ಮತ ಎಣಿಕೆಯ ಕಾರ್ಯ ಬಹಳ ಚುರುಕಾಗಿ ನಡೆಯುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿ ಹಾಗೂ ಅವರ ಮೈತ್ರಿ ಕೂಟ 312 ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಸಾಧಿಸಿದ್ದಾರೆ. ಆದರೆ ಇನ್ನೂ ಮತ ಎಣಿಕೆಯ ಹಂತಗಳು ಬಾಕಿಯಿದ್ದು ಸದ್ಯಕ್ಕೆ ಸ್ಪಷ್ಟ ನಿಲುವು ತಾಳುವುದು ಸಾಧ್ಯವಿಲ್ಲ. ಉತ್ತರ ಕನ್ನಡದಲ್ಲಿ ಅನಂತ ಕುಮಾರ್ ಹೆಗ್ಗಡೆ ಅವರಯ 71 ಸಾವಿರ ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಇನ್ನು ಬೆಂಗಳೂರು ದಕ್ಷಿಣದಿಂದ ಇದೇ ಮೊದಲ ಬಾರಿಗೆ ಲೋಕಸಭಾ ಚುನಾವಣೆಗೆ ಇಳಿದಿರುವ ಯುವ ನಾಯಕ ತೇಜಸ್ವಿ ಅವರು 40,000 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದು, ಸೂರ್ಯ ಬೆಳಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ‌.

ಬೀದರ್ ನಲ್ಲಿ ಈಶ್ವರ್ ಖಂಡ್ರೆ ಅವರು ಹಿನ್ನಡೆಯನ್ನು ಸಾಧಿಸಿದ್ದಾರೆ‌. ಬಿಜೆಪಿಯ ನಳಿನ್ ಕಟೀಲ್ ಅವರು ದಕ್ಷಿಣ ಕನ್ನಡದಲ್ಲಿ 35,000 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. ಇನ್ನು ತುಮಕೂರಿನಲ್ಲಿ ಈಗ ದೇವೇಗೌಡರಿಗೆ ಹಿನ್ನಡೆ ಯಾಗಿದೆ. ಆದರೆ ಅವರ ಮೊಮ್ಮಗ ಪ್ರಜ್ವಲ್ ಮಾತ್ರ ಹಾಸನದಲ್ಲಿ ಬಹಳ ಜೋರಾಗಿ ಪ್ರಜ್ವಲಿಸುವುದು ಸಾಧ್ಯವಿದೆ ಎಂದು ಹೇಳಲಾಗುತ್ತಿದೆ. ಹಾಸನದಲ್ಲಿ ನಾಲ್ಕನೇ ಸುತ್ತಿನ ಎಣಿಕೆ ಮುಗಿದಿದ್ದು, ಪ್ರಜ್ವಲ್ ಅವರು 40,000 ಮತಗಳ ಮುನ್ನಡೆ ಸಾಧಿಸಿದ್ದಾರೆ. ಇನ್ನು ಮೊದಲ ಸುತ್ತಿನಲ್ಲಿ ಮಂಡ್ಯದಲ್ಲಿ ನಿಖಿಲ್ ಗೆ 43181 ಸುಮಲತಾ 42849  ಮತ ಪಡೆದಿದ್ದಾರೆ.

ಕಲ್ಬುರ್ಗಿ ಯಲ್ಲಿ ಮಲ್ಲಿಕಾರ್ಜುನ ಖರ್ಗೆಯವರು ಹಿನ್ನಡೆ ಸಾಧಿಸಿದ್ದಾರೆ‌‌. ಈ ಬಾರಿ ಘಟಾನುಘಟಿಗಳು ಎನಿಸಿರುವ ದೇವೇಗೌಡರು, ಮಲ್ಲಿಕಾರ್ಜುನ ಖರ್ಗೆ ಹಾಗೂ ವೀರಪ್ಪ ಮೊಯ್ಲಿ ಅವರ ಹಿನ್ನಡೆ ಎಲ್ಲರ ಗಮನವನ್ನು ತಿಳಿಸಿದ್ದು, ಹಿರಿಯ ನಾಯಕರ ವಿರೋಧಿ ಅಲೆ ಎನ್ನುವುದು ಸ್ಪಷ್ಟವಾಗಿದೆ ಎಂದು ರಾಜಕೀಯ ಪಂಡಿತರು ಮಾದ್ಯಮಗಳಲ್ಲಿ ಹೇಳುತ್ತಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here