ಇಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ಉತ್ತಮ‌‌ ಅಂಕಗಳಿಸಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳು ತಮ್ಮ ಶ್ರಮಕ್ಕೆ ಸಿಕ್ಕ ಪ್ರತಿಫಲದಿಂದ ಸಂಭ್ರಮಿಸುತ್ತಿದ್ದಾರೆ. ಕೇವಲ ವಿದ್ಯಾರ್ಥಿಗಳು ಮಾತ್ರವಲ್ಲದೆ ಅವರ ಪೋಷಕರಿಗೂ ಸಹಾ ಇಂದು ಸಂತಸದ ದಿನ.‌ ತಮ್ಮ‌ ಮಕ್ಕಳು ಪಡೆದಿರುವ ಒಳ್ಳೆಯ ಫಲಿತಾಂಶಕ್ಕೆ ಪೋಷಕರು ಸಹಾ ಸಂಭ್ರಮಿಸುತ್ತಿದ್ದಾರೆ. ಇದಕ್ಕೆ ಸ್ಯಾಂಡಲ್ ವುಡ್ ತಾರೆಯರೂ ಕೂಡಾ ಹೊರತಾಗಿಲ್ಲ. ಈ ಹಿನ್ನೆಲೆಯಲ್ಲಿ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟರಲ್ಲಿ ಒಬ್ಬರಾದ ಪ್ರೇಮ್ ಅವರು ತಮ್ಮ ಮಗಳ ಫಲಿತಾಂಶದ ಕುರಿತು ಟ್ವಿಟರ್ ನಲ್ಲಿ ಟ್ವೀಟ್ ಮಾಡಿ ಸಂಭ್ರಮಿಸಿದ್ದಾರೆ.

ನಟ ಪ್ರೇಮ್ ಅವರ ಮಗಳು ಸಹಾ ಈ ಬಾರಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿದ್ದು, ಈಕೆ ಕೂಡಾ ಕಳೆದ ಮಾರ್ಚ್ ನಲ್ಲಿ ಪರೀಕ್ಷೆ ಎದುರಿಸಿದ್ದರು.‌ ಇಂದು ದ್ವಿತೀಯ ಪಿಯು ಫಲಿತಾಂಶ ಪ್ರಕಟವಾದಾಗ ಪ್ರೇಮ್ ಅವರ ಮಗಳು 91% ನ ಅತ್ಯುತ್ತಮ ಫಲಿತಾಂಶದಿಂದ ತೇರ್ಗಡೆ ಆಗಿರುವುದನ್ನು ನೋಡಿ ನಟ ಪ್ರೇಮ್ ಒಬ್ಬ ತಂದೆಯಾಗಿ ಬಹಳ ಸಂತಸ ಪಟ್ಟಿದ್ದಾರೆ. ಜೊತೆಗೆ ಅವರ ಮಗ ಈಗ ಎಂಟನೇ ತರಗತಿಯಲ್ಲಿ ಓದುತ್ತಿದ್ದು ಆತನು ಕೂಡಾ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಮೂರನೇ ಸ್ಥಾನ ಪಡೆದಿರುವ ವಿಷಯವನ್ನು ಪ್ರೇಮ್ ಅವರು ಟ್ವೀಟ್ ಮಾಡಿ ಎಲ್ಲರೊಂದಿಗೆ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

ಮಗಳು ಅಮೃತಾ 91% ಹಾಗೂ ಮಗ ಏಕಾಂತ್ ಮೂರನೇ ರ್ಯಾಂಕ್ ಬಂದಿರುವ ಸಂತಸದಲ್ಲಿ ಅವರು ಕುಟುಂಬ ಸಮೇತ ಸೆಲ್ಫಿ ತೆಗೆದುಕೊಂಡು ಸಂಭ್ರಮ ಪಟ್ಟಿದ್ದಾರೆ. ಪ್ರೇಮ್ ಅವರ ಮಗಳು ಚೆನ್ನಾಗಿ ಅಧ್ಯಯನ ಮಾಡಿ ತಂದೆಗೆ ಒಳ್ಳೆಯ ಹೆಸರನ್ನು ತಂದುಕೊಟ್ಟಿದ್ದಾರೆ. ಮಕ್ಕಳು ಯಶಸ್ಸಿನಲ್ಲಿ ತಂದೆ ತಾಯಿಗಳು ಸದಾ ಖುಷಿಯನ್ನು ಅನುಭವಿಸುವುದು ಸಾಮಾನ್ಯ. ಪ್ರೇಮ್ ಅವರ ಈ ಸಂತಸವನ್ನು ಅವರು ಅಭಿಮಾನಿಗಳು ಕೂಡಾ ರೀಟ್ವೀಟ್ ಮಾಡುವ ಮೂಲಕ ಶುಭಾಶಯಗಳನ್ನು ಕೋರಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here