ಲಾಕ್ ಡೌನ್ ಪರಿಣಾಮ ಎಂಬಂತೆ ದೇಶದ ಕಲುಷಿತ ನದಿಗಳೆಂದೇ ಕುಖ್ಯಾತಿಯಾಗಿದ್ದ ಪವಿತ್ರ ನದಿಗಳಾದ ಗಂಗಾ ಮತ್ತು ಯಮುನಾ ಮತ್ತೆ ತಮ್ಮ ಗತ ವೈಭವವನ್ನು ಪಡೆದುಕೊಂಡಿವೆ‌. ಮತ್ತೊಮ್ಮೆ ಪಾವನ, ಕಾಲುಷ್ಯರಹಿತ ಜಲದೊಂದಿಗೆ ಹರಿಯುತ್ತಿವೆ. ಏಕೆಂದರೆ ಈ ನದಿಗಳು ಬಹುತೇಕ ಸ್ವಚ್ಛಗೊಂಡಿವೆ. ಇದಕ್ಕೆ ಪ್ರಮುಖ ಕಾರಣ ಲಾಕ್ ಡೌನ್ ನಿಂದ ಕಾರ್ಖಾನೆಗಳು ಮುಚ್ಚಿದ್ದು ಅವುಗಳು ಕಲ್ಮಶಗಳು ನದಿಗಳನ್ನು ಸೇರುತ್ತಿಲ್ಲ, ನದಿ ದಡದಲ್ಲಿರುವ ದೇವಾಲಯಗಳಿಗೆ ಭಕ್ತರ ಆಗಮನ ನಿಷೇಧಿಸಿರುವುದರಿಂದ ಭಕ್ತರು ಬರುತ್ತಿಲ್ಲ. ಹೀಗೆ ಭಕ್ತರು ಸ್ನಾನ ಇಲ್ಲದೆ, ಪೂಜೆ ಎಂದು ಹೂವುಗಳನ್ನು ಹರಿಯ ಬಿಡುತ್ತಿಲ್ಲ.

ಇದರಿಂದಾಗಿ ನದಿಗಳು ಸುಮಾರು 40 ರಿಂದ 50 % ಶುದ್ಧವಾಗಿದ್ದು, ಮಾಲಿನ್ಯದ ಪ್ರಮಾಣ ಕೂಡಾ ಕಡಿಮೆಯಾಗಿದೆ‌. ಗಂಗಾ ನದಿಯ ಮಾಲಿನ್ಯದಲ್ಲಿ ಕೈಗಾರಿಕೆಗಳ ಕೊಡುಗೆ ಹೆಚ್ಚು. ಆದರೆ ಮಾರ್ಚ್ 24 ರಿಂದಲೂ ಕಾರ್ಖಾನೆಗಳು ಮುಚ್ಚಿರುವುದರಿಂದ ಮಾಲಿನ್ಯದ ಪ್ರಮಾಣ ಕಡಿಮೆಯಾಗಿದೆ. ಅಲ್ಲದೆ ಎರಡು ದಿನ ಮಳೆಯಾದ ಕಾರಣ ನದಿ ನೀರಿನ ಹರಿವು ಹೆಚ್ಚಿ ನದಿಯೊಳಗಿನ ಕೊಳೆ ಹರಿದು ಹೋಗಿದೆ ಎಂದು ಬನಾರಸ್ ಹಿಂದೂ ವಿಶ್ವವಿದ್ಯಾಲಯದ ತಜ್ಞರು ಹೇಳಿದ್ದಾರೆ.

ಗಂಗಾ ನದಿ ಸ್ವಚ್ಛ ಆಗಿರುವುದನ್ನು ನೋಡಿ ಸ್ಥಳೀಯರು ಹರ್ಷಿಸಿದ್ದಾರೆ. ಇದೇ ರೀತಿ ಮಥುರಾದಲ್ಲಿ ಕೂಡಾ ಯಮುನಾ ನದಿ ಕೂಡಾ ಸ್ವಚ್ಛವಾಗಿದ್ದು, ಮಾಲಿನ್ಯದ ಕಾರಣ ಕಪ್ಪಾಗಿ ಕಾಣುತ್ತಿದ್ದ ನದಿ ನೀರು ಈಗ ಪಾರದರ್ಶಕವಾಗಿ ಕಾಣುತ್ತಿದೆ. 42 ವರ್ಷಗಳ ದೀರ್ಘ ಸಮಯದ ನಂತರ ಯಮುನಾ ನದಿ ನೀರು ಇಷ್ಟೊಂದು ಸ್ವಚ್ಛ ಆಗಿರುವುದನ್ನು ನೋಡುತ್ತಿರುವುದಾಗಿ ಮಥುರಾದ ಚತುರ್ವೇದ ಪರಿಷತ್ ನ ಉಪಾಧ್ಯಕ್ಷ ರಾಕೇಶ್ ತಿವಾರಿ ಅವರು ಹೇಳಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here