ಉತ್ತರ ಪ್ರದೇಶದಲ್ಲಿ ಮಾಯಾವತಿಯವರ ಮಾಯೆ ಆಗಲಿ ಅಥವಾ ಅಖಿಲೇಶ್ ಯಾದವ್ ಅವರ ರಾಜಕಾರಣವಾಗಲಿ ಮೋದಿ ವಿರುದ್ಧ ಅಲೆ ಎಬ್ಬಿಸುವಲ್ಲಿ ವಿಫಲವಾಗಿದೆ ಎನ್ನಲಾಗಿದೆ. ಕಾರಣ ಏನೆಂದರೆ ಉತ್ತರ ಪ್ರದೇಶದಲ್ಲಿ ಮೋದಿ ಮಾಯೆ ಬಹಳ ಜೋರಾಗಿದೆ ಎಂದು ಹೇಳಲಾಗಿದೆ. ಈಗ ಸದ್ಯಕ್ಕೆ ಮೋದಿಯವರು ಉತ್ತರ ಪ್ರದೇಶದಲ್ಲಿ 50,000 ಮತಗಳ ಅಂತರದಲ್ಲಿ ಮುನ್ನಡೆಯನ್ನು ಸಾಧಿಸಿದ್ದರೆ, ಬಿಜೆಪಿ ಈಗ ಸದ್ಯಕ್ಕೆ 287 ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಸಾಧಿಸಿದೆ. ಕರ್ನಾಟಕದಲ್ಲಿ ಬಿಜೆಪಿ ಸದ್ಯಕ್ಕೆ 24 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಆದರೆ ಇನ್ನೂ ಹಲವು ಹಂತಗಳು ಬಾಕಿ ಇದೆ ಎಂಬುದು ಖಚಿತ.

ಮಂಡ್ಯದಲ್ಲಿ ಸದ್ಯಕ್ಕೆ ನಿಖಿಲ್ ಮತ್ತು ಸುಮಲತ ಅವರಿಬ್ಬರ ನಡುವೆ ತೀವ್ರ ಹಣಾಹಣಿ ಇದೆ.ರಾಜಸ್ಥಾನದಲ್ಲಿ ಬಿಜೆಪಿ 25 ಸ್ಥಾನದಲ್ಲಿ ಮುಂದೆ ಇದ್ದರೆ ಅಲ್ಲಿ ಕಾಂಗ್ರೆಸ್ ಹಾಗೂ ಇತರೆ ಯಾರೂ ಇದುವರೆವಿಗೂ ಕೂಡಾ ಮುನ್ನಡೆಯನ್ನು ಸಾಧಿಸಿಲ್ಲ ಎಂಬುದು ಬಹಳ ಆಸಕ್ತಿಯನ್ನು ಮೂಡಿಸಿದೆ. ಕರ್ನಾಟಕದ ಉತ್ತರ ಕನ್ನಡದಲ್ಲಿ ಕೇವಲ ಒಂದು ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಮುನ್ನಡೆ ಸಾಧಿಸಿದ್ದು, ಚಿಂತಕರು ಇದು ಕಾಂಗ್ರೆಸ್ ಉತ್ತರ ಕನ್ನಡದಲ್ಲಿ ಸರ್ವನಾಶ ಆಗಿದೆ ಎಂದು ಹೇಳುತ್ತಿದ್ದಾರೆ. ಮಾತ್ರವಲ್ಲದೆ ಇದು ಮೈತ್ರಿ ಸರ್ಕಾರದ ವಿಫಲತೆ ಎಂದಿದ್ದಾರೆ.

ಅಸ್ಸಾಂ ಹಾಗೂ ಬಿಹಾರದಲ್ಲಿ ಕೂಡಾ ಬಿಜೆಪಿ ಹಾಗೂ ಅದರ ಎನ್ಡಿಎ ಮುನ್ನಡೆಯನ್ನು ಸಾಧಿಸಿ ಗಮನವನ್ನು ಸೆಳೆದಿದೆ. ಇನ್ನು ಕಾಂಗ್ರೆಸ್ ಕರ್ನಾಟಕದಲ್ಲಿ ಆರಂಭಿಕ ಗಣನೆಯಲ್ಲಿ ಗಣನೀಯವಾಗಿ ಕಡಿಮೆ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿರುವುದಕ್ಕೆ ಅವರ ಶಾಸಕರು ಇದು ಆರಂಭಿಕ ಅಷ್ಟೆ , ಇನ್ನೂ ಮತ ಎಣಿಕೆ ಹಂತಗಳು ಇವೆ ಎಂಬ ನಿರೀಕ್ಷೆ ಇದ್ದರೆ , ಮತ್ತೆ ಕೆಲವು ಕಾಂಗ್ರೆಸ್ ಶಾಸಕರು ಇದು ಮೈತ್ರಿಯ ಎನ್ನುತ್ತಿದ್ದಾರೆ. ಬಿಜೆಪಿ ತೇಜಸ್ವಿ ಸೂರ್ಯ 50,000 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. ಸದ್ಯದ ಎಣಿಕೆಯ ನಂತರ ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ ಕಂಡು ಬರುತ್ತಿದೆ.

ಮಂಡ್ಯದಲ್ಲಿ ಇದೀಗ ಸುಮಲತ ಅವರು ಮುನ್ನಡೆ ಸಾಧಿಸಿದ್ದಾರೆ. ಬಹಳ ಜಿದ್ದಾಜಿದ್ದಿನಿಂದ ಕೂಡಿದ್ದ ಈ ಕ್ಷೇತ್ರದಲ್ಲಿ ಇದುವರೆವಿಗೂ ನಿಖಿಲ್ ಕುಮಾರಸ್ವಾಮಿ ಅವರು ಮುನ್ನಡೆ ಸಾಧಿಸಿದ್ದರು. ಆದರೆ ಈಗ ಅವರಿಗೆ ಹಿನ್ನಡೆ ಆಗಿ ಸುಮಲವ ಅವರು ಮುನ್ನಡೆ ಸಾಧಿಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here