ಮಂಡ್ಯ ಕ್ಷೇತ್ರದ ಪಕ್ಷೇತರ ಸಂಸದೆ ಸುಮಲತ ಅವರು ಲೋಕಸಭಾ ಅಧಿವೇಶನದಲ್ಲಿ ಪ್ರಸ್ತುತ ದೇಶದ ಪ್ರಮುಖ ಸಮಸ್ಯೆಯೊಂದರ ಬಗ್ಗೆ ಮಾತನಾಡಿ ಸದನದ ಗಮನವನ್ನು ಸೆಳೆದಿದ್ದಾರೆ. ದೇಶದಲ್ಲಿ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ದೈಹಿಕ ಶೋಷಣೆಯ ಕಡೆ ಗಮನ ಸೆಳೆದ ಸುಮಲತ ಅವರು, ಅದರಿಂದ‌‌ ಬಾಧಿತರಾದ ಹೆಣ್ಣು ಮಕ್ಕಳ ಬಗ್ಗೆ ‌ಗಮನ‌‌ ವಹಿಸಲು ಕೆಲವು ಸಲಹೆಗಳನ್ನು ನೀಡಿದ್ದು, ಅಪರಾಧಿಗಳಿಗೆ ಶಿಕ್ಷೆಯಾಗುವುದು ಸರಿ, ಅದರ ಜೊತೆಗೆ ಬಾಧಿಸಲ್ಪಟ್ಟವರು ಅಥವಾ ಶೋಷಿತ ಹೆಣ್ಣು ಮಕ್ಕಳ ಕಡೆ ಕೂಡಾ ಗಮನವನ್ನು ನೀಡಬೇಕು,‌ ಅದಕ್ಕಾಗಿ ಕೆಲವು ಹೊಸ ನಿಯಮಗಳನ್ನು ಜಾರಿಗೊಳಿಸಬೇಕೆಂದು ಸುಮಲತ ಅವರು ಸಲಹೆ ನೀಡಿದ್ದಾರೆ.

ಸುಮಲತ ಅವರು ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯದ ನಡೆಯುವ ದೌರ್ಜನ್ಯದ ಬಗ್ಗೆ ಮಾತನಾಡುತ್ತಾ ನಾನು ಸಂಸದೆಯಾಗಿ ಅಲ್ಲ, ಬದಲಾಗಿ ಒಬ್ಬ ತಾಯಿಯಾಗಿ ಈ ವಿಷಯವನ್ನು ಮಾತನಾಡುತ್ತಿದ್ದೇನೆ ಎಂದು ಹೇಳಿದ್ದಾರೆ. ಮಹಿಳಾ ಶೋಷಣಾ ವಿಷಯಗಳ ದೂರುಗಳನ್ನು ಬೇಗ ಇತ್ಯರ್ಥ ಪಡಿಸುವಂತಾಗಬೇಕು, ಎಂದ ಅವರು ಮರಣ ದಂಡನೆಯು, ತಪ್ಪು ಮಾಡಿದವನಿಗೆ ಹಾಕಿದ ಶಿಕ್ಷೆ , ಆದರೆ ಆ ತಪ್ಪಿಗೆ ಬಲಿಯಾದವರಿಗೆ ಕೂಡಾ ಮಾನವೀಯತೆ ತೋರಬೇಕು. ಅಪರಾಧಿ ಒಂದು ಶಿಕ್ಷೆಗೆ ಗುರಿಯಾದರೆ, ಬಾಧಿತರು ಬಹಳ ಕಾಲ ಅದಕ್ಕೆ ನೋವಿಗೆ ಗುರಿಯಾಗುತ್ತಿದ್ದಾರೆ ಎಂದಿದ್ದಾರೆ.

ಇಂತಹ ಕೇಸುಗಳಲ್ಲಿ ತನಿಖೆ ನಡೆಸುವಾಗ ಹೆಣ್ಣು ಮಕ್ಕಳಿಗೆ ಮನಶಾಸ್ತ್ರಜ್ಞರ ಪರಿವೀಕ್ಷಣೆಯಲ್ಲಿ ತನಿಖೆ ನಡೆಸಬೇಕು. ಆಗ ಅವರಿಂದ ಹೆಣ್ಣು ಮಕ್ಕಳಿಗೆ ಸಹಾಯ ದೊರೆಯುತ್ತದೆ ಎಂದು ಸಲಹೆ ನೀಡಿದ ಸುಮಲತ ಅವರು, ತನಿಖೆ ನಡೆಸುವ ಎಲ್ಲಾ ಸಂದರ್ಭಗಳಲ್ಲಿ ಬಾಧಿತಳು ಹೆಣ್ಣಾದಾಗ ಮಹಿಳಾ ಸಿಬ್ಬಂದಿಯ ಪರಿವೀಕ್ಷಣೆಯಲ್ಲೇ ವಿಚಾರಣೆ ನಡೆಸಬೇಕೆಂದೂ ಸಲಹೆ ನೀಡಿದ್ದಾರೆ. ತನಿಖೆಯ ನಂತರ ಬಾಧಿತರ ಬಗ್ಗೆ ಗಮನ ವಹಿಸಿ ಅವರು ಸಾಮಾನ್ಯ ಜೀವನ ನಡೆಸಲು ನೆರವಾಗಬೇಕೆಂದು ಸಂಸದೆ ಸುಮಲತ ತಮ್ಮ ಅಭಿಪ್ರಾಯವನ್ನು ಸದನದ ‌ಮುಂದೆ ಇಟ್ಟಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here