್ಕೆ ಕೂಡಾ ಜನರ ಒಡನಾಟವಿಲ್ಲದೇ ಒಂಟಿ ತನ ಕಾಡಿದೆ. ಅದಕ್ಕೆ ಮಿಚೆಲ್ ಕಂಡು ಕೊಂಡ ಬೆಸ್ಟ್ ಐಡಿಯಾ, ತಾನೇ ಮನೆಯಲ್ಲಿ ಕುಕೀಸ್ ತಯಾರಿಸಿ ನೆರೆ ಹೊರಯವರಿಗೆ ಹಾಗೂ ಸ್ನೇಹಿತರಿಗೆ ಹಂಚುವುದು.

 

ಶೆಲ್ಡನ್ ಬೆನ್ನ ಮೇಲೆ ಒಂದು ಬ್ಯಾಗ್ ನ್ನು ಕಟ್ಟಿದ್ದು ಅದರಲ್ಲಿ ಕುಕೀಸ್ ಇಟ್ಟು ಮಿಚಲ್ ಕಳುಹಿಸಿದರೆ ಆ ಮಿಚೆಲ್ ಜೊತೆಗೆ ಶ್ವಾನ ನೆರೆ ಹೊರೆಯವರ ಮನೆಗೆ ಹೋಗಿ ಅವರಿಗೆ ಕುಕೀಸ್ ನೀಡಿ ಬರುತ್ತದೆ. ಕೇಟ್ ಮಿಚೆಲ್ ಈ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆ ವಿಡಿಯೋ ವನ್ನು ಬಹಳಷ್ಟು ಜನ ಮೆಚ್ಚಿರುವುದು ಮಾತ್ರವೇ ಅಲ್ಲದೇ ಅದನ್ನು ಹಂಚಿಕೊಂಡಿದ್ದಾರೆ. ಕೇಟ್ ಹಾಗೂ ಶೆಲ್ಡನ್ ನೀಡುವ ಕುಕೀಸ್ ಗಳನ್ನು ಜನರು ಸಂತಸದಿಂದ ತೆಗೆದುಕೊಂಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here