ಸ್ಪೈನ್, ಇಂಗ್ಲೆಂಡ್ , ಅಮೆರಿಕಾದಂತಹ ದೇಶಗಳು ಕೊರೊನಾ ಸೋಂಕಿನಿಂದ ಬೆಂಬೆತ್ತಿ ಹೋಗಿರುವ ವಿಷಯ ಈಗಾಗಲೇ ಎಲ್ಲರಿಗೂ ತಿಳಿದೇ ಇದೆ. ಆ ದೇಶಗಳು ಸೋಂಕಿನ ನಿಯಂತ್ರಣಕ್ಕೆ ಶತಾಯಗತಾಯ ಪ್ರಯತ್ನವನ್ನು ಮಾಡಲು ಪ್ರಯತ್ನಗಳನ್ನು ಮಾಡುತ್ತಿವೆಯಾದರೂ ಕೂಡಾ ಅದು ಅಸಾಧ್ಯ ಎನ್ನುವಂತೆ ದಿನೇ ದಿನೇ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಇನ್ನು ಲಂಡನ್ ನಲ್ಲಿ ಥೇಮ್ಸ್ ನದಿ ದಂಡೆಯಲ್ಲಿ ಜಗಜ್ಯೋತಿ ಬಸವೇಶ್ವರರ ಪ್ರತಿಮೆಯನ್ನು ನಿರ್ಮಾಣ ಮಾಡಿಸಿದ್ದ ಡಾ.ನೀರಜ್ ಪಾಟೀಲ್ ಅವರಿಗೆ ಕೂಡಾ ಕೊರೊನಾ ಸೋಂಕು ತಗುಲಿದೆ.

ತನಗೆ ಕೊರೊನಾ ಪಾಸಿಟಿವ್ ಆಗಿರುವ ವಿಷಯವನ್ನು ಸ್ವತಃ ಡಾ.ನೀರಜ್ ಪಾಟೀಲ್ ಅವರೇ ಸೋಷಿಯಲ್ ಮೀಡಿಯಾಗಳ ಮೂಲಕ ತಿಳಿಸಿದ್ದರು.“ನಾನು ತೀವ್ರವಾದ ಚಳಿ ಜ್ವರದಿಂದ, ಚೆಸ್ಟ್ ಇನ್ ಫೆಕ್ಷನ್ ನಿಂದ ಬಳಲುತ್ತಿದ್ದೇನೆ. ಕೋವಿಡ್ -19 ಸೋಂಕು ತಗುಲಿರುವುದು ದೃಢವಾಗಿದೆ. ಸದ್ಯ ನಾನು ಎಲ್ಲರಿಂದ ದೂರವುಳಿದು, ಒಂಟಿಯಾಗಿ ಬದುಕುವ ಮೂಲಕ ಬೇರೆಯವರಿಗೆ ಸೋಂಕು ಹರಡದಂತೆ ಎಚ್ಚರಿಕೆ ವಹಿಸಿದ್ದೇನೆ.ನನ್ನಲ್ಲಿ ಆಯಂಟಿಬಾಡೀಸ್ ಇರುವುದರಿದಾಗಿ ಗುಣಮುಖನಾಗಿ ಮತ್ತೆ ಕೆಲಸಕ್ಕೆ ಹೋಗುತ್ತೇನೆ ಎನ್ನುವ ವಿಶ್ವಾಸವಿದೆ, ಅಲ್ಲದೇ ಮುನ್ನೆಚ್ಚರಿಕೆ ತೆಗೆದುಕೊಳ್ಳುವಲ್ಲಿ ನಾನು ವಿಫಲನಾದೆ ಎನಿಸುತ್ತಿದೆ” ಎಂದು ಡಾ. ನೀರಜ್ ಪಾಟೀಲ್ ಅವರು ಹೇಳಿಕೊಂಡಿದ್ದಾರೆ.


ನೀರಜಾ ಪಾಟೀಲ್ ಅವರಿಗೆ ಸೋಂಕು ತಗುಲಿದ ವಿಚಾರವನ್ನು ತಿಳಿದ ಮಾಜಿ ಪ್ರಧಾನಿ ದೇವೇಗೌಡರು ತಮ್ಮ ಫೇಸ್ ಬುಕ್ ಖಾತೆಯ ಮೂಲಕ ಡಾ.ನೀರಜ್ ಪಾಟೀಲ್ ಅವರು ಬಹಳ ಬೇಗ ಗುಣಮುಖರಾಗಲಿ ಎಂದು ಪೋಸ್ಟ್ ಒಂದನ್ನು ಹಾಕಿ ಅವರಿಗೆ ಶುಭವನ್ನು ಹಾರೈಸಿದ್ದಾರೆ‌. ಡಾ‌.ನೀರಜ್ ಪಾಟೀಲ್ ಅವರು ಲ್ಯಾಂಬೆತ್ ನಗರದ ಮಾಜಿ ಮೇಯರ್ ಆಗಿದ್ದವರು.

ದೇವೇಗೌಡರು ತಮ್ಮ ಪೋಸ್ಟ್ ನಲ್ಲಿ, “ಇಂಗ್ಲೆಂಡ್ ದೇಶದ ಲಂಡನ್ ನ ಥೇಮ್ಸ್ ನದಿಯ ದಡದಲ್ಲಿ ಜಗಜ್ಯೋತಿ ಬಸವಣ್ಣನವರ ಪ್ರತಿಮೆ ನಿರ್ಮಿಸಿದ್ದ ಹೆಮ್ಮೆಯ ಕನ್ನಡಿಗರು, ಆತ್ಮೀಯರು, ಲ್ಯಾಂಬೆತ್ ನಗರದ ಮಾಜಿ ಮಹಾಪೌರರಾದ ಡಾ. ನೀರಜ್ ಪಾಟೀಲ್ ರವರಿಗೆ ಕೊರೋನ ಸೋಂಕು ತಗುಲಿರುವುದು ದುರದೃಷ್ಟಕರ. ಸ್ವತಃ ವೈದ್ಯರೂ ಆಗಿರುವ ಅವರು ಈ ಸಂಕಷ್ಟದಿಂದ ಶೀಘ್ರ ಪಾರಾಗಲೆಂದು ಸಮಸ್ತ ಭಾರತೀಯರೂ ಪ್ರಾರ್ಥಿಸೋಣ.” ಎಂದು ಬರೆದು ಕೊಂಡಿದ್ದಾರೆ.

 

 

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here