ಪಾಕಿಸ್ತಾನದಲ್ಲಿ ತುರ್ತು ಪರಿಸ್ಥಿತಿ ಘೋಷಣೆಗೆ ಕಾರಣವಾಗಿದ್ದ ಮಿಡತೆ ಹಾವಳಿ ಇದೀಗ ಭಾರತವನ್ನೂ ಪ್ರವೇಶಿಸಿದ್ದು ಉತ್ತರಪ್ರದೇಶ, ರಾಜಸ್ಥಾನ್, ಮಧ್ಯಪ್ರದೇಶ, ಮಹಾರಾಷ್ಟ್ರ ರಾಜ್ಯಗಳಿಗೆ ಈಗಾಗಲೇ ಪ್ರವೇಶಿಸಿರುವುದರಿಂದ ಕಲಬುರಗಿ, ಬೀದರ್ ಸೇರಿದಂತೆ ಸುತ್ತಲಿನ ಜಿಲ್ಲೆಗಳ ರೈತರು ಮಿಡತೆ ಹಾವಳಿ ಭೀತಿಗೆ ಒಳಗಾಗಿದ್ದಾರೆ.

ಮಹಾರಾಷ್ಟ್ರದ ಅಮರಾವತಿಯಲ್ಲಿ ರಕ್ಕಸ ಗಾತ್ರದ ಮಿಡತೆಗಳು ಕಂಡು ಬಂದಿದ್ದು ಅವೆಲ್ಲವೂ ಕಲಬುರಗಿ ಮತ್ತು ಬೀದರ್ ಕಡೆಗೆ ಸಾಗಿಬರುವ ಸಾಧ್ಯತೆ ಹೆಚ್ಚಾಗಿದೆ. ಉತ್ತರ ಭಾರತದ ರಾಜ್ಯಗಳನ್ನು ಬಾಧಿಸುತ್ತಿರುವ ಮಿಡತೆಗಳು ಬೆಳೆಗಳಿಗೆ ತೀವ್ರತರದ ಹಾನಿಯನ್ನುಂಟು ಮಾಡುತ್ತಿವೆ.

ಒಂದು ಚದರ ಕಿಲೋ ಮೀಟರ್ ಪ್ರದೇಶ ವ್ಯಾಪ್ತಿಯಲ್ಲಿ ಸುಮಾರು ನಾಲ್ಕು ಕೋಟಿ ಮಿಡತೆಗಳ ಇರುತ್ತವೆ. ಒಂದೊಮ್ಮೆ ನೆಲಕ್ಕಿಳಿದರೆ ಕ್ಷಣಾರ್ಧದಲ್ಲಿ ಬೆಳೆ ತಿಂದು ಹೋಗುತ್ತವೆ. ಇದರಿಂದಾಗಿ ಆಹಾರದ ಕೊರತೆಯ ಸಾಧ್ಯತೆ ಹೆಚ್ಚಾಗಲಿದೆ.

ಪ್ರಸ್ತುತ ಮಹಾರಾಷ್ಟ್ರದ ಅಮರಾವತಿಯಲ್ಲಿರುವ ಮಿಡತೆಗಳು ಅಘ್ಪಾನಿಸ್ತಾನ್, ಪೂರ್ವ ಆಫ್ರಿಕಾ ಮತ್ತು ಇರಾನ್ ಮರುಭೂಮಿಯಲ್ಲಿ ಹೆಚ್ಚಾಗಿ ಕಂಡು ಬರುವಂತಹವು. ಅಲ್ಲಿಂದ ಬಂದಿರುವ ಮಿಡತೆಗಳು ಕರ್ನಾಟಕದ ಜಿಲ್ಲೆಗಳನ್ನು ಶೀಘ್ರದಲ್ಲೇ ಪ್ರವೇಶಿಸುವ ಸಂಭವ ದಟ್ಟಾಗಿದೆ. ರಾಜಸ್ಥಾನ, ಮಧ್ಯಪ್ರದೇಶ, ಉತ್ತರಪ್ರದೇಶ ರಾಜ್ಯಗಳಲ್ಲಿ ಹೆಲಿಕಾಪ್ಟರ್ ಮೂಲಕ ಔಷಧ ಸಿಂಪಡಣೆ ಮೂಲಕ ಅವುಗಳನ್ನು ಚದುರಿಸುವ ಪ್ರಕ್ರಿಯೆ ನಡೆದಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here