ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ಸನ್ನಿಧಿಯಲ್ಲಿ ಕನ್ನಡ ಚಿತ್ರರಂಗದ ಬಹುನಿರೀಕ್ಷೆಯ ಸಿನಿಮಾ ‘ಮದಗಜ’ ಚಿತ್ರದ ಸ್ಕ್ರಿಪ್ಟ್ ಪೂಜೆ ಅದ್ದೂರಿಯಾಗಿ ನೆರವೇರಿದೆ. ರೋರಿಂಗ್ ಸ್ಟಾರ್ ಶ್ರೀ ಮುರಳಿ ಅಭಿನಯದ ಬಹುನಿರೀಕ್ಷೆಯ ಮದಗಜ ಚಿತ್ರಕ್ಕೆ ಎಸ್.ಮಹೇಶ್ ಗೌಡ ಆಕ್ಸನ್ ಕಟ್ ಹೇಳುತ್ತಿದ್ದಾರೆ. ಹೆಬ್ಬುಲಿ‌ ನಿರ್ಮಾಪಕರಾದ ಉಮಾಪತಿ ಶ್ರೀನಿವಾಸ್ ಅವರು ಮದಗಜ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ‌. ಮದಗಜ ಚಿತ್ರಕ್ಕೆ ಅರ್ಜುನ್ ಜನ್ಯಾ ಅವರು ಸಂಗೀತ ನೀಡುತ್ತಿದ್ದು , ಈ ಚಿತ್ರದಲ್ಲಿ ಐದು ಹಾಡುಗಳಿವೆ. ಈ ಐದು ಹಾಡುಗಳಿಗೂ ಖ್ಯಾತ ನಿರ್ದೇಶಕ ಚೇತನ್ ಕುಮಾರ್ ಅವರೇ ಸಾಹಿತ್ಯ ಬರೆಯುತ್ತಿದ್ದಾರೆ. ಚಾಮುಂಡೇಶ್ವರಿ ದೇವಿಯ ಸನ್ನಿಧಿಯಲ್ಲಿ ಚೇತನ್ ಕುಮಾರ್ ಅವರು ಮದಗಜ ಚಿತ್ರದ ಮೊದಲ ಹಾಡಿಗೆ ಸಾಹಿತ್ಯ ಬರೆದಿದ್ದಾರೆ.

ಮದಗಜ ಚಿತ್ರವು ಚಿತ್ರೀಕರಣ ಆರಂಭಿಸುವ ಮೊದಲೇ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಕನ್ನಡ ಚಿತ್ರರಂಗದ ಸಕ್ಸಸ್ ಹ್ಯಾಂಡ್ ಗಳು ಒಂದೆಡೆ ಸೇರಿರುವುದು ಮದಗಜ ಮೇಲಿನ ನಿರೀಕ್ಷೆ ಹೆಚ್ಚಾಗಲು ಪ್ರಮುಖ ಕಾರಣ ಎನ್ನಬಹುದು. ತಮ್ಮ ಚೊಚ್ಚಲ ನಿರ್ದೇಶನದ ನೀನಾಸಂ ಸತೀಶ್ ಅಭಿನಯಯ ಅಯೋಗ್ಯ ಮೂಲಕ ಬ್ಲಾಕ್‌ಬಸ್ಟರ್ ಸಿನಿಮಾ ನೀಡಿದ್ದ ನಿರ್ದೇಶಕ ಮಹೇಶ್ ಗೌಡ ಅವರು ಎರಡನೇ ಚಿತ್ರವನ್ನು ರೋರಿಂಗ್ ಸ್ಟಾರ್ ಶ್ರೀಮುರಳಿ ಅವರಿಗೆ ನಿರ್ದೇಶನ ಮಾಡುತ್ತಿರುವುದು ಮದಗಜ ಚಿತ್ರದ ಪ್ರಮುಖ ಹೈಲೈಟ್‌. ಮದಗಜ ಹೆಸರಿನ ಮೂಲಕವೇ ಈ ಬಾರಿ ದೊಡ್ಡ ಮಟ್ಟದ ಜವಬ್ದಾರಿ ಹೊತ್ತಿದ್ದಾರೆ ನಿರ್ದೇಶಕ ಮಹೇಶ್ ಗೌಡ.

ಇನ್ನು ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಇಡೀ ಮದಗಜ ಚಿತ್ರತಂಡ ಪೂಜೆಯಲ್ಲಿ ಭಾಗವಹಿಸಿತ್ತು.ಶ್ರೀಮುರಳಿ , ಮಹೇಶ್ ಗೌಡ , ನಿರ್ಮಾಪಕರಾದ ಉಮಾಪತಿ ಶ್ರೀನಿವಾಸ್ , ಭರಾಟೆ  ಚೇತನ್ ಕುಮಾರ್ , ಭರಾಟೆ ನಿರ್ಮಾಪಕರಾದ ಸುಪ್ರೀತ್  ಸೇರಿದಂತೆ ಹಲವರು ಮದಗಜ ಸ್ಕ್ರಿಪ್ಟ್ ಪೂಜೆ ಮತ್ತು ಹಾಡುಗಳ ಸಾಹಿತ್ಯ ನೆರವೇರಿಸಲಾಯಿತು.ಸದ್ಯ ರೋರಿಂಗ್ ಸ್ಟಾರ್ ಶ್ರಿಮುರಳಿ ಅವರು ಚೇತನ್ ಕುಮಾರ್ ಅವರ ‘ಭರಾಟೆ’ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಭರಾಟೆ ಸಿನಿಮಾ ಸಾಕಷ್ಟು ಪ್ರಮಾಣದಲ್ಲಿ ನಿರೀಕ್ಷೆ ಹುಟ್ಟಿಸಿದ್ದು ಈ ಚಿತ್ರದ ಚಿತ್ರೀಕರಣ ಮುಗಿದ ನಂತರ ಶ್ರೀಮುರಳಿ ಮತ್ತು ಮಹೇಶ್ ಕಾಂಬಿನೇಷನ್ ನ ಮದಗಜ ಚಿತ್ರೀಕರಣ ಆರಂಭವಾಗಲಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here