ಆಲಯ ನಿರ್ಮಾಣ ಅಂದರೆ ಅದಕ್ಕೆ ಬಹಳ ಆದ್ಯತೆ ನಮ್ಮ ದೇಶದಲ್ಲಿ. ಆಲಯ ನಿರ್ಮಾಣ ಕಾರ್ಯ ಎಂದರೆ ಬಹಳ ಭಕ್ತಿ ಶ್ರದ್ಧೆಯಿಂದ ಎಲ್ಲರೂ ಕೈ ಜೋಡಿಸಲು ಮುಂದಾಗುತ್ತಾರೆ. ಕೆಲವರಿಗೆ ಭಕ್ತಿಯಾದರೆ , ಮತ್ತೆ ಕೆಲವರಿಗೆ ದೇವರ ಕೋಪಕ್ಕೆ ಗುರಿಯಾಗಬಾರದೆಂಬ ಭಯವೂ ಇದಕ್ಕೆ ಕಾರಣ ಎಂಬುದನ್ನು ನಾವೆಲ್ಲಾ ಒಪ್ಪಲೇಬೇಕು. ಹೀಗೆ ಪಂಜಾಬಿನ ಲುಧಿಯಾನದಲ್ಲಿ ಭಕ್ತರು ಶಿವನ ಆಲಯದಲ್ಲಿ ಹೊಸದಾಗಿ ಶಿವಲಿಂಗವನ್ನು ಪ್ರತಿಷ್ಠಾಪನೆ ಮಾಡುವ ಕಾಯಕಕ್ಕೆ ಅಲ್ಲಿನ ಭಕ್ತರು ಹಾಗೂ ಸಾರ್ವಜನಿಕರಯ ಕೈ ಹಾಕಿದ್ದಾರೆ. ಆ ಸಂದರ್ಭದಲ್ಲಿ ಅಲ್ಲೊಂದು ಅನಿರೀಕ್ಷಿತ ನಡೆದಿದ್ದು ಈಗ ಆ ಸುದ್ದಿ ಎಲ್ಲೆಡೆ ವೈರಲ್ ಆಗಿದೆ.

ಇಂದು ಲುಧಿಯಾನ ದಲ್ಲಿ ಆಲಯದಲ್ಲಿ ಶಿವಲಿಂಗ ಪ್ರತಿಷ್ಠಾಪನೆಗಾಗಿ ನೆಲವನ್ನು ಅಗೆಯುವಾಗ ಅಲ್ಲೊಂದು ಅದ್ಭುತ ಗೋಚರಿಸಿದೆ. ನೆಲದೊಳಗೆ ಎರಡು ಹಾವುಗಳು ಹಾಗೂ ಐದು ವಿವಿಧ ಗಾತ್ರದ ಶಿವಲಿಂಗ ಗಳು ಹಾಗೂ ಹಳೆ ಕಾಲದ ಕೆಲವು ನಾಣ್ಯಗಳು ಪತ್ತೆಯಾಗಿದೆ. ಇದನ್ನು ನೋಡಿದ ಜನರೆಲ್ಲಾ ಆಶ್ಚರ್ಯ ಪಟ್ಟಿದ್ದಾರೆ. ಇದೊಂದು ಪವಾಡವೇ ಸರಿ ಎಂದು ಭಕ್ತಿಯಿಂದ ಕೈ ಜೋಡಿಸಿದ್ದಾರೆ. ಅಲ್ಲದೆ ಈ ವಿಷಯ ಹರಡುತ್ತಿದ್ದಂತೆ ಜನ ಬೇರೆ ಬೇರೆ ಕಡೆಯಿಂದ ಇಲ್ಲಿಗೆ ಬರಲು ಆರಂಭಿಸಿದ್ದಾರೆ.

ದೇವಾಲಯದ ಜವಾಬ್ದಾರಿ ಹೊಂದಿರುವ ಹರ್ವಿಂದರ್ ಸಿಂಗ್ ಅವರು ಹಳೆಯ ಶಿವಲಿಂಗಕ್ಕೆ ಏಟು ತಗುಲಿ ಭಿನ್ನವಾಗಿದ್ದರಿಂದ, ಅದರ ಜಾಗದಲ್ಲಿ ಹೊಸ ಲಿಂಗ ಸ್ಥಾಪನೆಗೆ ಬೆಳಗಿನ ಜಾವ ಮೂರರಿಂದಲೇ ಕೆಲಸ ಆರಂಭಿಸಿದೆವು. ಆ ಸಂದರ್ಭದಲ್ಲಿ ಲಿಂಗವಿದ್ದ ಜಾಗದಲ್ಲಿ ಕೆಳಗೆ ನೆಲ ಅಗೆದಾಗ ಅಲ್ಲಿ ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಎರಡು ಹಾವುಗಳು, ಐದು ಲಿಂಗಗಳು, ರುದ್ರಾಕ್ಷಿ ದೊರೆತಿದೆ. ಇನ್ನೂ ಸ್ವಲ್ಪ ಅಗೆದಾಗ ಈಸ್ಟ್ ಇಂಡಿಯಾ ಕಂಪನಿ ಕಾಲದ ನಾಣ್ಯಗಳು ದೊರೆತಿವೆ ಎಂದು ಹೇಳಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here