ನಾಲ್ಕನೇ ಹಂತದ ಲಾಕ್ ಡೌನ್ ಮುಕ್ತಾಯವಾಗುತ್ತಿರುವ ಬೆನ್ನಲ್ಲೇ ಇದೀಗ ಐದನೇ ಹಂತದ ಲಾಕ್​ಡೌನ್​​ ನ ಮಾರ್ಗದರ್ಶಿ ಸೂಚನೆಗಳನ್ನು ಬಿಡುಗಡೆ ಮಾಡಿದೆ ಕರ್ನಾಟಕ ರಾಜ್ಯ ಸರ್ಕಾರ. ಕೇಂದ್ರ ಸರ್ಕಾರವು ನಿನ್ನೆ ಲಾಕ್ ಡೌನ್ ಐದರ ಕುರಿತಾಗಿ ನೀಡಿರುವ ಮಾರ್ಗಸೂಚಿ ಅನ್ವಯ, ಅದರಲ್ಲಿನ ಸೂಷನೆಗಳನ್ನು ಆದರಿಸಿ, ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು, ಬಹುತೇಕ ಕೇಂದ್ರ ಸರ್ಕಾರದ ಮಾರ್ಗಸೂಚಿಯಲ್ಲಿರುವ ಅಂಶಗಳನ್ನು ಯಥಾವತ್ತಾಗಿ ರಾಜ್ಯ ಸರ್ಕಾರ ತನ್ನ ಮಾರ್ಗಸೂಚಿಯಲ್ಲಿ ಬಿಡುಗಡೆ ಮಾಡಿದ್ದು, ಅದರ ಪ್ರಮುಖ ವಿಚಾರಗಳು ಹೀಗಿವೆ.

ಜೂನ್ 30ರವರೆಗೆ ಲಾಕ್​​ಡೌನ್ ಮುಂದುವರೆಯುತ್ತೆ.
ಜೂನ್ 8 ರಿಂದ ದೇವಾಲಯ, ಚರ್ಚ್​, ಮಸೀದಿಗಳಂತಹ ಧಾರ್ಮಿಕ ಕೇಂದ್ರಗಳು ತೆರೆಯುತ್ತವೆ. ಥಿಯೇಟರ್, ಮೆಟ್ರೋ ಸಂಚಾರ, ಮನೋರಂಜನ ಸ್ಥಳಗಳಲ್ಲಿ ಮಾತ್ರ ನಿರ್ಬಂಧ ಮುಂದುವರೆಯುವುದು. ಅದೇ ರೀತಿ ಶಾಲೆ ಕಾಲೇಜುಗಳಿ ಸದ್ಯಕ್ಕೆ ತೆರೆಯಲಾಗುವುದಿಲ್ಲ. ಅವುಗಳು ಎಂದು ಆರಂಭವಾಗಲಿದೆ ಎಂಬ ವಿಚಾರವನ್ನು ಜುಲೈ ನಂತರ ನಿರ್ಧಾರ ಮಾಡಲಾಗುವುದು. ರಾಜ್ಯದಲ್ಲಿ ರಾತ್ರಿ 9 ರಿಂದ ಬೆಳಗ್ಗೆ 5 ರವರೆಗೆ ಕರ್ಫ್ಯೂ ಮುಂದುವರೆಯುವುದು.
ಜಿಮ್​, ಸ್ವಿಮ್ಮಿಂಗ್​ ಪೂಲ್ ​ ಎಂದಿನಂತೆ ಮುಚ್ಚಲ್ಪಟ್ಟಿರುತ್ತವೆ. ಕಂಟೈನ್ಮೆಂಟ್ ಝೋನ್​ಗಳಲ್ಲಿ ಕಟ್ಟುನಿಟ್ಟಿನ ಲಾಕ್​ಡೌನ್ ವಿಧಿಸಲಾಗಿದೆ.

ಮದುವೆಗೆ 50 ಜನರು ಹಾಗೂ ಅಂತ್ಯ ಸಂಸ್ಕಾರಕ್ಕೆ 20 ಜನರು ಸೇರಲು ಅವಕಾಶವಿದೆ. ಹೋಟೆಲ್, ರೆಸ್ಟೋರೆಂಟ್​ ಹಾಗೂ ಆಸ್ಪತ್ರೆಗಳ ಸೇವೆಗಳು ಲಭ್ಯವಿರಲಿದೆ. ನಗರಗಳಲ್ಲಿ ಶಾಪಿಂಗ್​ ಮಾಲ್​ಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು, ಗರ್ಭಿಣಿಯರು ಹಾಗೂ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಹೊರಗೆ ಬರುವುದನ್ನು ನಿಷೇಧ ಮಾಡಲಾಗಿದೆ.
ಅಂತಾರಾಷ್ಟ್ರೀಯ ವಿಮಾನಯಾನಕ್ಕೆ ನಿರ್ಬಂಧ ಮುಂದುವರೆದಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here