ನಿಜ ಜೀವನದಲ್ಲಿ ಕೆಲವೊಮ್ಮೆ ನಡೆಯುವ ಘಟನೆ ಹಾಗೂ ಸನ್ನಿವೇಶಗಳು ಯಾವುದೇ ಸಿನಿಮಾಗಿಂತ ಕಡಿಮೆಯೇನಿಲ್ಲ ಎನ್ನುವ ಹಾಗೆ ಇರುತ್ತದೆ. ಬಹುಶಃ ಸಿನಿಮಾ ಗಳೇ ಜನರಿಗೆ ಪ್ರೇರಣೆಯೋ ಅಥವಾ ಜನರ ಜೀವನವೇ ಸಿನಿಮಾಗಳಿಗೆ ಪ್ರೇರಣೆಯೋ ಹೇಳುವುದು ಸ್ವಲ್ಪ ಕಷ್ಟ. ಅಂತಹುದೇ ಒಂದು ಘಟನೆಯಲ್ಲಿ, ಭೀತಿಯಿಂದ ತನ್ನ ಎದುರಿಗೆ ಓಡಿ ಬಂದ ಯುವತಿಗೆ, ಆಕೆ ಎದುರು ಬಂದ ಕೆಲವೇ ಕ್ಷಣಗಳಲ್ಲಿ ಆಕೆಯ ಕೊರಳಿಗೆ ತಾಳಿಯನ್ನು ಕಟ್ಟಿದ್ದಾನೆ ಒಬ್ಬ ಯುವಕ. ಇಂತಹ ಒಂದು ಸಿನಿಮಾ ಮಾದರಿಯ ಸನ್ನಿವೇಶ ನಡೆದಿರುವುದು ಹಿರಿಯೂರು ತಾಲೂಕು ಸಿಗೇಹಟ್ಟಿ ಗ್ರಾಮದ ಯುವಕ ಹಾಗೂ ಯುವತಿಯ ನಡುವೆ.

ಈ ಗ್ರಾಮದ ಅರುಣ್ ಮತ್ತು ಅಮೃತಾ ಅವರ ಪ್ರೇಮ ವಿವಾಹವಾಗಿ ಬದಲಾದ ಸನ್ನಿವೇಶ ಇದು. ಇವರಿಬ್ಬರ ಈ ಅನಿರೀಕ್ಷಿತ ವಿವಾಹದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಮಾಡಿದೆ. ಅರುಣ್ ತಾನು ಪ್ರೇಮಿಸಿದ ಯುವತಿಗೆ ಸಿನಿಮಾ‌ ಸ್ಟೈಲ್ ನಲ್ಲಿ ತಾಳಿಯನ್ನು ಕಟ್ಟಿದ್ದಾನೆ‌. ಅರುಣ್​ ಕುರಿ ಕಾಯುವ ಕೆಲಸವನ್ನು ಮಾಡುತ್ತಿದ್ದು, ಆತ ಪ್ರೇಮಿಸಿ ವಿವಾಹವಾಗಿರುವ ಯುವತಿ ಅಮೃತಾ ಸ್ನಾತಕೋತ್ತರ ಪದವೀಧರೆಯಾಗಿದ್ದಾರೆ. ಇವರಿಬ್ಬರ ನಡುವೆ ಪ್ರೀತಿ ಹಲವು ವರ್ಷಗಳಿಂದ ಇತ್ತು ಎನ್ನಲಾಗಿದೆ. ಅಮೃತಾ ತುಮಕೂರು ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಇವರ ಪ್ರೇಮದ ವಿಷಯ ಮನೆಯಲ್ಲಿ ತಿಳಿದ ಮೇಲೆ ಎರಡೂ ಕುಟುಂಬಗಳ ನಡುವೆ ಇದು ವೈಮನಸ್ಸಿಗೆ ಕಾರಣವಾಗಿತ್ತು.ಎರಡೂ ಮನೆಯವರು ವಿವಾಹಕ್ಕೆ ಒಪ್ಪಿಗೆ ನೀಡಿರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮಾರಿ ಹಬ್ಬಕ್ಕಾಗಿ ಊರಿಗೆ ಬಂದಿದ್ದ ಅಮೃತಾ ಮನೆಯವರಿಗೆ ತಿಳಿಯದಂತೆ ಊರ ಹೊರಗಿರುವ ಕುರಿಹಟ್ಟಿಗೆ ಬಂದಿದ್ದಾರೆ. ಅಲ್ಲಿ ಕಾಯುತ್ತಿದ್ದ ಅರುಣ್ ಆಕೆ ಬಂದ ಕೂಡಲೇ ತಾಳಿ ಕಟ್ಟುವ ಮೂಲಕ ಪ್ರೇಮಿಗಳು ಸತಿ ಪತಿಯಾಗಿದ್ದಾರೆ

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here