Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

LPG ಸಿಲಿಂಡರ್​ ಬೆಲೆಯಲ್ಲಿ ಭಾರೀ ಇಳಿಕೆ : ಮಹಿಳಾ ದಿನದಂದೆ ಮಾಹಿತಿ ಕೊಟ್ಟ ಪ್ರಧಾನಿ

ನವದೆಹಲಿ : ಮಹಿಳಾ ದಿನಾಚರಣೆ ಹಾಗೂ ಶಿವರಾತ್ರಿ ದಿನದಂದೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜನರಿಗೆ ಸಂತಸದ ಸುದ್ದಿಯೊಂದನ್ನು ಕೊಟ್ಟಿದೆ.

ಎಲ್​ಪಿಜಿ ಸಿಲಿಂಡರ್​ ಬೆಲೆಯಲ್ಲಿ ಬರೊಬ್ಬರಿ 100 ರೂಪಾಯಿಗಳನ್ನು ಕಡಿಮೆ ಮಾಡಲಾಗಿದೆ ಎಂದು ಸ್ವತಹ ಪ್ರಧಾನಿ ಮೋದಿಯವರು ಟ್ವಿಟ್ ಮಾಡಿದ್ದಾರೆ. ಎಲ್​​ಪಿಜಿ ಹೆಚ್ಚು ಹೆಚ್ಚಾಗಿ ಕೈಗೆಟುಕುವಂತೆ ಮಾಡುವ ಮೂಲಕ ಮಹಿಳೆಯರ ಯೋಗಕ್ಷೇಮ, ಕುಟುಂಬದ ಆರೋಗ್ಯಕರ ವಾತಾವರಣ ಕಾಪಾಡಲು ನಾವು ಮುಂದಾಗಿದ್ದೇವೆ. ಮಹಿಳೆಯರನ್ನು ಸಬಲೀಕರಣಗೊಳಿಸುವ ಮತ್ತು ಅವರಿಗೆ ಸರಳವಾಗಿ ಬದುಕುವ ಖಾತ್ರಿಪಡಿಸುವುದು ನಮ್ಮ ಬದ್ಧತೆಗೆ ಅನುಗುಣವಾಗಿದೆ ಎಂದು ಪ್ರಧಾನಿ ಮೋದಿ ಟ್ವಿಟ್ ನಲ್ಲಿ ತಿಳಿಸಿದ್ದಾರೆ.