ಸ್ಯಾಂಡಲ್ ವುಡ್ ನಟ ನೆನಪಿರಲಿ ಪ್ರೇಮ್ ಅವರು ತಮ್ಮ ಅಭಿಮಾನಿಗಾಗಿ ಮಾನವೀಯತೆಯನ್ನು ಮೆರೆದಿದ್ದಾರೆ. ಅಭಿಮಾನಿಗೆ ಆರೋಗ್ಯ ಸಮಸ್ಯೆಯಿರುವ ವಿಚಾರವನ್ನು ತಿಳಿದು ನಟ ಪ್ರೇಮ್ ಅವರು ಕೂಡಲೇ ಆತನ ನೆರವಿಗೆ ಧಾವಿಸಿ ತಮ್ಮಿಂದ ಆದ ಸಹಾಯವನ್ನು ಮಾಡಿರುವ ಘಟನೆ ನಡೆದಿದೆ. ನಟ ಪ್ರೇಮ್ ಅವರ ಈ ಅಭಿಮಾನಿಗೆ ಅವರು ಚಿಕಿತ್ಸೆಯನ್ನು ಕೊಡಿಸಿರುವುದು ಮಾತ್ರವೇ ಅಲ್ಲದೇ ಆಸ್ಪತ್ರೆಯಲ್ಲಿ ಕೂಡಾ ಜೊತೆಯಲ್ಲಿದ್ದು ಅವರು ತಮ್ಮ ಅಭಿಮಾನಿಗೆ ಧೈರ್ಯ ತುಂಬುವ ಜೊತೆಗೆ ಮಾನವೀಯತೆ ಕೂಡಾ ಮೆರೆದಿರುವುದು ಈಗ ಬಹಳಷ್ಟು ಮೆಚ್ಚುಗೆಗೆ ಪಾತ್ರವಾಗಿದೆ. ಹೊಸಕೆರೆ ಹಳ್ಳಿಯ ಸತೀಶ್ ಎನ್ನುವವರೇ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದ ಅಭಿಮಾನಿ ಎನ್ನಲಾಗಿದೆ.

ಸತೀಶ್ ಅವರು ಅವರು ಅಲ್ಸರ್ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಆದರೆ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಲು ಆರ್ಥಿಕ ಪರಿಸ್ಥಿತಿ ಅಷ್ಟೊಂದು ಚೆನ್ನಾಗಿರದ ಕಾರಣ ಅವರು ಪರದಾಡುವಂತೆ ಆಗಿತ್ತು. ಅಲ್ಲದೇ ಹಣವಿಲ್ಲದ ಕಾರಣ ಅವರು ಚಿಕಿತ್ಸೆ ಪಡೆಯದೆ ತಮ್ಮ ಮನೆಯಲ್ಲೇ ಇದ್ದರು ಎನ್ನಲಾಗಿದೆ. ಅನಂತರ ತಮ್ಮ ಕಷ್ಟಕ್ಕೆ ಸ್ಪಂದಿಸುವಂತೆ ಸತೀಶ್ ಅವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಾಕಿ ಸಹಾಯವನ್ನು ಯಾಚಿಸಿದ್ದಾರೆ. ಈ ಫೋಸ್ಟ್ ಗಮನಿಸಿರುವ ಪ್ರೇಮ್ ಅವರು ಕೂಡಲೇ ಅಭಿಮಾನಿಯನ್ನು ನೋಡಲು ಅವರ ಮನೆಗೆ ಭೇಟಿ ನೀಡಿದ್ದಾರೆ.‌

ಪ್ರೇಮ್ ಅಭಿಮಾನಿಯ ನಂತರ ಸತೀಶ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಿದ್ದಾರೆ. ಅದು ಮಾತ್ರವೇ ಅಲ್ಲದೇ ಮಧ್ಯ ರಾತ್ರಿಯವರೆಗೆ ಅವರು ಆಸ್ಪತ್ರೆಯಲ್ಲೇ ಇದ್ದು ತಮ್ಮ ಅಭಿಮಾನಿಯ ಬಗ್ಗೆ ಕಾಳಜಿಯನ್ನು ತೋರಿದ್ದಾರೆ. ಪ್ರಸ್ತುತ ಚಿಕಿತ್ಸೆಯ ವೆಚ್ಚವನ್ನು ಪ್ರೇಮ್ ಅವರು, ಅವರ ಅಭಿಮಾನಿಗಳು, ಗೆಳೆಯರು ಹಾಗೂ ಖಾಸಗಿ ಮಿತ್ರರು ಭರಿಸಿದ್ದ, ಮುಂದಿನ ಚಿಕಿತ್ಸೆಯ ವೆಚ್ಚವನ್ನು ಕೂಡಾ ಎಲ್ಲರೂ ಕೂಡಾ ಭರಿಸುವುದಾಗಿ ಹೇಳಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here