ಲೋಕಸಭೆ ಚುನಾವಣಾ ಫಲಿತಾಂಶದ ನಂತರ ಅನಿರೀಕ್ಷಿತವಾದ ಹೊಡೆತ ಅನುಭವಿಸಿ, ಸ್ಥಾನಗಳಿಸುವಲ್ಲಿ ಭಾರಿ ಹಿನ್ನಡೆ ಉಂಟಾದ ಬೆನ್ನಲ್ಲೇ ಜೆಡಿಎಸ್ ಮಾಧ್ಯಮಗಳಿಂದ ದೂರ ಉಳಿಯುವ ನಿರ್ಧಾರವನ್ನು ಮಾಡಿದೆ. ಜೆಡಿಎಸ್ ಮಾದ್ಯಮಗಳ ಮುಂದೆ ಕೆಲವು ದಿನ ಯಾವುದೇ ವಿಚಾರಗಳನ್ನು ಮಾಡುವ ಆಸಕ್ತಿಯಿಂದ ಹಿಂದೆ ಸರಿಯುವ ಸೂಚನೆಗಳನ್ನು ನೀಡಿದೆ. ನಿನ್ನೆ ಜೆಡಿಎಸ್ ಕಚೇರಿಯಲ್ಲಿ ನಡೆದಂತಹ ಶಾಸಕಾಂಗ ಸಭೆಯಲ್ಲಿ ಜೆಡಿಎಸ್ ವರಿಷ್ಠರಾದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹಾಗೂ ಜೆಡಿಎಸ್ ನ ರಾಜ್ಯಾಧ್ಯಕ್ಷರಾದ ಹೆಚ್. ವಿಶ್ವನಾಥ್ ಅವರು ಈ ಸಂಬಂಧ ಚರ್ಚೆ, ವಿಮರ್ಶೆಗಳನ್ನು ನಡೆಸಿ ಈ ಮಾದ್ಯಮಗಳ ಬಗ್ಗೆ ತಮ್ಮ ತೀರ್ಮಾನ ತೆಗೆದುಕೊಂಡಿದ್ದಾರೆನ್ನಲಾಗಿದೆ.

ತೀರ್ಮಾನ ತೆಗೆದುಕೊಂಡ ನಂತರದಲ್ಲಿ ಜೆಡಿಎಸ್ ಪಕ್ಷದ ವಕ್ತಾರರು ಆ ಕ್ಷಣದಿಂದಲೇ ಯಾವುದೇ ಮಾಧ್ಯಮಗಳಲ್ಲಿ ನಡೆಯುವ ಚರ್ಚೆಯಲ್ಲಿ ಭಾಗವಹಿಸಬಾರದು ಎಂಬುವ ನಿರ್ದೇಶನವನ್ನು ನೀಡಲಾಗಿದೆ. ಅಲ್ಲದೆ ಮಾಧ್ಯಮದವರೊಂದಿಗೆ ಯಾವುದೇ ರೀತಿಯ ಟಿಪ್ಪಣಿಗಳನ್ನು ನೀಡುವುದು ಅಥವಾ ಅವರಿಗೆ ಯಾವುದೇ ವಿಚಾರವಾಗಿ ಹೇಳಿಕೆಗಳನ್ನು ಕೊಡಬಾರದು ಎಂದು ನಿರ್ಧಾರ ಮಾಡಲಾಗಿದೆ. ಆದ ಕಾರಣ ಜೆಡಿಎಸ್ ಪಕ್ಷದ ವಕ್ತಾರರು ಯಾವುದೇ ಟಿವಿ ವಾಹಿನಿಗಳಿಗೆ ಅಥವಾ ಮುದ್ರಣ ಮಾಧ್ಯಮಗಳಿಗೆ ತಮ್ಮ ಹೇಳಿಕೆಗಳನ್ನು ನೀಡಬಾರದೆಂದು ಜೆಡಿಎಸ್ ನ ಕಾರ್ಯಾಧ್ಯಕ್ಷ ಎಂ.ಎಸ್.ನಾರಾಯಣರಾವ್ ಪ್ರಕಟಣೆಯೊಂದರ ಮೂಲಕ ಸ್ಪಷ್ಟವಾಗಿ ತಿಳಿಸಿದ್ದಾರೆ

ಟಿವಿ ಮಾಧ್ಯಮಗಳು ನಡೆಸುವ ಚರ್ಚೆಗಳಲ್ಲಿ ಜೆಡಿಎಸ್ ಪಕ್ಷದವರು ಭಾಗವಹಿಸಬಾರದೆಂದು ನೀಡಲಾಗಿರುವ ಆದೇಶವನ್ನು ಯಾವುದೇ ಕಾರಣಕ್ಕೂ ಉಲ್ಲಂಘಿಸಬಾರದೆಂದು ಸೂಚನೆ ನೀಡಲಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ನಿನ್ನೆ ಜೆಡಿಎಸ್ ನ ರಾಜ್ಯಾಧ್ಯಕ್ಷರಾದ ಹೆಚ್. ವಿಶ್ವನಾಥ್ ಅವರು ಪ್ರತಿಕ್ರಿಯೆ ನೀಡುತ್ತಾ , ಜೆಡಿಎಸ್​ನಿಂದ ಯಾರು ಮಾದ್ಯಮಗಳ‌ ಮುಂದೆ ಹೋಗಿ ಮಾತನಾಡುತ್ತಾರೆಂಬುದಕ್ಕೆ ಪಕ್ಷವು ವಕ್ತಾರರ ಪಟ್ಟಿ ಸಿದ್ದಪಡಿಸಲಾಗುತ್ತದೆ. ಅಲ್ಲಿಯವರೆಗೆ ಜೆಡಿಎಸ್​ನಿಂದ ಯಾರೂ ಮಾಧ್ಯಮಗಳಲ್ಲಿ ಮಾತನಾಡಬಾರದೆಂಬ ಎಚ್ಚರಿಕೆ ನೀಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here