ಯಾರು ಆ ಮಹಾಶಿವನನ್ನು ಭಕ್ತಿ, ಶ್ರದ್ಧೆಗಳಿಂದ ಆರಾಧನೆ ಮಾಡಿ ಆತನ ಕೃಪಾಕಟಾಕ್ಷವನ್ನು ಪಡೆಯುವರೋ ಅಂತಹವರಿಗೆ ಮುಕ್ತಿ ಹಾಗೂ ಮೋಕ್ಷದ ಬಗ್ಗೆ ಯಾವುದೇ ಚಿಂತೆಗಳ ಅಗತ್ಯವಿಲ್ಲ. ಏಕೆಂದರೆ ಶಿವನ ಭಕ್ತರಿಗೆ ಮುಕ್ತಿ ಮಾರ್ಗವು ಕಠಿಣವಾಗಲಾರದು. ಕೇವಲ ಮಹಾಶಿವನ ನಾಮ ಮಾತ್ರವನ್ನು ಜಪಿಸುವ ಮೂಲಕವೇ ನಾವು ಶಿವನ ಕೃಪೆಗೆ ಪಾತ್ರರಾಗಬಹುದು. ಅದಕ್ಕೆ ಶಿವನ ನಾಮ ಮಂತ್ರವನ್ನು ಜಪಿಸಿ ಆರಾಧಿಸುವುದು ಕೂಡಾ ರೂಢಿಯಲ್ಲಿದೆ. ಶಿವನು ಒಲಿದರು ಬಾಳು ಬಂಗಾರವಾಗುವುದು. ಸೋಮವಾರ ಆ ಮಹಾಶಿವನಿಗೆ ಪ್ರಿಯವಾದ ದಿನ. ಈ ದಿನ ಸರಳ ಪೂಜೆಯನ್ನು ಇಚ್ಛಿಸುವ ಆ ಮಹಾಶಿವನನ್ನು ಆತನಿಗೆ ಇಷ್ಟವಾದ ವಸ್ತುಗಳ ಮೂಲಕ ಪೂಜಿಸಿ ಆತನ ಕೃಪೆ ಪಡೆಯಬಹುದು.

ಮಹಾಶಿವನಿಗೆ ಸಕ್ಕರೆಯನ್ನು ಅರ್ಪಿಸುವ ಮೂಲಕ ನಾವು ಆತನನ್ನು ಸಂತುಷ್ಟಗೊಳಿಸಬಹುದು. ಸಕ್ಕರೆಯನ್ನು ಶಿವನಿಗೆ ಅರ್ಪಿಸುವುದರಿಂದ ಬಡತನ ಕಳೆದು, ಶಾಂತಿ ನೆಮ್ಮದಿಗಳು ನೆಲೆಸುತ್ತವೆ. ಅದೇ ರೀತಿ ಶಿವನ ತಲೆಯ ಮೇಲೆ ಅಥವಾ ಶಿವಲಿಂಗದ ಮೇಲೆ ಕೇಸರಿಯ ದಳಗಳನ್ನು ಇಟ್ಟು ಆತನನ್ನು ಆರಾಧಿಸಿದರೆ ಜೀವನದಲ್ಲಿ ಅದೃಷ್ಟ ಒಲಿದು, ಸಮೃದ್ಧಿ ನೆಲೆಸುವುದು ಎನ್ನಲಾಗಿದೆ. ಮಹಾಶಿವನ ನೈವೇದ್ಯಕ್ಕೆ ಅಥವಾ ಆತನ ಅಭಿಷೇಕಕ್ಕೆ ಮೊಸರನ್ನು ಬಳಸುವ ಮೂಲಕವೂ ಆತನ ಕೃಪೆಗೆ ಪಾತ್ರರಾಗಬಹುದು. ಮೊಸರನ್ನು ಅರ್ಪಿಸಿದರೆ ಕೈಗೊಂಡ ಕಾರ್ಯಗಳಲ್ಲಿ ಶುಭ ಫಲ ಪ್ರಾಪ್ತವಾಗುವುದು ಎಂದು ಪ್ರತೀತಿ.

ಶಿವನಿಗೆ ಹಸುವಿನ ಹಾಲಿನ ಅಭಿಷೇಕ ಮಾಡುವುದರಿಂದ ಆತ ಶಾಂತನಾಗುವನು. ಇದರಿಂದ ಭಕ್ತನ ಜೀವನದಲ್ಲಿ ಉತ್ತಮ ಆರೋಗ್ಯ ಭಾಗ್ಯ ದೊರಕುವುದು ಮಾತ್ರವಲ್ಲದೇ ಆರೋಗ್ಯ ಸಮಸ್ಯೆಗಳು ದೂರಾಗುವುದು ಎಂದು ನಂಬಿಕೆ. ಆ ಭೋಳಾ ಶಂಕರನಿಗೆ ಜೇನು ತುಪ್ಪವನ್ನು ನೈವೇದ್ಯ ಅಥವಾ ಅಭಿಷೇಕ ಮಾಡಲು ಬಳಸಿದರೆ ವೈಯಕ್ತಿಕ ಜೀವನದಲ್ಲಿ ಪ್ರಗತಿ ಕಾಣಲಾಗುತ್ತದೆ. ಭಕ್ತವತ್ಸಲ ಶಂಕರನಿಗೆ ಹಸುವಿನ ತುಪ್ಪವನ್ನು ಅರ್ಪಿಸುವ ಮೂಲಕ ಇಷ್ಟಾರ್ಥ ಸಾಧನೆಯಾಗುವುದು. ಇದೆಲ್ಲವೂ ಅಲ್ಲದೇ ಆ ಮಹಾ ಶಿವನಿಗೆ ಬಿಲ್ವಪತ್ರೆ ಇಂದ ಆರಾಧನೆ ಮಾಡಿದರೂ ಅದೇ ಸಾಕು..

ಭಕ್ತರ ಕೂಗಿಗೆ ಓಡಿ ಬರುವ ಆ ಮಹಾಶಂಕರನನ್ನು ಸೋಮವಾರದ ದಿನ ಆತನಿಗೆ ಪ್ರಿಯವಾದ ಯಾವುದಾದರೊಂದು ವಸ್ತುವಿನಿಂದ ಆರಾಧನೆ ಮಾಡಿ, ಆತನ ಕೃಪಾ ಕಟಾಕ್ಷಕ್ಕೆ ಪಾತ್ರರಾಗೋಣ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here